ಕರ್ನಾಟಕ ರಾಜ್ಯ ಮೀಸಲು ಪಡೆಯ ಎಸ್.ಐ. ರಮೇಶ್ ಕಾಂಚನ ಸೇವೆಯಿಂದ ನಿವೃತ್ತಿ

0

ವಿಟ್ಲ: ಕರ್ನಾಟಕ ರಾಜ್ಯ ಮೀಸಲು ಪಡೆಯ ಪೊಲೀಸ್ ಏಳನೇ ಪಡೆ ಮಂಗಳೂರು ಘಟಕದ ಎಸ್.ಐ. ರಮೇಶ್ ಕಾಂಚನರವರು ಜು.31ರಂದು ನಿವೃತ್ತಿ ಹೊಂದಿದರು.
ಕಾಂಚನದ ಪ್ರಸಿದ್ಧ ದೈವ ನರ್ತಕ ದಿ. ದುಗ್ಗ ನಲ್ಕೆ ಮೋಂಟು ದಂಪತಿಗಳ ದ್ವಿತೀಯ ಪುತ್ರರಾಗಿರುವ ರಮೇಶ್ ಕಾಂಚನರವರು ಉಪ್ಪಿನಂಗಡಿ ಬಳಿಯ ಕಾಂಚನದ ಕುಡ್ತಡ್ಕದಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಜತ್ತೂರಿನಲ್ಲಿ(ವಳಾಲು)ಮತ್ತು ಪ್ರೌಢ ಶಿಕ್ಷಣವನ್ನು ಉಪ್ಪಿನಂಗಡಿಯಲ್ಲಿ ಪಡೆದು ಗೃಹ ರಕ್ಷಕರಾಗಿ ಸೇವೆಗೆ ಸೇರಿ ಕೊಂಡಿದ್ದರು.

1989ರಲ್ಲಿ ಖಾನಾಪುರ ಮತ್ತು ಬೆಳಗಾವಿಯಲ್ಲಿ 20 ತಿಂಗಳುಗಳ ಕೆ.ಎಸ್.ಆರ್.ಪಿ. ಪೊಲೀಸ್ ತರಬೇತಿ ಮುಗಿಸಿ ಮೈಸೂರಿನಲ್ಲಿ ಕರ್ತವ್ಯಕ್ಕೆ ಸೇರಿಕೊಂಡರು.
ಸತತ 10 ವರ್ಷಗಳ ಕಾಲ ಕಾಡುಗಳ್ಳ ನರಹಂತಕ ವೀರಪ್ಪನ್ ಎಸ್. ಟಿ. ಎಫ್. ಕಾರ್ಯಾಚರಣೆಯಲ್ಲಿ ಐ.ಪಿ.ಎಸ್.ಶಂಕರ್ ಬಿದರಿ ಪಡೆಯಲ್ಲಿ ಮುಂಚೂಣಿಯಲ್ಲಿದ್ದು ಕರ್ತವ್ಯ ನಿರ್ವಹಿಸಿರುತ್ತಾರೆ. ದೇಶದ ನಾನಾ ರಾಜ್ಯಗಳಲ್ಲಿ ತುರ್ತು ಸೇವೆ, ಚುನಾವಣಾ ಕರ್ತವ್ಯ, ದೊಂಬಿ – ಗಲಭೆ ನಿಯಂತ್ರಣ ಇತ್ಯಾದಿ ಯುದ್ಧೋಪಾದಿ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದಾರೆ.

2012 ರಲ್ಲಿ ಹೆಡ್ಕಾನ್ಸ್ಟೇಬಲ್ ಆಗಿ ಭಡ್ತಿ ಪಡೆದು ಮಂಗಳೂರಿನ ಅಸೈಗೋಳಿಗೆ ವರ್ಗಾವಣೆಗೊಂಡು ಜಿಲ್ಲೆ, ರಾಜ್ಯದ ನಾನಾ ಕಡೆ ವಿಶೇಷ ಸಂದರ್ಭಗಳಲ್ಲಿ ತಮ್ಮ ಪಡೆಯನ್ನು ಸಮರ್ಥವಾಗಿ ಮುನ್ನಡೆಸಿ ಕರ್ತವ್ಯ ನಿಭಾಯಿಸಿರುತ್ತಾರೆ.2017 ರಲ್ಲಿ ಎ.ಎಸ್.ಐ.,2023ರಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಭಡ್ತಿ ಪಡೆದ ಇವರು 34 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಪತ್ನಿ ಮೋಹಿನಿ, ಪುತ್ರಿ ಕೋಟೆಕಾರಿನಲ್ಲಿ ವೈದ್ಯೆಯಾಗಿರುವ ಮನೀಷರೊಂದಿಗೆ ದೇರಳಕಟ್ಟೆಯ ಶಾಸ್ತಾ ನಗರದಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here