ಬಾಂಗ್ಲಾ ಸಹಿತ ಜಗತ್ತಿನೆಲ್ಲೆಡೆ ನಡೆಯುತ್ತಿರುವ ಅಶಾಂತಿ- ವಿಶ್ವ ಶಾಂತಿಗಾಗಿ ಪ್ರಾರ್ಥನೆ, ಗಂಗಾಪೂಜೆ

0

ಉಪ್ಪಿನಂಗಡಿ: ಬಾಂಗ್ಲಾ ಸಹಿತ ಜಗತ್ತಿನೆಲ್ಲೆಡೆ ನಡೆಯುತ್ತಿರುವ ಅಶಾಂತಿ ಅಹಿತಕರ ಘಟನೆಗಳ ನಡುವೆ ವಿಶ್ವದ ಒಳಿತಿಗಾಗಿ ಹಾಗೂ ವಿಶ್ವ ಶಾಂತಿಗಾಗಿ ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ಆಶ್ರಯದಲ್ಲಿ ಮಂಗಳವಾರ ಸಾಮೂಹಿಕ ಪ್ರಾರ್ಥನೆ ಮತ್ತು ಗಂಗಾ ಪೂಜೆ ನೆರವೇರಿತು.


ಬಾಂಗ್ಲಾ ದೇಶದಲ್ಲಿ ರಾಜಕೀಯ ಕಾರಣದಿಂದ ಮೂಡಿದ್ದ ಜನಾಕ್ರೋಶ ನಿರುಪದ್ರವಿ ಹಿಂದೂ ಸಮಾಜದ ಮೇಲೆ, ಹಿಂದೂ ಶ್ರದ್ದಾ ಕೇಂದ್ರಗಳ ಮೇಲೆ ದಾಳಿ, ಹತ್ಯೆ , ಅತ್ಯಾಚಾರದಂತಹ ರಾಕ್ಷಸೀ ಕೃತ್ಯಗಳಿಗೆ ಕಾರಣವಾಗಿ ಮನುಕುಲವನ್ನು ತಲ್ಲಣಗೊಳಿಸಿದೆ. ಅಸಹಾಯಕ ಸಮಾಜವನ್ನು ರಕ್ಷಿಸುವಲ್ಲಿ ಈ ಮಣ್ಣಿನಲ್ಲಿ ನೆಲೆ ನಿಂತ ಶಕ್ತಿಗಳು ಮುಂದಾಗಬೇಕು. ದುಷ್ಟ ಶಕ್ತಿಯನ್ನು ನಿಗ್ರಹಿಸಿ ವಿಶ್ವದೆಲ್ಲೆಡೆ ಶಾಂತಿ ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ದೈವೀಶಕ್ತಿಗಳ ಪ್ರೇರಣೆ ಲಭಿಸಬೇಕೆಂದು ಶ್ರೀ ಮಹಾಕಾಳಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ , ನೇತ್ರಾವತಿ ಕುಮಾರಧಾರಾ ನದಿಯಲ್ಲಿ ಗಂಗಾ ಮಾತೆ ಹಾಗೂ ಪ್ರಕೃತಿ ಮಾತೆಯನ್ನು ಸ್ಮರಿಸಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಬಳಿಕ ನದಿಯಲ್ಲಿ ಹಣತೆಗಳನ್ನು ತೇಲಿ ಬಿಡುವ ಮೂಲಕ ಗಂಗಾಪೂಜೆಯನ್ನು ನೆರವೇರಿಸಲಾಯಿತು.


ಈ ಸಂಧರ್ಭದಲ್ಲಿ ಶ್ರೀಕಾಳಿಕಾಂಬಾ ಭಜನಾ ಮಂಡಳಿಯ ಅಧ್ಯಕ್ಷ ಶರತ್ ಕೋಟೆ, ಪ್ರಧಾನ ಕಾರ್ಯದರ್ಶಿ ಮಾಧವ ಆಚಾರ್ಯ, ಜೊತೆ ಕಾರ್ಯದರ್ಶಿ ಪ್ರಶಾಂತ್ ನೆಕ್ಕಿಲಾಡಿ, ಪ್ರಮುಖರಾದ ಸುಧಾಕರ ಶೆಟ್ಟಿ, ಸುಂದರ ಆದರ್ಶ ನಗರ , ಕಂಗ್ವೆ ವಿಶ್ವನಾಥ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ , ನಾಗರಾಜ ಯು., ಕೃಷ್ಣ ಯು., ಕೃಷ್ಣಪ್ರಸಾದ್ ದೇವಾಡಿಗ, ಸುನೀಲ್ ಸಂಗಮ್, ಚಂಪಾ ರಘುರಾಮ, ಸುಜಯಾ ಶರತ್, ಯಶೋಧಾ, ಮಾಲತಿ ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here