ರಾಮಕುಂಜ ಸ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ನೆಲ್ಯಾಡಿ: 78 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು.ರಾಮಕುಂಜ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದ ದ್ವಜಾರೋಹಣ ಕಾರ್ಯಕ್ರಮವನ್ನು ಹಿರಿಯ ಪ್ರಗತಿಪರ ಕೃಷಿಕರಾದ ಶ್ರೀ ಉಮರಬ್ಬ ರಾಮಕುಂಜ ಇವರು ನೆರವೇರಿಸಿದರು.ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು,ಎಸ್‌ಡಿಎಂಸಿ ಸರ್ವಸದಸ್ಯರು,ಶಾಲೆಯ ಹಿರಿಯ ವಿದ್ಯಾರ್ಥಿಗಳು,ಗ್ರಾಮದ ಹಿರಿಯರು,ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ನಂತರ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ಝಾಕರಿಯ ಮುಸ್ಲಿಯಾರ್, ಮುಖ್ಯ ಅತಿಥಿಗಳಾಗಿ ರಾಮಕುಂಜ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಸುಚೇತ,ರಾಮಕುಂಜ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಶ್ರೀಯುತ ಕೇಶವ ಗಾಂಧಿಪೇಟೆ,ಎಸ್‌ಡಿಎಂಸಿಯ ಉಪಾಧ್ಯಕ್ಷರಾದ ಶ್ರೀಮತಿ ಸುಕನ್ಯ ವಿಜೇಂದ್ರನ್,ಆಲಂಕಾರು ಸಿ.ಎ.ಬ್ಯಾಂಕಿನ ಅಧ್ಯಕ್ಷರಾದ ಶ್ರೀಯುತ ಧರ್ಮಪಾಲ್ ರಾವ್, ಖ್ಯಾತ ಉದ್ಯಮಿಗಳಾದ ಕೆ.ಕೆ
ಇಂಡಸ್ಟ್ರೀಸ್ ನ ಮಾಲಕರಾದ ಶ್ರೀ ಇಬ್ರಾಹಿಂ ಖಲೀಲ್ ಹಾಜಿ, ಖ್ಯಾತ ಉದ್ಯಮಿಗಳಾದ ಶ್ರೀ ಇಬ್ರಾಹಿಂ ಖಲೀಲ್ ಹಾಜಿ,ನಿವೃತ್ತ ಮುಖ್ಯ ಗುರುಗಳಾದ ಶ್ರೀ ಗುಮ್ಮಣ್ಣ ಗೌಡ,ಹಿರಿಯ ವಿದ್ಯಾರ್ಥಿ ಹಾಗೂ ಪ್ರಗತಿಪರ ಕೃಷಿಕರಾದ ಶ್ರೀಯುತ ಮಹಮ್ಮದ್ ಹೇಂತಾರು,ಮುಖ್ಯ ಭಾಷಣಕಾರರಾಗಿ ಪಿ.ಎ.ಝಾಕರಿಯಾ ಮುಸ್ಲಿಯಾರ್ ಮರ್ಧಾಳ, ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಪತ್ರಕರ್ತರಾದ ಶ್ರೀ ನಝೀರ್ ಹಾಗೂ ಶಾಲೆಯ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.ಇತ್ತೀಚಿಗೆ ನಡೆದ ಕೇರಳದ ವಯನಾಡಿನ ದುರಂತ ನಡೆದ ಸ್ಥಳದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿ ಸೇವೆಸಲ್ಲಿಸಿದ್ದ ಶ್ರೀ ಅಝೀಜ್ ಪಾಲ್ತಾಡಿ,ಶ್ರೀ ಜೈನುದ್ದೀನ್,ಶ್ರೀ ನಾಸೀರ್ ಹಾಗೂ ಶ್ರೀ ಅನ್ಸಾರ್ ಇವರನ್ನು ಗುರುತಿಸಲಾಯಿತು.

ನಂತರ ಮಕ್ಕಳಿಂದ ದೇಶ ಭಕ್ತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಲ್ಲಿ ಸಹಕರಿಸಿದ ನಮ್ಮ ಶಾಲೆಯ ನಿಕಟ ಪೂರ್ವ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಹಿರಿಯ ವಿದ್ಯಾರ್ಥಿಯಾದ ಶ್ರೀ ಅಬ್ದುಲ್ ಖೇರಿಂ, ಶಿಕ್ಷಕಿಯರಾದ ಶ್ರೀಮತಿ ಗುಲಾಬಿ,ಶ್ರೀಮತಿ ವಿಮಲಾ, ಉಷಾ,ವಿಂಧ್ಯಾ, ಶಿವರಂಜಿನಿ, ಝಹೀರಾ, ಅಕ್ಷರ ದಾಸೋಹದ ಸಿಬ್ಬಂದಿಗಳಾದ ಶ್ರೀಮತಿ ರೇಖಾ ಆರ್ ಭಂಡಾರಿ,ಶ್ರೀಮತಿ ಸುಮತಿ ಹಾಗೂ ಶ್ರೀಮತಿ ಯಶೋಧ ಸಹಕರಿಸಿದರೆ ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಶಿಕ್ಷಕಿ ಶ್ರೀಮತಿ ರಾಜಶ್ರೀ ಮಾಡಿದರು ಸ್ವಾಗತವನ್ನು ಮುಖ್ಯ ಶಿಕ್ಷಕ ಮಹೇಶ ಎಂ ಮಾಡಿದರು.ಶ್ರೀಮತಿ ಜಾನಕಿ ಪಿ ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಮಾಡಲಾಯಿತು.

LEAVE A REPLY

Please enter your comment!
Please enter your name here