ಪುತ್ತೂರು: ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ವತಿಯಿಂದ 78 ನೇ ಸ್ವಾತಂತ್ರೋತ್ಸವ ಆಚರಣೆ 

0

ಪುತ್ತೂರು: ಪುತ್ತೂರಿನ ಪ್ರತಿಷ್ಟಿತ ಚಿನ್ನಾಭರಣ ಮಳಿಗೆಯಾದ ಸುಲ್ತಾನ್ ಡೈಮಂಡ್ಸ್ & ಗೋಲ್ಡ್’ ವತಿಯಿಂದ 78 ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.

ಸಂಸ್ಥೆಯ ಬ್ರಾಂಚ್ ಮ್ಯಾನೇಜರ್ ಕೆ ಎಸ್ ಮುಸ್ತಫಾ ಕಕ್ಕಿಂಜೆ  ಮಾತನಾಡಿ ನಮ್ಮ ದೇಶಕ್ಕೆ ಈ ಸ್ವಾತಂತ್ರ್ಯ ಎಂಬುವುದು ಸವಲತ್ತಾಗಿ ಸಿಕ್ಕಿದ್ದಲ್ಲ ಆಂಗ್ಲರ ಕೈಯಿಂದ ಸವಾಲಾಗಿ ಪಡೆದದ್ದಾಗಿದೆ, ಇಂದು ನಾವು ಸಂಭ್ರಮಿಸುತ್ತಿರುವ  ಪ್ರತೀ ಸಂಭ್ರಮದ ಹಿಂದೆ ನಮ್ಮ ಪೂರ್ವಜರ ಕಠಿಣ ಹೋರಾಟದ ಪರಿಶ್ರಮವಿದೆ. ಆದ್ದರಿಂದ ಸ್ವಾತಂತ್ರ್ಯ ಬರೀ ಹಕ್ಕು ಮಾತ್ರವಲ್ಲ, ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ ಎಂದು ಹೇಳಿದರು.

ಮ್ಯಾನೇಜರ್ ಬಾಬು ವಂದಿಸಿದರು. ಮಾರ್ಕೆಟಿಂಗ್ ಮ್ಯಾನೇಜರ್ ಅಮ್ರಾಝ್ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here