ಸುಳ್ಯ,ದರ್ಬೆ ವಾಹಿನಿ ಕಲಾ ಸಂಘದಿಂದ ವಾಹಿನಿ ಸಾಹಿತ್ಯ ಸೌರಭ- ಕೃತಿ ಬಿಡುಗಡೆ, ಸಾಧಕರಿಗೆ ಸನ್ಮಾನ, ಕವಿಗೋಷ್ಠಿ

0

ಪುತ್ತೂರು: ವಾಹಿನಿ ಕಲಾ ಸಂಘ ದರ್ಬೆ ಹಾಗೂ ವಾಹಿನಿ ಕಲಾ ಸಂಘ ಸುಳ್ಯ ಘಟಕದ ವತಿಯಿಂದ ವಾಹಿನಿ ಸಾಹಿತ್ಯ ಸೌರಭ-2024 ಜೊತೆಗೆ ಕೃತಿ ಬಿಡುಗಡೆ, ಸಾಧಕರಿಗೆ ಸನ್ಮಾನ, ಕವಿಗೋಷ್ಠಿಯು ಆ.25 ರಂದು ಸುಳ್ಯ ಬ್ರಾಹ್ಮಣರ ಸಂಘ ಸಭಾಭವನ(ಸರಕಾರಿ ಪದವಿ ಪೂರ್ವ ಕಾಲೇಜು ಹತ್ತಿರ)ದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಿತು.


ಸಾಹಿತಿ ಶಂಕರಿ ಶರ್ಮಾ ಪುತ್ತೂರು ಇವರು ದೀಪ ಪ್ರಜ್ವಾಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ಸಾಹಿತಿ ಹಾಗೂ ನಿವೃತ್ತ ಉಪನ್ಯಾಸಕ ಪ್ರೊ|ವಿ.ಬಿ ಅರ್ತಿಕಜೆರವರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ ಪೇರಾಲು, ಸಾಹಿತಿ ವೈಲೇಶ್ ಪಿ ಎಸ್,ಕೊಡಗು, ನ್ಯಾಯವಾದಿ
ಉದಯರವಿ ಕೋಂಬ್ರಾಜೆ ಪುತ್ತೂರು, ವಾಹಿನಿ ಕಲಾಸಂಘ ಪುತ್ತೂರು ಘಟಕದ ಅಧ್ಯಕ್ಷ ವಿಶ್ವನಾಥ ಕುಲಾಲ್, ವಾಹಿನಿ ಕಲಾಸಂಘ ಬಂಟ್ವಾಳ ಘಟಕದ ಕಾರ್ಯದರ್ಶಿ ಪ್ರಮೀಳಾ ಚುಳ್ಳಿಕ್ಕಾನ ಕಾಸರಗೋಡು ಇವರು ಉಪಸ್ಥಿತರಿದ್ದು, ಶುಭ ಹಾರೈಸಿದರು.


ಸಾಹಿತಿ ಹಾಗೂ ಮುಖ್ಯ ಶಿಕ್ಷಕಿ ಸಾನು ಉಬರಡ್ಕರವರ ನಾಲ್ಕನೆಯ ಕೃತಿ “ನೀಳವೇಣಿ ನೀನಾಟ್ಯವಾಡು” ಈ ಸಂದರ್ಭದಲ್ಲಿ ಲೋಕಾರ್ಪಣೆಗೊಂಡಿತು. ಕೃತಿಯ ಬಿಡುಗಡೆ ಹಾಗೂ ಕೃತಿ ಪರಿಚಯವನ್ನು ಸಾಹಿತಿಗಳು ಹಾಗೂ ದರ್ಬೆ ವಾಹಿನಿ ಕಲಾ ಸಂಘದ ರಾಜ್ಯಾಧ್ಯಕ್ಷರಾದ ಮಧುರಕಾನನ ಗಣಪತಿಭಟ್ಟರವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸ್ಕಂದ ಪ್ಲಾಸ್ಟಿಕ್ ಕೋಟೂರು ಇದರ ಮಾಲಕ ಮುರಳೀಕೃಷ್ಣ ಪೆರಡಂಜಿ, ವೈದ್ಯಕೀಯ, ಆಯುರ್ವೇದ ಔಷಧಿ ತಯಾರಿಕೆ, ಯಕ್ಷಗಾನ ಕಲಾವಿದ, ಕವಿ, ಮುಳ್ಳೇರಿಯ ಕಾರ್ತಿಕ್ ಕ್ಲಿನಿಕ್‌ನ ಡಾ.ಶಿವಕುಮಾರ್ ಅಡ್ಕ, ಪಂಚವಲ್ಲಿ ತೈಲ, ಆಯುರ್ವೇದ ಔಷಧಿ ತಯಾರಿಕೆ ಹಾಗೂ ಮಾರಾಟದ ಈಶ್ವರ ಕುಮಾರ್ ಉಬರಡ್ಕರವರುಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಡಾ.ಶಿವಕುಮಾರ್ ಅಡ್ಕ ಹಾಗೂ ಮುರಳೀಕೃಷ್ಣರವರು ಮಾತನಾಡಿದರು. ಅಶ್ವಥ್ ಬರಿಮಾರು ವಂದಿಸಿದರು.


ಕವಿಗೋಷ್ಠಿ:
ಬಳಿಕ ನಡೆದ ಕವಿಗೋಷ್ಟಿಯಲ್ಲಿ ಯುವ ಕವಯತ್ರಿ ಅನುರಾಧ ಶಿವಪ್ರಕಾಶ್, ಉಬರಡ್ಕ ,ಸುಳ್ಯ ಇವರ ಅಧ್ಯಕ್ಷತೆಯಲ್ಲಿ ಹಿರಿಯ ಕವಯತ್ರಿ ಭಾರತಿ ಕೊಲ್ಲರಮಜಲು, ಪುತ್ತೂರು ಇವರ ಚಾಲನೆಯೊಂದಿಗೆ ಪ್ರಾರಂಭಗೊಂಡಿತು. ಶುಭಾಶಂಸನೆಯನ್ನು ಹಿರಿಯ ಕವಿ ನರಸಿಂಹ ಭಟ್ಟ ಕಟ್ಟದಮೂಲೆರವರು ನಡೆಸಿಕೊಟ್ಟರು. ಉದಯರವಿ ಕೋಂಬ್ರಾಜೆ, ಅಶೋಕ್ ಎನ್ ಕಡೇಶಿವಾಲಯ, ಗೋಪಾಲಕೃಷ್ಣ ಭಟ್ಟ ಮನವಳಿಕೆಯವರ ಉಪಸ್ಥಿತಿಯಲ್ಲಿ ನಡೆದ ಕವಿಗೋಷ್ಟಿಯಲ್ಲಿ ಸುಮಂಗಲಾ ಕೃಷ್ಣ ಗುತ್ತಿನಡ್ಕ, ಅಶ್ವತ್ಥ್ ಬರಿಮಾರು, ರಶ್ಮಿತಾ ಸುರೇಶ್, ವಿಶ್ವನಾಥ್ ಕುಲಾಲ್, ವಿದ್ಯಾಶಂಕರಿ, ವಿಜಯಕುಮಾರ ಕಾಣಿಚ್ಚಾರ್, ಶಂಕರಿ ಶರ್ಮಾ ಪುತ್ತೂರು, ರತ್ನ ಕೆ ಭಟ್ ತಲಂಜೇರಿ, ವೈಲೇಶ್ ಪಿ.ಎಸ್ ಕೊಡಗು, ಸಂಧ್ಯಾ ಕುಮಾರ್ ಉಬರಡ್ಕ, ಪ್ರಮೀಳಾ ರಾಜ್, ಪ್ರಮೀಳಾ ಚುಳ್ಳಿಕ್ಕಾನ, ಶ್ರೀಲತಾ ಪದ್ಯಾಣ, ಡಾ.ಶಿವಕುಮಾರ್ ಅಡ್ಕ, ಆಶಾ ಮಯ್ಯ, ಸುಮಾ ಕಿರಣ್, ಗಾಯತ್ರಿ ಪಳ್ಳತ್ತಡ್ಕ, ವರಲಕ್ಷ್ಮೀ ಪರ್ತಜೆ, ಪ್ರೊ|ವಿ.ಬಿ ಅರ್ತಿಕಜೆ, ಮಧುರಕಾನನ ಗಣಪತಿ ಭಟ್ಟರವರು ಭಾಗವಹಿಸಿದರು. ಆಶಾ ಮಯ್ಯ ಕುಂಜೂರುಪಂಜ, ಸುಮಾ ಕಿರಣ್ ಮಣಿಪಾಲರವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here