ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 23ನೇ ವಾರ್ಷಿಕ ಮಹಾಸಭೆ

0

ರೂ 602.88 ಕೋಟಿ ವ್ಯವಹಾರ, ರೂ.5.19ಕೋಟಿ ನಿವ್ವಳ ಲಾಭ. ಶೇ.12 ಡಿವಿಡೆಂಡ್

ಪುತ್ತೂರು : ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ ರಾಜ್ಯದಾದ್ಯಂತ 19 ಶಾಖೆಗಳೊಂದಿಗೆ ಕಾರ್ಯಾಚರಿಸುತ್ತಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು 2023-24ನೇ ಸಾಲಿನಲ್ಲಿ ರೂ 602.88 ಕೋಟಿ ವ್ಯವಹಾರ ನಡೆಸಿ ರೂ.5.19ಕೋಟಿ ನಿವ್ವಳ ಲಾಭಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷ ಎಸ್.ಆರ್ ಸತೀಶ್ವಂದ್ರ ಮಹಾಸಭೆಯಲ್ಲಿ ಘೋಷಣೆ ಮಾಡಿದರು


ಸಂಘದ 23ನೇ ವಾರ್ಷಿಕ ಮಹಾಸಭೆಯು ಆ.18ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2023 -24ರ ಆರ್ಥಿಕ ವರ್ಷಾಂತ್ಯಕ್ಕೆ ಸಹಕಾರಿಯಲ್ಲಿ 45077 ಸದಸ್ಯರಿಂದ ರೂ 9.75ಕೋಟಿ ಪಾಲು ಬಂಡವಾಳ ಹೊಂದಿದೆ. ರೂ.24.05 ಕೋಟಿ ವಿವಿಧ ನಿಧಿಗಳು, ರೂ 316.29ಕೋಟಿ ಠೇವಣಾತಿ ಹೊಂದಿದ್ದು ಸಂಘವು ಸದೃಡವಾಗಿದೆ. ಸದಸ್ಯರಿಗೆ ವಿವಿಧ ರೂಪದಲ್ಲಿ ರೂ.286.59 ಕೋಟಿ ಸಾಲವನ್ನು ವಿತರಿಸಲಾಗಿದೆ. ವರದಿ ವರ್ಷದಲ್ಲಿ ಸಂಘದ ವ್ಯವಹಾರವು ರೂ 118.35ಕೋಟಿ ಜಾಸ್ತಿಯಾಗಿದೆ. ಗಣನೀಯ ಪ್ರಗತಿ ಸಾಧಿಸಲು ಕಾರಣೀಕರ್ತರಾದ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ರಾಜ್ಯದಾದ್ಯಂತ 19 ಶಾಖೆಗಳ ಮೂಲಕ ಸದಸ್ಯರಿಗೆ ಸೇವೆಯನ್ನು ನೀಡುತ್ತಿದೆ. ರಾಜ್ಯ ಸರಕಾರವು ಸಹಕಾರಿಯ ಕಾಯ್ದೆಯ ತಿದ್ದುಪಡಿ ಮಾಡಿದು ಇವುಗಳ ಸಾಧಕ ಬಾದಕ ಗಳ ಬಗ್ಗೆ ಅಧ್ಯಯನ ನಡೆಸಬೇಕಿದೆ ಎಂದರು.
ಸAಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ ನಾಯಕ್ ಎ. ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರಗಳನ್ನು ಮಂಡಿಸಿದರು. ಸಹಕಾರಿಯ ಸದಸ್ಯರುಗಳು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.


ಸಂಘದ ಉಪಾಧ್ಯಕ್ಷ ಉಮೇಶ್ ಪ್ರಭು, ನಿರ್ದೇಶಕರಾದ ದೇವಿಪ್ರಸಾದ್ ಕೆ, ಜಯರಾಮ ಪಿ., ಕೆ ಹರೀಶ್ ಬೋರ್ಕರ್, ಹೇಮಂತ ಕುಮಾರ್ ಕೆ.ಆರ್., ಪ್ರಕಾಶ್ಚಂದ್ರ ಪಿ., ರಮೇಶ್ಚಂದ್ರ ಎಂ., ರಾಜಗೋಪಾಲ ಬಿ., ದೇವಕಿ ಕೆ., ಸರಸ್ವತಿ ಎನ್., ವೃತ್ತಿಪರ ನಿರ್ದೇಶಕರಾದ ಬಿ.ವಸಂತ ಶಂಕರ್, ವೇದವ್ಯಾಸ ಕೆ., ಕಾರ್ಯಾನುಗುಣ ನಿರ್ದೇಶಕರಾದ ಶ್ರೀಕಾಂತ ರಾವ್ ವಿ.ಡಿ., ರವೀಶ ಪಿ. ಹಾಗೂ ವರದಿ ವರ್ಷದ ಸನದು ಲೆಕ್ಕ ಪರಿಶೋಧಕರಾದ ಸಿ.ಎ ಸುಜಯ ಡಿ. ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:
ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋದನಾ ಕೇಂದ್ರದಲ್ಲಿ ಸಂಶೋದಿಸಲ್ಪಟ್ಟು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಇತ್ತಿಚಿಗೆ ಲೋಕಾರ್ಪಣೆಗೊಂಡ ನೇತ್ರ ಗಂಗಾ ಗೇರುತಳಿಯ ಸಂಶೋಧನಾ ತಂಡದ ನೇತೃತ್ವ ವಹಿಸಿದ ಸಹಕಾರಿಯ ಸದಸ್ಯರಾಗಿರುವ ಡಾ. ಗಂಗಾಧರ ನಾಯಕ್ ಹಾಗೂ ಸಹಕಾರಿಯ ವರದಿ ವರ್ಷದ ಸನದು ಲೆಕ್ಕ ಪರಿಶೋಧಕರಾದ ಸಿ.ಎ ಸುಜಯ ಡಿ ಆಳ್ವರವರನ್ನು ಸನ್ಮಾನಿಸಲಾಯಿತು.

ಚಿತ್ರ:ಕೃಷ್ಣಾ ಪುತ್ತೂರು


ಸಹಕಾರಿಯ ಹಿರಿಯ ಅಧಿಕಾರಿ ಶ್ರೀರಂಜಿತಾ ಎ.ವಿ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿವರ್ಹಣಾಧಿಕಾರಿ ವಸಂತ ನಾಯಕ್ ಎ. ಸ್ವಾಗತಿಸಿ, ವಿಭಾಗೀಯ ವ್ಯವಸ್ಥಾಪಕ ಪ್ರೇಮಚಂದ್ರ ನಾಯಕ್ ವಂದಿಸಿದರು. ಹಿರಿಯ ವ್ಯವಸ್ಥಾಪಕ ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮ:
ಸಭಾ ಕಾರ್ಯಕ್ರಮದ ಬಳಿಕ ಸಹಕಾರಿಯ ಸಿಬ್ಬಂದಿಗಳಿಂದ ಸ್ವರ ಮಾಧುರ್ಯ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ಕಳೆದ ಆರ್ಥಿಕ ವರ್ಷದಲ್ಲಿ ದಾಖಲೆಯ ಪ್ರಗತಿ ಸಾಧಿಸಿದೆ. ಸಂಘದ ಮುಖಾಂತರ ಸಾಮಾಜಿಕ ಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಸದಸ್ಯರಿಗೆ ಸಂತೃಪ್ತ ಸೇವೆ ನೀಡುವುದೇ ಸಂಘದ ಧ್ಯೇಯವಾಗಿದೆ. ಸಹಕಾರಿ ಕ್ಷೇತ್ರದ ಅಧ್ಯಯನಕ್ಕಾಗಿ ವಿವೇಕಾನಂದ ಮಹಾವಿದ್ಯಾಲಯದ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ.
-ಎಸ್‌ಆರ್ ಸತೀಶ್ಚಂದ್ರ, ಅಧ್ಯಕ್ಷರು

ಸಂಘವು 2023-24ರ ಆರ್ಥಿಕ ವರ್ಷದಲ್ಲಿ 45,077 ಸದಸ್ಯರಿಂದ ರೂ.9.75 ಕೋಟಿ ಪಾಲು ಬಂಡವಾಳ, ರೂ.316.29ಕೋಟಿ ಠೇವಣಿ, ಹೊಂದಿದೆ. ರೂ.286.59ಕೋಟಿ ಸಾಲ ವಿತರಿಸಲಾಗಿದೆ. ರೂ.24.05ಕೋಟಿ ನಿಧಿಗಳನ್ನು ಹೊಂದಿದೆ. ವರದಿ ವರ್ಷದಲ್ಲಿ ರೂ.5.19ಕೋಟಿ ನಿವ್ವಳ ಲಾಭಗಳಿದೆ.
-ವಸಂತ ನಾಯಕ್ ವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ

LEAVE A REPLY

Please enter your comment!
Please enter your name here