ಬದ್ರಿಯಾ ಗಲ್ಫ್ ಫ್ರೆಂಡ್ಸ್ ವತಿಯಿಂದ ಸಂಟ್ಯಾರ್ ಜಮಾತ್‌ನ ಮನೆ ಮನೆಗೆ ಸಸಿ ವಿತರಣೆ

0

ಪುತ್ತೂರು: ‘ಮನೆಗೊಂದು ಮರ, ಊರಿಗೊಂದು ವನ’ ಎಂಬ ಘೋಷವಾಕ್ಯದಡಿ ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್ ವತಿಯಿಂದ ಸಂಟ್ಯಾರ್ ಬದ್ರಿಯಾ ಜುಮಾ ಮಸೀದಿಯ ಜಮಾಅತ್‌ನ ಪ್ರತೀ ಮನೆಗಳಿಗೆ ಸಸಿ ವಿತರಿಸಲಾಯಿತು.

ಪರಿಸರ ಸಂರಕ್ಷಣೆ ಹಾಗೂ ಮರ ಗಿಡಗಳ ಪ್ರಾಮುಖ್ಯತೆಯನ್ನು ಮನಗಂಡು ಅನಿವಾಸಿ ಭಾರತೀಯರ ತಂಡ ಬದ್ರಿಯಾ ಗಲ್ಫ್ ಫ್ರೆಂಡ್ಸ್ ವತಿಯಿಂದ ಸಂಟ್ಯಾರ್ ಮೊಹಲ್ಲಾದ ಪ್ರತಿಯೊಂದು ಮನೆಗೆ ಸಸಿ ವಿತರಣೆ ನಡೆಸುವ ಯೋಜನೆ ರೂಪಿಸಿ ಸಂಟ್ಯಾರ್ ಮಸೀದಿ ವಠಾರದಲ್ಲಿ ಸಸಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸಂಟ್ಯಾರು ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಹನೀಫಿ ರವರು ಮಾತನಾಡಿ ಪರಿಸರ ಸಂರಕ್ಷಣೆಯ ಮಹತ್ವವನ್ನು ವಿವರಿಸಿದರು. ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಫಾರೂಕ್ ಸಂಟ್ಯಾರ್, ಕಾರ್ಯದರ್ಶಿ ಹಮೀದ್ ಕಲ್ಲರ್ಪೆ, ಜೊತೆ ಕಾರ್ಯದರ್ಶಿ ಮಹಮ್ಮದ್ ಮಲಾರ್, ಸದಸ್ಯರಾದ ರಝಾಕ್ ಸಂಟ್ಯಾರ್, ಹಾರಿಸ್ ಸಂಟ್ಯಾರ್, ಸಿ ಎಂ ಅಬ್ದುಲ್ಲ ಮುಸ್ಲಿಯಾರ್, ಸಂಶುದ್ದೀನ್ ಕಲ್ಲರ್ಪೆ, ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸದಸ್ಯರಾದ ಖಾದರ್ ಮರಿಕೆ, ಉಮರ್ ನೀರ್ಕಜೆ, ನಾಸಿರ್ ಬೊಳ್ಳೆಮ್ಮಾರ್ ಹಾಗೂ ಅನ್ಸಾರಿಯಾ ಯಂಗ್‌ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷ ಪವಾಝ್ ಮರಿಕೆ ಮತ್ತು ಮಸೀದಿ ಆಡಳಿತ ಕಮಿಟಿ ಸದಸ್ಯರು, ಯಂಗ್‌ಮೆನ್ಸ್ ಸದಸ್ಯರು ಹಾಗೂ ಜಮಾಅತರು ಉಪಸ್ಥಿತರಿದ್ದರು. ಜಮಾತ್ ಕಮಿಟಿ ಸದಸ್ಯ ರಿಯಾಝ್ ಬಳಕ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here