ಪುತ್ತೂರು: ಮಂಗಳೂರು ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ , ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಾವು ಇದರ ಆಶ್ರಯದಲ್ಲಿ ನವೋದಯ ಸ್ವಸಹಾಯ ಸಂಘಗಳ ಒಕ್ಕೂಟ ಈಶ್ವರಮಂಗಲ, ಇದರ ವತಿಯಿಂದ ನವೋದಯ ಸದಸ್ಯರ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಲಾಭಾಂಶ ವಿತರಣಾ ಕಾರ್ಯಕ್ರಮ ಆ.4ರಂದು ಶ್ರೀ ಗಜಾನನ ಆಂಗ್ಲ ಮಾಧ್ಯಮ ಹನುಮಗಿರಿ ಈಶ್ವರಮಂಗಲದಲ್ಲಿ ಜರುಗಿತು.
ಶ್ರೀ ಗಜಾನನ ಶಾಲಾ ಪ್ರಾಂಶುಪಾಲ ಶ್ಯಾಮಣ್ಣ ದೀಪ ಬೆಳಗಿಸಿ ಮಾತನಾಡಿ, ನವೋದಯ ಒಕ್ಕೂಟದಿಂದ ಉತ್ತಮ ಚಟುವಟಿಕೆಗಳು ನಡೆಯುತ್ತಿರುವುದು ಸಂತೋಷದ ವಿಷಯ. ಮಕ್ಕಳಿಗೆ ಉಚಿತ ಪುಸ್ತಕ ವಿತರಣ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ಶ್ರೀ ಲಕ್ಷ್ಮೀ ತಂಡದ ಗೀತಾ ಅವರಿಗೆ ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ ನಿಂದ ಪರಿಹಾರ ಹಣ ರೂ.10,000 ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳು ವಿತರಿಸಿದರು.
ಮುಖ್ಯ ಅತಿಥಿ ಕೇಂದ್ರ ಸಹಕಾರಿ ಬ್ಯಾಂಕ್ ಈಶ್ವರಮಂಗಲ ಶಾಖೆಯ ವ್ಯವಸ್ಥಾಪಕ ದಾಮೋದರ್ ಮಾತನಾಡಿ 2 ವರ್ಷಗಳಿಂದ ಪುಸ್ತಕ ವಿತರಣೆ ನಡೆಯುತ್ತಿರುವುದು ಉತ್ತಮ ಬೆಳವಣಿಗೆ, ಇದು ನಿರಂತರ ಮುಂದುವರಿಯಲಿ ಎಂದು ಹೇಳಿದರು. ಬ್ಯಾಂಕಿನಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಉದ್ಘಾಟಕ ಶ್ಯಾಮಣ್ಣ ಸಾಂಕೇತಿಕವಾಗಿ 5 ತಂಡಗಳಿಗೆ ಲಾಭಾಂಶ ಚೆಕ್ ವಿತರಿಸಿದರು. ಲಾಭಾಂಶವನ್ನು 24 ತಂಡಗಳು ಪಡೆದಿದ್ದು ಒಟ್ಟು 6,99,599 ರೂ. ಆಗಿರುತ್ತದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಬಡ್ಡಿ ರಿಯಾಯಿತಿ ಹಣವಾಗಿ 23 ತಂಡಗಳಿಗೆ ಒಟ್ಟು 8,81,063 ರೂಪಾಯಿ ಬಂದಿರುತ್ತದೆ.
ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು ತಾಲೂಕು ಮೇಲ್ವಿಚಾರಕ ಚಂದ್ರಶೇಖರ್ ಮಾತನಾಡಿ ಈಶ್ವರಮಂಗಲ ಒಕ್ಕೂಟವು ಉತ್ತಮ ಚಟುವಟಿಕೆಗಳಿಂದ ಮುಂದುವರಿಯುತ್ತಿದ್ದು ಸಂತೋಷವಾಗಿದೆ. ನನಗೆ ಒಕ್ಕೂಟದ ಕಾರ್ಯಕ್ರಮಗಳಿಗೆ ಬರುವುದು ಖುಷಿಯಾಗುತ್ತದೆ ಎಂದು ಹೇಳಿದರು. ಉತ್ತಮ ಒಕ್ಕೂಟವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಮೇಲ್ವಿಚಾರಕ ಚಂದ್ರಶೇಖರ್ ಹೊಸ (ತುಳಸಿ ಕುತ್ಯಾಳ) ತಂಡದವರಿಗೆ ನಿರ್ಣಯ ಪುಸ್ತಕ ಹಸ್ತಾಂತರಿಸುವ ಮುಖಾಂತರ ಉದ್ಘಾಟಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿರುವ ಒಕ್ಕೂಟದ ಅಧ್ಯಕ್ಷ ರತ್ನಕುಮಾರ್ ಮಾತನಾಡಿ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರ ಸಹಕಾರದಿಂದ ಈಗ 2 ವರ್ಷಗಳಿಂದ ನಿರಂತರ ಕಾರ್ಯಕ್ರಮ ಆಯೋಜಿಸಲು ಅನುಕೂಲವಾಯಿತು. ಮೇಲ್ವಿಚಾರಕರು ಹಾಗೂ ಪ್ರೇರಕಿಯವರ ಮಾರ್ಗದರ್ಶನ ನಮಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು. ರಾಷ್ಟ್ರಮಟ್ಟದಲ್ಲೂ ಸಹಕಾರಿ ರಂಗ ಹೆಸರು ಪಡೆದಿದೆ ಎಂದು ಹೇಳಿದರು.
ಮಧುರಾ ತಂಡ ಇಂದಿನ ಜವಾಬ್ದಾರಿ ವಹಿಸಿತ್ತು. .ಶೋಭಿತಾ ಮತ್ತು ನಿಶ್ಮಿತಾ ಪ್ರಾರ್ಥಿಸಿದರು.ಪಂಚಮಿ ತಂಡದ ಹರೀಶ್ ಸ್ವಾಗತಿಸಿದರು. ಪ್ರೇರಕಿ ಮಾಧವಿಯವರು ಲಾಭಾಂಶದ ಪಟ್ಟಿ ವಾಚಿಸಿದರು. ಮೇಲ್ವಿಚಾರಕ ಚಂದ್ರಶೇಖರ್ ವಂದನಾರ್ಪಣೆ ನಡೆಯಿತು. ಒಕ್ಕೂಟದ ಜೊತೆ ಕಾರ್ಯದರ್ಶಿ ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.ಒಕ್ಕೂಟದ ಕಾರ್ಯದರ್ಶಿ ಜಲಜಾಕ್ಷಿ ಯವರು ಸಹಕರಿಸಿದರು.