ಬೊಬ್ಬೆಕೇರಿ ಶಾಲೆಯಲ್ಲಿ 78 ನೇ ಸ್ವಾತಂತ್ರ್ಯೋತ್ಸವ

0

ಕಾಣಿಯೂರು: ಬೊಬ್ಬೆಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸದಾನಂದ ಕಡಿರ ಅವರು ಧ್ವಜಾರೋಹಣ ನೆರವೇರಿಸಿದರು. ಕಾಣಿಯೂರು ಕ್ಲಸ್ಟರ್ ಸಿ ಆರ್ ಪಿ ಯಶೋದ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಕಾರ್ಯದರ್ಶಿ ಅಶ್ವಿನ್ ಕರಿಮಜಲು, ಕೋಶಾಧಿಕಾರಿ ಸುಕುಮಾರ್ ಕಲ್ಪಡ, ಚಿಣ್ಣರ ಮಂಟಪದ ಅಧ್ಯಕ್ಷ, ನಿವೃತ್ತ ಸೈನಿಕ ಮಹೇಶ್ ಪೈಕ, ನಿವೃತ್ತ ಮುಖ್ಯಶಿಕ್ಷಕ ಸೋಮಪ್ಪ ಗೌಡ, ನಿವೃತ್ತ ಸೈನಿಕ ಗಿರಿಧರ ಕಡಿರ, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ರಾಮಣ್ಣ ಗೌಡ ಮುಡಾಯಿಮಜಲು, ದಿನೇಶ್ ಮಾಳ, ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ, ಶಿಕ್ಷಕರಾದ ಜನಾರ್ದನ ಹೇಮಳ, ಗೀತಾ ಕುಮಾರಿ, ಶೋಭಿತಾ, ಸುರೇಖಾ, ಶೃತಿ, ದಿವ್ಯಾ, ಸುಶ್ಮಿತಾ, ಜಯಲತಾ ಹಾಗೂ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ಸ್ವಾತಂತ್ರ್ಯೋತ್ಸವದ ಮೆರವಣಿಗೆ ನಡೆಯಿತು.

LEAVE A REPLY

Please enter your comment!
Please enter your name here