ಆ.25ರಂದು ಪಾಲ್ತಾಡಿಯಲ್ಲಿ ಕೆಸರ್‌ಡೊಂಜಿ ದಿನ,ಕಂಬಳ ಉತ್ಸವ- ಆಮಂತ್ರಣ ಬಿಡುಗಡೆ

0

ನೇತ್ರ ತಪಾಸಣೆ 50 ಮಂದಿಗೆ ಶಸ್ತ್ರ ಚಿಕಿತ್ಸೆ, ರಕ್ತದಾನ ಶಿಬಿರ,ಸಸಿ ವಿತರಣೆ ,ಪ್ರಶಸ್ತಿ ಪ್ರದಾನ ಆಯೋಜನೆ

ಸವಣೂರು: ಲೋಹಿತ್ ಬಂಗೇರ ಬಾಲಯ ಇವರ ನೇತೃತ್ವದಲ್ಲಿ ತಿಂಗಳಾಡಿ ಬಾಲಯ ಕಂಬಳ ತಂಡ ಇದರ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು, ಪ್ರಸಾದ್ ನೇತ್ರಾಲಯ ಮಂಗಳೂರು ಹಾಗೂ ಉಳ್ಳಾಕುಲು ಫ್ರೆಂಡ್ಸ್ ಪಾಲ್ತಾಡಿ ಇದರ ಸಹಕಾರದೊಂದಿಗೆ ಸಾರಾಕರೆ ದಿ.ಶೀನಪ್ಪ ಪೂಜಾರಿ ಬೊಳಿಯಾಲ ಇವರ 21ನೇ ವರ್ಷದ ಸ್ಮರಣಾರ್ಥ 2ನೇ ವರ್ಷದ ಕೆಸರ್‌ಡೊಂಜಿ ದಿನ, ಕಂಬಳ ಉತ್ಸವ ನೇತ್ರ ತಪಾಸಣೆ 50 ಮಂದಿಗೆ ಶಸ್ತ್ರ ಚಿಕಿತ್ಸೆ, ರಕ್ತದಾನ ಶಿಬಿರ,ಸಸಿ ವಿತರಣೆ ,ಪ್ರಶಸ್ತಿ ಪ್ರದಾನ ಆ.25ರಂದು ಪಾಲ್ತಾಡಿ ಚಾಕೋಟೆತ್ತಡಿ ಧರ್ಮರಸು ಶ್ರೀ ಉಳ್ಳಾಕುಲು ದೈವಸ್ಥಾನದ ಮುಂಭಾಗದ ಗದ್ದೆಯಲ್ಲಿ ನಡೆಯಲಿದೆ.
ಇದರ ಆಮಂತ್ರಣ ಬಿಡುಗಡೆ ಆ.16ರಂದು ಚಾಕೋಟೆತ್ತಡಿ ಧರ್ಮರಸು ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಉಳ್ಳಾಕುಲು ದೈವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ವಿಠಲ ಶೆಟ್ಟಿ ಪಾಲ್ತಾಡಿ, ರಘುನಾಥ ರೈ ನಡುಕೂಟೇಲು,ವಿದ್ಯಾಧರ ಗೌಡ ಪಾರ್ಲ,ದಿವಾಕರ ಬಂಗೇರ ಬೊಳಿಯಾಲ, ವಿಶ್ವನಾಥ ರೈ ನಡುಕೂಟೇಲು,ಕಿಟ್ಟಣ್ಣ ರೈ ನಡುಕೂಟೇಲು, ಪ್ರವೀಣ್ ರೈ ನಡುಕೂಟೇಲು, ಜಯರಾಮ ಗೌಡ ದೊಡ್ಡಮನೆ,ವಿನಯಚಂದ್ರ ಕೆಳಗಿನಮನೆ,ಪ್ರತೀಕ್ ಖಂಡಿಗೆ,ರವೀಂದ್ರ ಪೂಜಾರಿ ಮರಕ್ಕೂರು,ಗಿರಿಯಪ್ಪ ಪೂಜಾರಿ ಬೊಳಿಯಾಲ, ಜನಾರ್ದನ ಗೌಡ ಅಂಗಡಿಹಿತ್ಲು, ಶರತ್ ರೈ ನಡುಕೂಟೇಲು,ಪ್ರಥಮ್ ಬೊಳಿಯಾಲ,ಉಳ್ಳಾಕುಲು ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ತಾರಾನಾಥ ಬೊಳಿಯಾಲ, ಕಾರ್ಯದರ್ಶಿ ಗಣೇಶ್ ಅಮೆಚ್ಚೋಡು,ಕಾರ್ಯಕ್ರಮದ ಆಯೋಜಕರಾದ ತಿಂಗಳಾಡಿ ಬಾಲಯ ಕಂಬಳ ತಂಡದ ಲೋಹಿತ್ ಬಂಗೇರ ಬಾಲಯ,ರೋಶನ್ ಬಂಗೇರ ಬಾಲಯ, ರೋಹಿತ್ ಬಂಗೇರ ಅಡೀಲು,ನಿತಿನ್ ಬಂಗೇರ ಅಬೀರ ಮೊದಲಾದವರಿದ್ದರು.

ನಮ್ಮ ಹಿರಿಯರಾದ ಸಾರಕರೆ ದಿ.ಶೀನಪ್ಪ ಪೂಜಾರಿ ಬೊಳಿಯಾಲ ಅವರ ನೆನಪಿನಲ್ಲಿ ಈ ನೆಲದ ಸಂಸ್ಕೃತಿಯ ಉದ್ದೀಪನಗೊಳಿಸುವ ಕಂಬಳ ಉತ್ಸವದ ಜತೆಗೆ ಪ್ರಕೃತಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ 1000 ಸಸಿ ವಿತರಣೆ ಹಾಗೂ ಸಮಾಜಕ್ಕಾಗಿ ಉಚಿತ ನೇತ್ರ ತಪಾಸಣೆಯೊಂದಿಗೆ 50 ಮಂದಿಗೆ ಉಚಿತ ಶಸ್ತ್ರ ಚಿಕಿತ್ಸೆ, ರಕ್ತದಾನ ಶಿಬಿರದ ಆಯೋಜನೆ ಮಾಡಿದ್ದೇವೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನದ ಜತೆಗೆ ಕಂಬಳ ಕ್ಷೇತ್ರದಲ್ಲಿ ಉತ್ತಮ ಸ್ಪರ್ಧೆ ನೀಡಿದ ಜೋಡಿಕೋಣಗಳ ಯಜಮಾನರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಕಂಬಳ ಉತ್ಸವದಲ್ಲಿ ಪಾಲ್ಗೊಳ್ಳಲು ಜೂನಿಯರ್ ಕೋಣಗಳಿಗೆ ಮಾತ್ರ ಅವಕಾಶ ಎಂದು ಲೋಹಿತ್ ಬಂಗೇರ ಬಾಲಯ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here