ಪುತ್ತೂರು: ಕೆ.ಇ.ಆರ್.ಸಿ. ಹಾಗೂ ರಾಜ್ಯ ಸರಕಾರದ ಆದೇಶದಂತೆ ಮೆಸ್ಕಾಂ ಇಲಾಖೆಯ ಎಲ್ಲ ಕೃಷಿ ನೀರಾವರಿಯ ಪಂಪ್ ಸೆಟ್ ಗಳಿಗೆ ಸಹಾಯಧನವನ್ನು ಮುಂದುವರಿಸಲು ಆಧಾರ್ ಕಾರ್ಡ್ ಜೋಡಾವಣೆಯು ಕಡ್ಡಾಯಗೊಳಿಸಿದ್ದು ಕೆಯ್ಯೂರು ಭಾಗದ ರೈತರ ಅನುಕೂಲಕ್ಕಾಗಿ ಆ.24 ರಂದು ಕೆಯ್ಯೂರು ಗ್ರಾ.ಪಂ ಸಭಾಂಗಣದಲ್ಲಿ ಒಂದು ದಿನದ ವಿಶೇಷ ಶಿಬಿರವನ್ನು ನಡೆಸಲಿದೆ.
ಕೃಷಿ ಬಳಕೆದಾರರು ಆಧಾರ್ ಕಾರ್ಡಿನ ಜೊತೆಗೆ ಪಂಪ್ ಸೆಟ್ ಗಳ (ಆರ್.ಆರ್ ನಂಬರ್) ಸಂಭಂದಿಸಿದ ಸ್ಥಾವರ ಸಂಖ್ಯೆ , ಜಾಗಕ್ಕೆ ಸಂಭಂದಿಸಿದ ಲಭ್ಯವಿರುವ ಯಾವುದೇ ದಾಖಲೆ ಗಳನ್ನು( ಆರ್.ಟಿ.ಸಿ,ಕ್ರಯಚೀಟು,ವೀಲುನಾಮೆ ಇನ್ನಿತರ ) ಪಡೆದುಕೊಂಡು ಶಿಬಿರದಲ್ಲಿ ಭಾಗವಹಿಸಿ ಆಧಾರ್ ಜೋಡಣೆ ಮಾಡಿಸಬಹುದಾಗಿದೆ. ಅದಾರ್ ಜೋಡಣೆ ಪ್ರಕ್ರಿಯೆಯು ಸಂಪೂರ್ಣ ಉಚಿತವಾಗಿದ್ದು, ಯಾವುದೇ ಶುಲ್ಕಗಳನ್ನು ಪಾವತಿಸುವ ಅಗತ್ಯವಿರುವುದಿಲ್ಲ. ಶಿಬಿರವು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ತನಕ ನಡೆಯಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.