ಮುಕ್ರಂಪಾಡಿ ಬಾಲಕಿಯರ ಸ.ಪ.ಪೂ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಮುಕ್ರಂಪಾಡಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲೆ ಪ್ರಮೀಳಾ ಜೆಸ್ಸಿ ಕ್ರಾಸ್ತಾರವರು ಧ್ವಜಾರೋಹಣೆಗೈದು ದೇಶಕ್ಕಾಗಿ ಸ್ವಾತಂತ್ರ್ಯ ಯೋಧರ ಪ್ರಾಣತ್ಯಾಗ, ದೇಶಪ್ರೇಮ ಸಮರ್ಪಣೆ, ಸಿಕ್ಕಿದ ಸ್ವಾತಂತ್ರ್ಯದ ರಕ್ಷಣೆ ಪ್ರಜೆಗಳ ಕರ್ತವ್ಯಗಳ ಕುರಿತು ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಸೇನಾನಿ ಸತ್ಯನಾರಾಯಣ ಭಟ್ ಕಬಕ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಉಪನ್ಯಾಸಕಿ ಶೋಭಾ ಕೆ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ದಾಮೋದರ್‌ರವರು ಸನ್ಮಾನಿತರ ಪರಿಚಯ ಮಾಡಿದರು. ಚಿತ್ರಲೇಖ ವಂದಿಸಿದರು. ಉಪನ್ಯಾಸಕರು, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here