ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು ಚೂರಿಯಿಂದ ಇರಿದು ಪರಾರಿಯಾಗಿದ್ದ ಆರೋಪಿಗಳ ಪೈಕಿ ಮೂವರನ್ನು ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಹಾಗೂ ಎಸ್.ಐ.ರಾಮಕೃಷ್ಣರವರ ನೇತ್ರತ್ವದ ತಂಡ ಬಂಧಿಸಿದೆ.
ಬಂಟ್ವಾಳ ನಿವಾಸಿಗಳಾದ ಅಶ್ವಥ್, ಶರಣ್ ಮತ್ತು ವಸಂತ ಬಂಧಿತ ಆರೋಪಿಗಳಾಗಿದ್ದು, ಪ್ರಕರಣದ ಪ್ರಮುಖ ಆರೋಪಿಯ ಸಹಿತ ಇತರ ಆರೋಪಿಗಳಿಗಾಗಿ ಬಂಟ್ವಾಳ ಪೋಲೀಸರು ಬಲೆ ಬೀಸಿದ್ದು ಕಾರ್ಯಚರಣೆ ಮುಂದುವರಿದಿದೆ.
ಘಟನೆಯಲ್ಲಿ ಪೃಥ್ವಿರಾಜ್ ಮತ್ತು ವಿನೀತ್ ಅವರು ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಬಂಟ್ವಾಳದ ಬೈಪಾಸ್ ರಸ್ತೆ ಬದಿಯಲ್ಲಿ ಎರಡು ತಂಡಗಳ ನಡುವೆ ಪರಸ್ಪರ ಗಲಾಟೆ ನಡೆದಿದೆ.
ಮುಂದುವರಿದು ಚೂರಿಯಿಂದ ಇರಿದು ಒಂದು ತಂಡ ಪರಾರಿಯಾಗಿತ್ತು. ಗಾಯಗೊಂಡ ಯುವಕರನ್ನು ಆರಂಭದಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮತ್ತೆ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.