ಬುಳೇರಿಕಟ್ಟೆ: ಮೊಗೇರ ಗೇಟ್‌ವೇ ಸಂಘಟನೆಯಿಂದ ಸ್ವಾತಂತ್ರ್ಯ ದಿನಾಚರಣೆ, ಸನ್ಮಾನ ಕಾರ್ಯಕ್ರಮ

0

ಪುತ್ತೂರು: ಬಲ್ನಾಡು ಗ್ರಾಪಂ ವ್ಯಾಪ್ತಿಯ ಬುಳೇರಿಕಟ್ಟೆ ಮೊಗೇರ ಗೇಟ್ ವೇ ವತಿಯಿಂದ 78 ನೇ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಪನೆತ್ತಡ್ಕ ಪಕೀರ ಮೊಗೇರರವರ ಮನೆಯಂಗಳದಲ್ಲಿ ನಡೆದ 3 ವರ್ಷದ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರರವರು ಧ್ವಜಾರೋಹಣ ನೆರವೇರಿಸಿ ಶುಭ ಸಂದೇಶ ನೀಡಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವೈಟ್‌ಲಿಫ್ಟಿಂಗ್ ಪ್ರತಿಭೆ ಚಮೀಷಾ ಭಂಡಾರಿಕೆರೆ ಮತ್ತು ಗೀತೆ ರಚನೆಕಾರ ವಿಶ್ವನಾಥ ಸಾರ್ಯರವರನ್ನು ಸನ್ಮಾನಿಸಿ ಗೌರವಿಸಲಾಯಿತು.ಅತಿಥಿಗಳಾಗಿ ರಂಗಭೂಮಿ ಮತ್ತು ಸಿನಿಮಾ ಕಲಾವಿದರಾದ ರವಿ ರಾಮಕುಂಜ, ಪತ್ರಕರ್ತ ಸಿಶೇ ಕಜೆಮಾರ್, ವಿವೇಕಾನಂದ ಕಾಲೇಜಿನ ಗ್ರಂಥಾಲಯ ಸಹಾಯಕ ಸುಂದರ ಸಾರ್ಯರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಹಿರಿಯ ಪ್ರಗತಿಪರ ಕೃಷಿಕ ಪಕೀರ ಮೊಗೇರ ಉಪಸ್ಥಿತರಿದ್ದರು. ಸ್ವಾತಂತ್ರ್ಯೋತ್ಸವದ ಅಂಗವಾಡಿ ನಡೆದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನ ಕೊಟ್ಟು ಗೌರವಿಸಲಾಯಿತು. ಮೊಗೇರ ಗೇಟ್ ವೇ ಸಂಘಟನೆಯ ರೂವಾರಿ ಅಶೋಕ್ ಪನೆತ್ತಡ್ಕ, ಕಾರ್ಯಕ್ರಮಕ್ಕೆ ವಿವಿಧ ರೀತಿಯಲ್ಲಿ ಪ್ರಾಯೋಜಕತ್ವ ವಹಿಸಿದ್ದ ಅಶೋಕ ಭಂಡಾರಿಕೆರೆ, ಸುಂದರ ಸಾರ್ಯ, ಚಂದ್ರಶೇಖರ ಸಾರ್ಯ, ಜಗದೀಶ ಸಾರ್ಯ, ಬಲ್ನಾಡು ಗ್ರಾಪಂ ಸದಸ್ಯೆ ಚಂದ್ರಾವತಿ ಭಂಡಾರಿಕೆರೆ, ದೀಪಿಕಾ ಜಯಂತ್, ಸುದೇಶ್ ಪನೆತ್ತಡ್ಕರವರುಗಳನ್ನು ಸ್ಮರಣಿಕೆ ಕೊಟ್ಟು ಗೌರವಿಸಲಾಯಿತು. ಮೊಗೇರ ಗೇಟ್‌ವೇ ಸಂಘಟನೆಯ ಉಮೇಶ್ ಭಂಡಾರಿಕೆರೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ವಂದಿಸಿದರು.ರಮೇಶ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here