ಕಡಬ: ಕಡಬ ಪ್ರಖಂಡ ವಿ.ಹಿಂ.ಪ.ವತಿಯಿಂದ ಸೆ.1ರಂದು ಕಡಬದಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಆ.10ರಂದು ಕಡಬ ಧರ್ಮಶ್ರೀ ವಿ.ಹಿಂ.ಪ.ಕಾರ್ಯಾಲಯದಲ್ಲಿ ನಡೆಯಿತು.
ಆಮಂತ್ರಣ ಪತ್ರಿಕೆಯನ್ನು ನಿವೃತ್ತ ಅರಣ್ಯ ಇಲಾಖೆಯ ಅಧಿಕಾರಿ ಸದಾಶಿವ ಭಟ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಡಬ ವಿ.ಹಿಂ.ಪ.ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಕಡಬ, ವಿ.ಹಿಂ.ಪ. ಬಜರಂಗದಳ ಸಂಯೋಜಕ ಅಶ್ವಿತ್ ಖಂಡಿಗ ಪ್ರಮುಖರಾದ ಅರುಣ್ ಕುಮಾರ್ ಜಡೆಮನೆ, ಅರುಣ್ ಕುಮಾರ್ ಪಿಜಕಳ, ಪುತ್ತೂರು ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಕೇಂದ್ರದ ನಿರ್ದೇಶಕ ಭಾಸ್ಕರ ಬಾರ್ಯ ಉಪಸ್ಥಿತರಿದ್ದರು.
ವಿ.ಹಿಂ.ಪ ಕಾರ್ಯದರ್ಶಿ ಜಯಂತ್ ಕಲ್ಲುಗುಡ್ಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೇಮಲತಾ ವಾಸುದೇವ ಕೇಪುಂಜ ವಂದನಾರ್ಪಣೆ ಸಲ್ಲಿಸಿದರು, ಪ್ರಮೀಳಾ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು.
ಯಕ್ಷಗಾನ ತಾಳಮದ್ದಲೆ-ಜಾಂಬವತಿ ಕಲ್ಯಾಣ
ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮದ ಬಳಿಕ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ವತಿಯಿಂದ ಯಕ್ಷಗಾನ ತಾಳಮದ್ದಳೆ ” ಜಾಂಬವತಿ ಕಲ್ಯಾಣ. ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಮುರಳಿಕೃಷ್ಣ ತೆಂಕಬೈಲು, ಚೆಂಡೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಮದ್ದಲೆಯಲ್ಲಿ ಪದ್ಯಾಣ ಜಯರಾಮ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾಅಡಿಗ ( ಶ್ರೀ ಕೃಷ್ಣ ) ಶುಭಾ ಗಣೇಶ್ ( ಬಲರಾಮ ) ಕಿಶೋರಿ ದುಗ್ಗಪ್ಪ ನಡುಗಲ್ಲು ( ಜಾಂಬವ ) ಪಾತ್ರದಲ್ಲಿ ಸಹಕರಿಸಿದರು. ಭಾಸ್ಕರ್ ಬಾರ್ಯ ನಿರ್ದೇಶಿಸಿದರು.