ಪುತ್ತೂರು: ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳಾದ ಮಾಯಿದೆ ದೇವುಸ್ ಹಿ. ಪ್ರಾ. ಶಾಲೆ, ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆ, ಸಂತ ವಿಕ್ಟರನ ಆಂಗ್ಲ ಮಾಧ್ಯಮ ಹಿ. ಪ್ರಾ. ಶಾಲೆಗಳು ಜಂಟಿಯಾಗಿ ಮಾಯಿದೆ ದೇವುಸ್ ಶಾಲೆಯ ನೇತೃತ್ವದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದ ಧ್ವಜಾರೋಹಣವನ್ನು ಶಾಲಾ ವಠಾರದಲ್ಲಿ ನೆರವೇರಿಸಲಾಯಿತು.
ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಮಾಯಿದೆ ದೇವುಸ್ ಚರ್ಚಿನ ಪ್ರಧಾನ ಧರ್ಮಗುರುಅತೀ ವಂದನೀಯ ಲಾರೆನ್ಸ್ ಜೆರಾಮ್ ಮಸ್ಕರೇನಸ್ 78ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿದರು. ನೆರೆದವರನ್ನು ಉದ್ದೇಶಿಸಿ ಮಾತನಾಡಿದ ಸಂಚಾಲಕರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ನಾಯಕರನ್ನು ಸ್ಮರಿಸಬೇಕು. ಭಾರತವು ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ. ನಮ್ಮ ದೇಶವನ್ನು ಮುನ್ನಡೆಸುವ ಎಲ್ಲಾ ರಾಜಕಾರಣಿಗಳಿಗೆ ದೇಶವನ್ನು ನಿಭಾಯಿಸುವ ಶಕ್ತಿ ದೇವರು ಕೊಡಲಿ, ಪ್ರತಿಯೊಬ್ಬ ಭಾರತಿಯರಿಗೆ ಜ್ಞಾನದ ಬೆಳಕು ನೀಡಲಿ, ಎಲ್ಲರೂ ನಿಜವಾದ ಆಧ್ಯಾತ್ಮಿಕತೆ ಅನುಭವಿಸಿದಾಗ ಮಾತ್ರ ಪರಸ್ಪರ ಪ್ರೀತಿಸಲು, ಗೌರವಿಸಲು, ಎಲ್ಲರ ಒಳಿತನ್ನು ಭಯಸಲು ಸಾಧ್ಯ. ಈ ಸ್ವಾತಂತ್ರ್ಯ ದಿನಾಚರಣೆ ಶುಭದಿನದಂದು ನಾವೆಲ್ಲರೂ ಪರಸ್ಪರ ಗೌರವಿಸೋಣ ಹಾಗೆಯೇ ಸ್ವಾತಂತ್ರ್ಯಕ್ಕಾಗಿ ನಾವೆಲ್ಲರೂ ಪ್ರಾರ್ಥಿಸೋಣ ಎಂದು ತಿಳಿಸಿ ಶುಭ ಹಾರೈಸಿದರು.
ಚಿರಶ್ರೀ ದಿನದ ಮಹತ್ವವನ್ನು ತಿಳಿಸಿದರು. ಮಕ್ಕಳು ಸ್ವಾತಂತ್ರ್ಯಘೋಷಣೆಗಳನ್ನು ಕೂಗಿ ದೇಶ ಭಕ್ತಿಗೀತೆಯನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ತ , ಮೂರೂ ಶಾಲೆಗಳ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರುಗಳು, ಮುಖ್ಯ ಶಿಕ್ಷಕರು, ಶಾಲಾ ನಾಯಕ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿ ನಾಯಕ ಕ್ರಿಸ್ ರಿಯೋನ್ ಲಸ್ರಾದೊ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಹ ವಂದನಾರ್ಪಣೆ ಮಾಡಿದರು. ವೀಕ್ಷ ಕಾರ್ಯಕ್ರಮ ನಿರ್ವಹಣೆ ಮಾಡಿದರು.