ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

0

ಬರೆ ಚಿಕ್ಕೋಡಿ ರಸ್ತೆ ಬದಿ ತಡೆಗೋಡೆ ರಚನೆಗೆ ವಿಶೇಷ ಅನುದಾನ ಬಿಡುಗಡೆಗೆ ಸರಕಾರಕ್ಕೆ ಬರೆಯಲು ನಿರ್ಣಯ


ನಿಡ್ಪಳ್ಳಿ;ಸಾಮಾನ್ಯ ಸಭೆ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ರವರ ಅಧ್ಯಕ್ಷತೆಯಲ್ಲಿ ಆ.7 ರಂದು ನಡೆಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಟೇಲು ಬರೆ ಚಿಕ್ಕೋಡಿ ನಿಡ್ಪಳ್ಳಿ ಶಾಲೆ ಹೋಗುವ ರಸ್ತೆಯ ಬದಿ ತಡೆಗೋಡೆ ರಚನೆಗೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಬರೆಯಲು ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.

ಗ್ರಾಮಸ್ಥ ಗಂಗಾಧರ ಎಂಬವರು ತಡೆಗೋಡೆ ರಚನೆಗೆ ಕ್ರಮ ಕೈಗೊಳ್ಳಲು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಬರೆದ ಮನವಿಗೆ ಸ್ಪಂದಿಸಿದ ಪ್ರಧಾನ ಮಂತ್ರಿ ಕಾರ್ಯಾಲಯ ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗೆ ನೀಡಿದ ಸೂಚನೆಯಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಂದ ಗ್ರಾಮ ಪಂಚಾಯತಿಗೆ ಬಂದ ಪತ್ರದ ಬಗ್ಗೆ ಸಭೆಗೆ ತಿಳಿಸಿದ ಪಿಡಿಒ ಸ್ಥಳ ಪರಿಶೀಲನೆ ಮಾಡಿ ಸಮಸ್ಯೆಯನ್ನು ಬಗೆಹರಿಸಿ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಬಂದ ಪತ್ರದ ಬಗ್ಗೆ ಚರ್ಚೆ ನಡೆಸಿದ ಸಭೆಯಲ್ಲಿ ಇದರ ಕಾಮಗಾರಿಗೆ‌ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಬರೆಯಲು ನಿರ್ಧರಿಸಲಾಯಿತು.


‌ಅದರಂತೆ ಮುಖ್ಯ ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಬರೆಯುವುದು.ವಿಜಯನಗರದಿಂದ ಮುಡ್ಪಿನಡ್ಕ ಮತ್ತು ತಂಬುತ್ತಡ್ಕ ನುಳಿಯಾಲುವರೆಗೆ ಮುಖ್ಯ ರಸ್ತೆ ಬದಿ ಅಪಾಯಕಾರಿ ಮರಗಳು ಇದೆ. ಮರಗಳು ಗಾಳಿ ಮಳೆಗೆ ಬಿದ್ದರೆ ವಿದ್ಯುತ್ ಲೈನಿಗೂ ಹಾನಿ ಉಂಟಾಗುವ ಸಾಧ್ಯತೆ ಇರುವುದರಿಂದ ಮುಖ್ಯ ರಸ್ತೆಯ ಉದ್ದಕ್ಕೂ ಇರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಪತ್ರ ಬರೆಯಲು ನಿರ್ಣಯಿಸಲಾಯಿತು.


ZBT ಘಟಕಕ್ಕೆ ನಿರಾಕ್ಷೇಪಣಾ ಪತ್ರ;
ಗ್ರಾಮದ ಸ.ನಂ.253/2A1 ರಲ್ಲಿ 0.21 ಎಕ್ರೆ ಸರಕಾರಿ ಜಮೀನನ್ನು ZBT ಘಟಕ ಉದ್ದೇಶಕ್ಕೆ ಕಾದಿರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋರಿದ್ದು ಅದು ತಯಾರಿಕಾ ಹಂತದಲ್ಲಿರುತ್ತದೆ. ಆದುದರಿಂದ ಸದ್ರಿ ಜಮೀನನ್ನು ಕಾಯ್ದಿರಿಸುವಿಕೆಗೆ ಪಂಚಾಯತಿನಿಂದ ನಿರಾಕ್ಷೇಪಣಾ ಪತ್ರ ನೀಡುವಂತೆ ಗ್ರಾಮ ಆಡಳಿತ ಅಧಿಕಾರಿ ಬರೆದ ಪತ್ರದ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರಾಕ್ಷೇಪಣಾ ಪತ್ರ ನೀಡಲು ನಿರ್ಣಯಿಸಲಾಯಿತು.

  • ನರೇಗಾ ಯೋಜನೆ ಮತ್ತು 15 ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆ ನ.4 ರಿಂದ ನ.4 ರಿಂದ ನ.11 ರವರೆಗೆ ನಡೆಯಲಿದೆ ಎಂದು ಪಿಡಿಒ ತಿಳಿಸಿದರು.
    ಉಪಾಧ್ಯಕ್ಷೆ ಸೀತಾ, ಸದಸ್ಯರಾದ ಅವಿನಾಶ್ ರೈ ಕುಡ್ಚಿಲ, ಬಾಲಚಂದ್ರ ಕುಜುಂಬೋಡಿ, ಗೀತಾ.ಡಿ, ನಂದಿನಿ ಅರ್.ರೈ, ಗ್ರೆಟಾ ಡಿ’ ಸೋಜಾ ಉಪಸ್ಥಿತರಿದ್ದರು. ಪಿಡಿಒ ಸಂಧ್ಯಾಲಕ್ಷ್ಮೀ ಸ್ವಾಗತಿಸಿ ವಂದಿಸಿದರು.ಸಿ.ಹೆಚ್.ಒ ಲಕ್ಷ್ಮೀ, ಆಶಾ ಕಾರ್ಯಕರ್ತೆಯರು ಪಾಲ್ಗೊಂಡರು. ಸಿಬ್ಬಂದಿಗಳಾದ ಸಂಶೀನಾ, ರೇವತಿ, ವಿನೀತ್ ಕುಮಾರ್, ಜಯ ಕುಮಾರಿ ಸಹಕರಿಸಿದರು.
  • ಗ್ರಾಮ ಸಭೆ ಆ.14 ರಂದು ಪಂಚಾಯತ್ ಸಮುದಾಯ ಭವನದಲ್ಲಿ ನಡೆಸುವುದೆಂದು ನಿರ್ಣಯಿಸಲಾಯಿತು.

LEAVE A REPLY

Please enter your comment!
Please enter your name here