ಪಾಣಾಜೆ: ಬಂಟರ ಸಂಘ ಪಾಣಾಜೆ ವತಿಯಿಂದ ‘ಬಂಟೆರೆನ ಆಟಿಡೊಂಜಿ ದಿನ’ ಕಾರ್ಯಕ್ರಮ ಆ. 11 ರಂದು ಸೂರಂಬೈಲು ತರವಾಡು ಮನೆಯಲ್ಲಿ ನಡೆಯಿತು.
ಹಿರಿಯರಾದ ನಾರಾಯಣ ರೈ ಸೂರಂಬೈಲು, ವಿಠಲ ರೈ ಕಡಮ್ಮಾಜೆ, ಜಗನ್ಮೋಹನ ರೈ ಕೆದಂಬಾಡಿ, ಕಿಟ್ಟಣ್ಣ ಶೆಟ್ಟಿ ಕೋಟೆ, ಸೀತಾರಾಮ ರೈ ಪಡ್ಯಂಬೆಟ್ಟು ಹಾಗೂ ಜತ್ತಪ್ಪ ರೈ ಕೊಂಡೆಪ್ಪಾಡಿಯವರು ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಚಾಲನೆ ನೀಡಿದರು.
ಬಳಿಕ ಮಕ್ಕಳಿಗೆ, ಮಹಿಳೆಯರಿಗೆ ಮಹನೀಯರಿಗೆ ವಿವಿಧ ಆಟೋಟ ಸ್ಪರ್ಧೆ ಹಾಗು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸೂರಂಬೈಲು ತರವಾಡು ಟ್ರಸ್ಟ್ ಅಧ್ಯಕ್ಷ, ಹಿರಿಯರಾದ ಆನಂದ ರೈ ಸೂರಂಬೈಲು ಆಟಿದ ವಿಶೇಷದ ಬಗ್ಗೆ ಮಾತನಾಡಿದರು. ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ರವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಾಣಾಜೆ ಬಂಟರ ಸಂಘದ ಅಧ್ಯಕ್ಷ ಜಗನ್ಮೋಹನ ರೈ ಸೂರಂಬೈಲುರವರು ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ರೈ ಕೆದಂಬಾಡಿ ಸ್ವಾಗತಿಸಿ, ಕೋಶಾಧಿಕಾರಿ ಸುಧಾಕರ ರೈ ಗಿಳಿಯಾಲು ವಂದಿಸಿದರು. ಪ್ರಧಾನ ಕಾರ್ಯದರ್ಶಿ ರಮಾನಾಥ ರೈ ಪಡ್ಯಂಬೆಟ್ಟು ವರದಿ ವಾಚಿಸಿದರು.
ಪ್ರಶಸ್ತಿ ಪ್ರದಾನ
ಪ್ರತಿಭಾನ್ವಿತ ಪ್ರಶಸ್ತಿಯನ್ನು ಧನ್ವಿ ರೈ ಕೋಟೆ, ತನ್ವಿ ಶೆಟ್ಟಿ ಮತ್ತು ಕೃತಿ ರೈಯವರಿಗೆ ನೀಡಲಾಯಿತು. ಕ್ರೀಡಾ ಪ್ರಶಸ್ತಿಯನ್ನು ರಿತ್ವಿ ರೈ, ದೇಶ ಸೇವಾ ಪ್ರಶಸ್ತಿಯನ್ನು ಮಾಜಿ ಸೈನಿಕ ರಮಾನಾಥ ರೈ ಪಡ್ಯಂಬೆಟ್ಟು, ಸಮಾಜ ಸೇವಾ ಪ್ರಶಸ್ತಿಯನ್ನು ಯತಿರಾಜ್ ಶೆಟ್ಟಿ, ಯತೀಶ್ ರೈ ಮತ್ತು ಸಂಜೀವ ರೈಯವರಿಗೆ, ಧಾರ್ಮಿಕ ಪ್ರಶಸ್ತಿಯನ್ನು ಸೀತಾರಾಮ ರೈ ಕೊಂದಲ್ಕಾನ ಮತ್ತು ಕಲಾ ಪ್ರಶಸ್ತಿಯನ್ನು ದೀಪಕ್ ರೈ ಪಾಣಾಜೆಯವರಿಗೆ ನೀಡಿ ಗೌರವಿಸಲಾಯಿತು.