ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಪುತ್ತೂರು ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಆ.9ರಂದು ಸಂತ ವಿಕ್ಟರನ ಬಾಲಿಕಾ ಪ್ರೌಢ ಶಾಲೆ, ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಆಫಿಸರ್ಸ್ ಕ್ಲಬ್ ದರ್ಬೆ ಪುತ್ತೂರು ಇಲ್ಲಿ ನಡೆಯಿತು. ಈ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪ್ರೌಢ ಶಾಲಾ ವಿಭಾಗದ ಬಾಲಕಿಯರ ತಂಡ ಮತ್ತು ಪ್ರಾಥಮಿಕ ವಿಭಾಗದ ಬಾಲಕರ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಪ್ರೌಢ ಶಾಲಾ ವಿಭಾಗದ ಬಾಲಕಿಯರ ತಂಡ ವಿಭಾಗದಲ್ಲಿ 10ನೇ ತರಗತಿಯ ಸಮನ್ಮಿತಾ.ಕೆ (ಶ್ರೀ ಕಿಶೋರ್ ಕುಮಾರ್ ಮತ್ತು ರೂಪಶ್ರೀ ದಂಪತಿ ಪುತ್ರಿ), 9ನೇ ತರಗತಿಯ ಕೀರ್ತನಾ ವರ್ಮ(ಶ್ರೀ ಪ್ರತಾಪ ಸಿಂಹ ವರ್ಮ ಮತ್ತು ವೀಣಾ ಕುಮಾರಿ ದಂಪತಿ ಪುತ್ರಿ), 9ನೇ ತರಗತಿಯ ಯೋಗಿತಾ(ಶ್ರೀ ಚೆನ್ನಪ್ಪ ಗೌಡ ಮತ್ತು ಯಶಕಲಾ ದಂಪತಿ ಪುತ್ರಿ) ಮತ್ತು 9ನೇ ತರಗತಿಯ ಯಶಿಕಾ(ಶ್ರೀ ಸುರೇಶ್.ಎನ್ ಮತ್ತು ಸುಪ್ರಿಯಾ ದಂಪತಿ ಪುತ್ರಿ) ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಪ್ರಾಥಮಿಕ ವಿಭಾಗದ ಬಾಲಕರ ವಿಭಾಗದಲ್ಲಿ 7ನೇ ತರಗತಿಯ ಅದ್ಯಾನ್.ಆರ್(ಶ್ರೀ ರಂಜಿತ್ ಮತ್ತು ವತ್ಸಲ ದಂಪತಿ ಪುತ್ರ) , ಜಶ್.ಎಚ್.ಬಿ(ಶ್ರೀ ಹೇಮಚಂದ್ರ ಮತ್ತು ಶುಭಶ್ರೀ ದಂಪತಿ ಪುತ್ರ) , ಪ್ರಣವ ಹೆಬ್ಬಾರ್(ಶ್ರೀ ಕೆ ರಾಜೇಂದ್ರ ಹೆಬ್ಬಾರ್ ಮತ್ತು ಸುಧಾ ದಂಪತಿ ಪುತ್ರ) , ಯಶ್ವಿತ್.ಎ.ಆರ್(ಶ್ರೀ ಆನಂದ್ ಮತ್ತು ರೂಪದೇವಿ ದಂಪತಿ ಪುತ್ರ ) ಪ್ರಥಮ ಸ್ಥಾನ ಪಡೆದಿರುತ್ತಾರೆ ಹಾಗೂ ಪ್ರಾಥಮಿಕ ವಿಭಾಗದ ಬಾಲಕಿಯರ ವಿಭಾಗದಲ್ಲಿ 6ನೇ ತರಗತಿಯ ಆರ್ ಅನ್ವಿಕರಾಜ್(ಶ್ರೀ ರಾಜೇಶ್.ಎ ಮತ್ತು ಅಶ್ವಿನಿ ರಾಜೇಶ್ ದಂಪತಿ ಪುತ್ರಿ) , 7ನೇ ತರಗತಿಯ ಸಾನ್ವಿ ಆನಂದ್(ಶ್ರೀ ಆನಂದ್ ಮತ್ತು ವಾಣಿಶ್ರೀ.ಎನ್ ದಂಪತಿ ಪುತ್ರಿ), 7ನೇ ತರಗತಿಯ ಚಾರ್ವಿ ನಾಯಕ್(ಶ್ರೀ ಅನಿಲ್ ನಾಯಕ್ ಮತ್ತು ಸಂಗೀತ ದಂಪತಿ ಪುತ್ರಿ) , 7ನೇ ತರಗತಿಯ ಜಶಿಕಾ(ಶ್ರೀ ಹರೀಶ್ ಗೌಡ ಮತ್ತು ಯಶೋಧ ದಂಪತಿ ಪುತ್ರಿ) ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.