





ಪುತ್ತೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ ಇಲ್ಲಿಗೆ ನರಿಮೊಗರು ಗ್ರಾಮ ಪಂಚಾಯತ್ ವತಿಯಿಂದ ನಿರ್ಮಾಣಗೊಂಡ ನೂತನ ಶೌಚಾಲಯದ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ಪಂಚಾಯತಿನ ಉಪಾಧ್ಯಕ್ಷ ಉಮೇಶ್ ರಿಬ್ಬನ್ ಕತ್ತರಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ನರಿಮೊಗರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿಚಂದ್ರ, ಸದಸ್ಯ ದಿನೇಶ್ ಮಜಲು, ಸುಧಾಕರ ಕುಲಾಲ್ ಶಾಲಾ ಎಸ್ ಟಿ ಡಿ ಎಂ ಸಿ ಅಧ್ಯಕ್ಷ ನಾರಾಯಣ,ಕಟ್ಟಡ ಗುತ್ತಿಗೆದಾರ ರಾಜ್ ಕಿರಣ್, ಎಸ್ ಡಿ ಎಂ ಸಿ ಸದಸ್ಯ ಹರೀಶ್, ಮುಖ್ಯ ಶಿಕ್ಷಕ ಫೆಲ್ಸಿಟ ಡಿಕುನ್ಹ ಹಾಗೂ ಶಿಕ್ಷಕ ವೃಂದದವರು ,ಪೋಷಕರು ಉಪಸ್ಥಿತರಿದ್ದರು.












