ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವ ಅಗತ್ಯ- ಬಲರಾಜ್ ಶೆಟ್ಟಿ ನಿಟ್ಟೆಗುತ್ತು ಪೇರಾಲು
ಬಡಗನ್ನೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಡುಮಲೆ ಇದರ ವತಿಯಿಂದ ಪ್ರಥಮ ವರ್ಷದ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮವು ಆ.18 ರಂದು ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಡಾ. ರಮಾ .ಕೆ.ಟಿ ಭಂಡಾರಿ ವೇದಿಕೆಯಲ್ಲಿ ನಡೆಯಿತು.
ಪ್ರಾರಂಭದಲ್ಲಿ ಶ್ರೀ ದೇವಾಲಯದಲ್ಲಿ ಶ್ರೀ ದೇವರಿಗೆ ಪ್ರಧಾನ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮವನ್ನು ನಿಟ್ಟೆಗುತ್ತು, ಪೇರಾಲು ಬಲರಾಜ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವ ಅಗತ್ಯವಿದೆ.ಸಮಾಜದಲ್ಲಿ ಮೊಬೈಲ್ ಫೋನ್‌ಗಳು ಮಕ್ಕಳನ್ನು ಕ್ಷಣಮಾತ್ರದಲ್ಲಿ ದಾರಿ ತಪ್ಪಿಸುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ರಾಮಾಯಣ,ಮಹಾಭಾರತ ಇತ್ಯಾದಿ ಧಾರ್ಮಿಕ ವಿಚಾರದ ಬಗ್ಗೆ ಪೋಷಕರು ಕಥೆ ಹೇಳುವ ಮುಖಾಂತರ ಮನಸ್ಸು ಕೆಂದ್ರಿಕರಿಸಬೇಕಾದ ಅನಿವಾರ್ಯತೆ ಇದೆ. ಜಾತಿ ಭೇದ ಮತ ಮರೆತು ನಾವೆಲ್ಲರೂ ಭಾರತಾಂಭೆಯ ಮಕ್ಕಳು ಎಂಬ ಭಾವನೆಯಲ್ಲಿ ಧರ್ಮ ರಕ್ಷಣೆ ಮಾಡೋಣ ,ಧರ್ಮದ ಅಚಾರ ವಿಚಾರ ಮತ್ತು ಸಂಸ್ಕೃತಿ ಬಗ್ಗೆ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಅಗತ್ಯತೆ ಇದೆ ಎಂದ ಅವರು ಛದ್ರಗೊಳ್ಳುತ್ತಿರುವ ಹಿಂದೂ ಸಮಾಜವನ್ನು ಸಂಘಟನೆ ಮಾಡುವ ಕೆಲಸ ಪಡುಮಲೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಾಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ ,ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶ್ರೀ ಕ್ಷೇತ್ರ ಪಡುಮಲೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ತೆಂಗಿನ ಹಿಂಗಾರ ಅರಳಿಸುವ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಿ ಮಾತನಾಡಿ ಕಳೆದ 30 ವರ್ಷದಿಂದ ಮಾಡುತ್ತಿದ್ದು ಮುಂದೆ ಇನ್ನೂ ವಿಶೇಷವಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ಚರ್ಚಿಸಿದಾಗ ಯುವ ಸಮುದಾಯದ ಕೈಜೋಡಿಸುವ ಭರವಸೆ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಪ್ರಥಮ ವರ್ಷದ ಪ್ರಯೋಗ ಮಾಡಲಾಗಿದೆ. ಯಾರಿಗೂ ತೊಂದರೆಯಾಗದಂತೆ ಶ್ರೀ ದೇವರ ಸಂಪೂರ್ಣ ಅರ್ಶೀವಾದ ಇರಲಿ ಎಂದು ಹೇಳಿ ಶುಭ ಹಾರೈಸಿದರು..
ಕ್ಷೇತ್ರದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ಗದ್ದೆಗೆ ಹಾಲು ಭಾಗಿನ ಅರ್ಪಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ಜನರಿಗೆ ಸುಖ ಶಾಂತಿ ನೆಮ್ಮದಿ ದೊರೆಯುವ ಕೇಂದ್ರ ಶ್ರಧ್ದಾ ಕೇಂದ್ರ. ಸಕಲ ಜೀವ ಜಂತುಗಳನ್ನು ದೇವರು ಎಂದು ಪೂಜಿಸುತ್ತಿರುವ ಈ ಸಂದರ್ಭದಲ್ಲಿ ಗದ್ದೆಗೆ ಹಾಲು ಭಾಗಿನ ಅರ್ಪಿಸುವ ಸಂದರ್ಭದಲ್ಲಿ ಒಂದು ಕಪ್ಪೆ ಬಂದು ಹಾಲನ್ನು ಕುಡಿಯುವುದು ಕಂಡುಬಂತು. ಇದರಿಂದ ಶ್ರೀ ದೇವರು ಸಂಪೂರ್ಣ ಸಂತುಷ್ಟರಾಗಿದ್ದಾರೆ ಎಂಬ ನಂಬಿಕೆ ನಮ್ಮದು ಎಂದರು.
ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ಭಟ್ ಬಿರ್ನೋಡಿ, ಕ್ರೀಡಾ ಚಾಂಪಿಯನ್ ಅನಾವರಣಗೊಳಿಸಿ ಕ್ರೀಡಾ ಕೂಟ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಡಾ ರವೀಶ್ ಪಡುಮಲೆ ಮಾತನಾಡಿ ಪಡುಮಲೆ ಒಂದು ಸಾಂಸ್ಕೃತಿಕ ನಗರಿ, ಇದು ದೈವ ದೇವರ ತಾಣವು ಅಗಿದೆ. ನಮ್ಮ ಹಿರಿಯರು ಅದೆಷ್ಟು ಕಷ್ಟ ಪಟ್ಟು ಗದ್ದೆ ಬೇಸಾಯ ಮಾಡುತ್ತಿದ್ದರು. ಅದನ್ನು ಮತ್ತೊಮ್ಮೆ ಮೇಲೈಸುವ ಆಲೋಚನೆ ಯುವಕರಲ್ಲಿ ಬಂದಿದರುವುದು ಸಂತಸದ ವಿಚಾರ.ತೌಳವ ಧರ್ಮದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮತ್ತೊಮ್ಮೆ ಪಡುಮಲೆ ಹೆಸರನ್ನು ಪರಿಚಯಿಸುವ ಕೆಲಸವನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಾಡುತ್ತಿದೆ.ಜಾತಿ ಭೇಧ ಮರೆತು ಒಂದೇ ತಾಯಿ ಮಕ್ಕಳಂತೆ ಬೆರತು ಕೆಲಸ ಮಾಡಿದಾಗ ಧರ್ಮದ ರಕ್ಷಣೆ ಮಾಡಲು ಸಾಧ್ಯ ಎಂದು ಹೇಳಿದರು.
ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ, ಪಡುಮಲೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಸತೀಶ್ ರೈ ಕಟ್ಟಾವು ,ನಿಡ್ಪಳ್ಳಿ ಶಾಂತದುರ್ಗಾ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ನಾಗೇಶ್ ಗೌಡ ಪುಳಿತ್ತಡಿ ಸಂದರ್ಭೋಚಿತ ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಡುಮಲೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜನಾರ್ದನ ಪೂಜಾರಿ ಪದಡ್ಕ ಮಾತನಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಗಂಗಾಧರ ರೈ ಮೇಗಿನಮನೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು, , ಉಪಾಧ್ಯಕ್ಷ ಗಂಗಾಧರ ರೈ ಮೇಗಿನಮನೆ,ಉದ್ಯಮಿ ಸುಧಾಕರ ಶೆಟ್ಟಿ ಮಂಗಳಾದೇವಿ, ಶ್ರೀಧರ ಭಟ್ ಚಂದಕೂಡ್ಲು , ಸುಳ್ಯಪದವು ಅಯ್ಯಪ್ಪ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಗಿರೀಶ್ ಕನ್ನಡ್ಕ ,, ಶಂಕರಿ ಪಟ್ಟೆ, ಕೃಷ್ಣಪ್ರಸಾದ್ ,ಚಂದ್ರಶೇಖರ ಭಂಡಾರಿ ನಲಿಕೆಮಜಲು ಕಂಬಳ, ಲಿಂಗಪ್ಪ ಪೂಜಾರಿ ಮೈಯಾಳ, ರಾಮದಾಸ್ ಪೂಜಾರಿ ತಲೆಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ ರೈ ಪಳ್ಳತ್ತಾರು ಸ್ವಾಗತಿಸಿದರು. ವಂದಿಸಿದರು. ಲಿಟ್ಲ್ ಫ್ಲವರ್ ಶಾಲಾ ಶಿಕ್ಷಕ ಬಾಲಕೃಷ್ಣ ಪೊದುವಾಲ್ ಕಾರ್ಯಕ್ರಮ ನಿರೂಪಿಸಿದರು. ರಘುರಾಮ ಪಾಟಾಳಿ ಶರವು ಹಾಗೂ ರಾಜೇಶ್ ರೈ ಮೇಗಿನಮನೆ ಸಹಕರಿಸಿದರು.
ಸನ್ಮಾನ
ದೇವಸ್ಥಾನದ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಕ್ಕೆ ಸ್ಥಳಾವಕಾಶ ಒದಗಿಸಿಕೊಟ್ಟು ಕಾರ್ಯಕ್ರಮ ಯಶಸ್ಸಿಗೆ ಕಾರಣಕರ್ತರಾದ ನಿಟ್ಟೆಗುತ್ತು ಪೇರಾಲು ಬಲರಾಜ್ ಶೆಟ್ಟಿ ರವರನ್ನು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು ಶಾಲು ಹೊದಿಸಿ, ಫೇಟ ಧರಿಸಿ ,ಫಲಪುಷ್ಪ ಸ್ಮರಣೆ ನೀಡಿ ಅಭಿನಂದಿಸಿದರು.
ಕ್ರೀಡಾ ಕೂಟ:-
ಶಾಲಾ ಮಕ್ಕಳಿಗೆ ಹಾಳೆ ಓಟ, ಹಿಮ್ಮುಖ ಓಟ, ಗೂಟ ಸುತ್ತು, ಕಂಬಳ ಓಟ ಓಟ ಮೂರು ಕಾಲಿನ ಓಟ ನಡೆಯಿತು.ಪುರುಷರಿಗೆ ಹಾಳೆ ಓಟ, ಹಿಮ್ಮುಖ ಓಟ, ಗೂಟ ಸುತ್ತು, ಕಂಬಳ ಓಟ ಓಟ, ಮೂರು ಕಾಲಿನ ಓಟ.ಮಹಿಳೆಯರಿಗೆ ಹಾಳೆ ಓಟ, ಹಿಮ್ಮುಖ ಓಟ, ಗೂಟ ಸುತ್ತು ಡಾರ್ಜ್ಬ್ ಬಾಲ್, ತ್ರೋ ಬಾಲ್, ಮೂರು ಕಾಲಿನ ಓಟ ಹಗ್ಗಜಗ್ಗಾಟ.ಹಾಗೂ ಸಾರ್ವಜನಿಕರಿಗೆ ವಿಶೇಷವಾಗಿ ನಿಧಿ ಶೋಧನೆ ಸ್ಪರ್ಧೆ ಹಾಗೂ ಮುಕ್ತ ಹಗ್ಗಜಗ್ಗಾಟ ನಡೆಯಿತು.
ವಿಶೇಷ ಆಕರ್ಷಣೆ;-
ತುಳು ಚಿತ್ರ ನಟ- ನಟಿಯರು ಭಾಗವಹಿಸಿದ್ದರು.ಕಂಬಳ ಕೋಣಗಳ ಪ್ರದರ್ಶನ ನಡೆಯಿತು.