ಸವಣೂರು : ನಮ್ಮ ಹಿರಿಯರ ಹೋರಾಟದ ಪರಿಣಾಮವಾಗಿ ನೆಮ್ಮದಿ ಶಾಂತಿ ಯಿಂದ ಬದುಕುತ್ತಿದ್ದೇವೆ.ಧರ್ಮ, ಸಂಸ್ಕೃತಿ ಉಳಿದರೆ ಮಾತ್ರ ಈ ದೇಶ ಸಂಪತ್ಪರಿತವಾಗಿ ಮೆರೆಯಲು ಸಾಧ್ಯ ಎಂದು ಸವಣೂರು ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ ಹೇಳಿದರು.
ಅವರು ಸವಣೂರು ಯುವ ಸಭಾಭವನದಲ್ಲಿ ಸವಣೂರು ಹಿಂದೂ ಜಾಗರಣ ವೇದಿಕೆಯ ವತಿಯಿಂದ ಆ.14ರಂದು ರಾತ್ರಿ ನಡೆದ ಭಾರತ ಮಾತಾ ಪೂಜನಾ ಕಾರ್ಯಕ್ರಮ ಮತ್ತು ಅಖಂಡ ಭಾರತ ಸಂಕಲ್ಪ ದಿನ ,ಬೃಹತ್ ಪಂಜಿನ ಮೆರವಣಿಗೆಯ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ದೇಶದ ಏಕತೆಗೆ ಧಕ್ಕೆಯುಂಟಾದಾಗ ಹೋರಾಟವನ್ನು ಮಾಡಿಯೇ ಸಿದ್ದ.ನಮ್ಮ ಶ್ರೀಮಂತ ಪರಂಪರೆ ಕಾಬೂಲ್ ವರೆಗೆ ವಿಸ್ತರಿಸಿತು.ವಿಜಯನಗರ ಸಾಮ್ರಾಜ್ಯದಲ್ಲಿ ಸಂಸ್ಕಾರಯುತ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ಸಿಕ್ಕಿದ ಪರಿಣಾಮವಾಗಿ ಸಂಪದ್ಭರಿತವಾಗಿತ್ತು .ಇತಿಹಾಸದ ಕಥೆಗಳು ನಮ್ಮನ್ನು ಜಾಗೃತಗೊಳಿಸಿದೆ.ಈ ನಿಟ್ಟಿನಲ್ಲಿಸತ್ಯ ಧರ್ಮದ ಪರಂಪರೆಯ ಮರುಸ್ಥಾಪನೆಗೆ ಎಲ್ಲರೂ ಕಟಿಬದ್ದರಾಗಬೇಕು ಎಂದರು.
ಹಿಂದೂ ಜಾಗರಣ ವೇದಿಕೆಯ ಪುತ್ತೂರು ನಗರ ಘಟಕದ ಗೌರವಾಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸೈನಿಕ ಮೋನಪ್ಪ ಗೌಡ ಕುಮಾರಮಂಗಲ ಉದ್ಘಾಟಿಸಿದರು.ಕೀರ್ತನ್ ಕೋಡಿಬೈಲು, ಬಾಬು ದೇವಸ್ಯ,ಪ್ರಕಾಶ್ ಮಾಲೆತ್ತಾರು ಅತಿಥಿಗಳನ್ನು ಗೌರವಿಸಿದರು.
ಮಾಂತೂರಿನಿಂದ ಸವಣೂರುವರೆಗೆ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ನೂರಾರು ಮಂದಿ ಪಾಲ್ಗೊಂಡಿದ್ದರು.ರಕ್ಷಾ ಸುಣ್ಣಾಜೆ ವಂದೇ ಮಾತರಂ ಹಾಡಿದರು.ಸವಣೂರು ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಶ್ರೀಧರ ಇಡ್ಯಾಡಿ ಸ್ವಾಗತಿಸಿ,ಸವಣೂರು ಯುವಕ ಮಂಡಲದ ಅಧ್ಯಕ್ಷ ಜಿತಾಕ್ಷ ಜಿ.ವಂದಿಸಿದರು. ರಾಜೇಶ್ ಇಡ್ಯಾಡಿ ಕಾರ್ಯಕ್ರಮ ನಿರೂಪಿಸಿದರು.