ನಾಳೆ ಕಲ್ಲೇಗದಲ್ಲಿ ’ಕಲ್ಲೇಗ ಮೊಸರು ಕುಡಿಕೆ ಉತ್ಸವ’

0

ಕಬಡ್ಡಿ ಪಂದ್ಯಾಟ, ಮುದ್ದುಕೃಷ್ಣ, ಅಟ್ಟಿಮಡಿಕೆ ಒಡೆಯುವ, ಹಗ್ಗಜಗ್ಗಾಟ ಸ್ಪರ್ಧೆ

ಪುತ್ತೂರು: ಶಿವಾಜಿ ಯುವಕ ಮಂಡಲ ನೆಹರುನಗರ ಕಲ್ಲೇಗ ಇದರ ಆಶ್ರಯದಲ್ಲಿ ಭಾರತ್ ಮಾತಾ ಸಮುದಾಯ ಭವನ ಮತ್ತು ಶ್ರೀ ಕಲ್ಲೇಗ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ಸಹಕಾರದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 49ನೇ ವರ್ಷದ ಕಲ್ಲೇಗ ಮೊಸರುಕುಡಿಕೆ ಉತ್ಸವ ಸೆ.1ರಂದು ಕಲ್ಲೇಗ ಭರತ್ ಮಾತಾ ಸಮುದಾಯ ಭವನದಲ್ಲಿ ಜರುಗಲಿದೆ.

ಬೆಳಗ್ಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದ್ದು, ಆರಂಭದಲ್ಲಿ ಪುರುಷರ 20 ವರ್ಷ ಒಳಪಟ್ಟು ಕಬಡ್ಡಿ ಪಂದ್ಯಾಟ, ಬಳಿಕ ಮುದ್ದು ಕೃಷ್ಣ ಸ್ಪರ್ಧೆ, ಅಟ್ಟಿಮಡಿಕೆ ಒಡೆಯುವ ಸ್ಪರ್ಧೆ, ಹಗ್ಗಜಗ್ಗಾಟ ನಡೆಯಲಿದೆ. ಎಲ್ಲಾ ಸ್ಪರ್ಧಾ ಕಾರ್ಯಕ್ರಮಗಳನ್ನು ಕಲ್ಲೇಗ ರೂರಲ್ ಡೆವೆಲಪ್‌ಮೆಂಟ್ ಟ್ರಸ್ಟ್ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ ಅವರು ಉದ್ಘಾಟಿಸಲಿದ್ದಾರೆ.

ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಅಜಿತ್ ಕುಮಾರ್, ಮಾಜಿ ಸದಸ್ಯ ಮಾಧವ ಪಟ್ಲ ಅತಿಥಿಗಳಾಗಿ ಭಾಗವಹಿಸಲಿದ್ದು, ನಗರಸಭಾ ಸದಸ್ಯ ವಸಂತ ಕಾರೆಕ್ಕಾಡು ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ ನಡೆಯುವ ಮುದ್ದು ಕೃಷ್ಣ ವೇಷ ಸ್ಪರ್ಧೆ ಮತ್ತು ಅಟ್ಟಿಮಡಿಕೆ ಒಡೆಯುವ ಸ್ಪರ್ಧೆಯನ್ನು ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಎಸ್.ಆರ್.ಕೆ.ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ, ಪುತ್ತೂರು ಪ್ರೋಪರ್ಟಿಸ್‌ನ ಉದ್ಯಮಿ ನಿತಿನ್ ಪಕ್ಕಳ, ಪಾಲಾರ್ ಕನ್ಸಟ್ರಕ್ಷನ್‌ನ ವಿಜಯ್ ಪಾಲಾರ್, ಉದ್ಯಮಿ ಧರ್ಮಪಾಲ ಗೌಡ ಕೆ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಬ್ರಿಜೇಶ್ ಚೌಟ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಯು.ಆರ್ ಪ್ರೋಪರ್ಟಿಸ್‌ನ ಆಡಳಿತ ನಿರ್ದೇಶಕ ಉಜ್ವಲ್ ಪ್ರಭು, ದ್ವಾರಕ ಕನ್‌ಸ್ಟ್ರಕ್ಷನ್‌ನ ಮಾಲಕ ಗೋಪಾಲಕೃಷ್ಣ ಭಟ್, ಉದ್ಯಮಿ ಗೌರವ್ ಶೆಟ್ಟಿ, ವಿಜಯ ಸಾಮ್ರಾಟ್‌ನ ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಕೃಷ್ಣಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here