





ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಟಣಿಗೆ ಮುಡ್ನೂರು ಕರ್ನೂರು ಇಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ವತಿಯಿಂದ ಯಕ್ಷಗಾನ ತರಬೇತಿಯ ಉದ್ಘಾಟನಾ ಸಮಾರಂಭ ನಡೆಯಿತು.


ಚಂದ್ರಹಾಸ್ ರೈ ಮಾಡಾವು ಮಾಜಿ (ರಿ) ತುಳು ಸಾಹಿತ್ಯ ಅಕಾಡೆಮಿ ಪುತ್ತೂರು ಹಾಗೂ ಕಾರ್ಯದರ್ಶಿಗಳು ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು ಪಟ್ಲ ಫೌಂಡೇಶನ್ ಯಾವ ರೀತಿ ಲೋಕಪರಿಚಯವಾಯಿತು,ಬೆಳೆದು ಬಂದು ಕಲಾಭಿಮಾನಿಗಳ ಜೊತೆ ಹೇಗೆ ಒಗ್ಗೂಡಿತು, ಸಾವಿರಾರು ಯಕ್ಷಗಾನ ಪ್ರಿಯರ ಬಾಳು ಉಜ್ವಲಗೊಳಿಸಿದ ಚರಿತ್ರೆಯನ್ನು ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದರು.





ಪುತ್ತೂರು ಸಂತ ಫಿಲೋಮಿನ ಕಾಲೇಜಿನ ಉಪನ್ಯಾಸಕ ಹಾಗೂ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಸಂಚಾಲಕ ಪ್ರಶಾಂತ್ ರೈ ಮುಂಡಾಲ ಗುತ್ತು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಶ್ರೀರಾಮಪಕ್ಕಳ ಮಾತನಾಡಿ ಶಾಲೆಯ ಇತಿಹಾಸದ ಕುರಿತು ಯಕ್ಷಗಾನ ಅನ್ನೋದು ಈ ಮಣ್ಣಿನಲ್ಲೇ ರಾರಾಜಿಸುತ್ತಿದೆ ಕರ್ನೂರು ಕೊರಗಪ್ಪ ರೈ ಇವರ ನೆಲೆಯ ಸೊಗಡನ್ನು ಲೋಕಕ್ಕೆ ಪರಿಚಯಿಸುವ ಇನ್ನೊಂದು ಮಹತ್ಕಾರ್ಯ ಈ ಒಂದು ಕಾರ್ಯಕ್ರಮದಲ್ಲಿ ಸಂಪೂರ್ಣತೆಯನ್ನು ಹೊಂದಲಿ ಇನ್ನು ಸ್ವಲ್ಪ ವರ್ಷಗಳಲ್ಲಿ ಲೋಕಪರಿಚಿತವಾಗಲಿ ಹಾಗೆ ಇಲ್ಲಿ ಆರಂಭಗೊಂಡಂತಹ ಎಲ್ಲ ಕಾರ್ಯಕ್ರಮಗಳು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲಿ ಕಾರ್ಯಕ್ರಮಗಳ ಎಲ್ಲಾ ಒಗ್ಗೂಡುವಿಕೆ ಎಂದರೆ ಅದು ಕರ್ನೂರು ಶಾಲೆ ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ ಕ್ರೀಡಾ ಕ್ಷೇತ್ರದಲ್ಲಿ ಕಲೆಯಲ್ಲಿ ಇಂದು ಗಂಡುಕಲೆ ಯಕ್ಷಗಾನ ಅದರಲ್ಲಿಯೂ ದೇಶವಿದೇಶಗಳಲ್ಲಿ ಹೆಸರನ್ನು ಗಳಿಸಿದಂತಹ ಪಟ್ಲ ಫೌಂಡೇಶನ್ ಇವತ್ತು ಕನ್ನಡ ಶಾಲೆಯಲ್ಲಿ ಪ್ರಾರಂಭವಾಗುತ್ತಿರುವುದು ನಮ್ಮ ಊರಿನ ಹೆಮ್ಮೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಬಿ ಎಚ್ ಸೂಫಿ ಅವರು ಕಾರ್ಯಕ್ರಮದ ಕುರಿತು ಯಕ್ಷಗಾನ ನಮ್ಮ ಶಾಲೆಗೆ ಒಲಿದು ಬಂದ ಭಾಗ್ಯ ಇನ್ನಷ್ಟು ಅವಕಾಶಗಳು ಒದಗಿ ಬರಲಿ ಮಕ್ಕಳ ಆಸಕ್ತಿಗೆ ಈ ಒಂದು ಕಾರ್ಯಕ್ರಮ ದಾರಿದೀಪವಾಗಲಿ ಎಂದರು.
ಯಕ್ಷಗಾನ ಗುರು ಜಯರಾಮ್ ಪಾಟಾಳಿ ಪಡುಮಲೆ ಕಾರ್ಯಕ್ರಮ ಕುರಿತು ಸಾರ್ಥಕತೆಯ ಮಾದರಿಗಳನ್ನು ಮುಂದಿಡುತ್ತ ಮಕ್ಕಳ ಮುಂದಿನ ಯಕ್ಷಯಾನದ ಭದ್ರ ಬುನಾದಿಯ ಚಿತ್ರಣವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನೆಟ್ಟಣಿಗೆ ಮುಡ್ನೂರು ಗ್ರಾ ಪಂ.ಸದಸ್ಯರಾದ ಕುಮಾರ್ ನಾಥ ಪೂಜಾರಿ , ಪ್ರಫುಲ್ಲಾ ರೈ, ಪ್ರದೀಪ್ ರೈ, ಯಕ್ಷಗಾನ ಅಭಿಮಾನಿಗಳಾದ ಸುಭಾಶ್ಚಂದ್ರ ರೈ ಮೈರೋಳು,ಸುಭೋಧ್ ರೈ ಹಾಗೂ ಕರ್ನೂರು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ರೈ ಮೂರ್ತಿಮಾರು ಉಪಸ್ಥಿತರಿದ್ದರು.

ಶಾಲೆಯ ಹಿರಿಯ ವಿದ್ಯಾರ್ಥಿಗಳು, ಪೋಷಕರು,ವಿದ್ಯಾರ್ಥಿಗಳು,ಊರಿನವರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ ವಿಜೇತಾ ಕೆ, ಸಾವಿತ್ರಿ, ಸವಿತಾ, ಅರುಣಾ ಕುಮಾರಿ ಸಹರಿಸಿದರು .ಶಾಲೆಯ ಮುಖ್ಯ ಗುರು ರಮೇಶ್ ಶಿರ್ಲಾಲ್ ಸ್ವಾಗತಿಸಿದರು. ಆಶಾಲತಾ ವಂದಿಸಿದರು. ಲತಾ ರಮೇಶ್ ಕಾರ್ಯಕ್ರಮ ನಿರೂಪಿಸಿದರು.






