ಮಣಿಕ್ಕರ ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಾಲಿಬಾಲ್ ಪಂದ್ಯಾಟದ ಸಮಾರೋಪ

0

ಬಾಲಕರ ವಿಭಾಗ ಪ್ರಥಮ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪಾಂಗ್ಲಾಯಿ, ಬಾಲಕಿಯರ ವಿಭಾಗ ಪ್ರಥಮ ಸರಕಾರಿ ಪ್ರೌಢಶಾಲೆ ಪಾಪೆಮಜಲು

ಪುತ್ತೂರು:  ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಮಣಿಕ್ಕರ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ದ.ಕ.ಜಿ.ಪಂ., ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ಸರಕಾರಿ ಪ್ರೌಢಶಾಲೆ ಮಣಿಕ್ಕರ ಇದರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟದ ಸಮಾರೋಪ ಸಮಾರಂಭ ನಡೆಯಿತು.

ಕೊಳ್ತಿಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ  ಪ್ರಮೋದ್ ಕೆ ಎಸ್ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಸೈನಿಕರು ಹಾಗೂ ಪೊಲೀಸ್ ಕಾನ್ಸ್ಟೇಬಲ್ ಹರಿಪ್ರಸಾದ್ ,ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಘಟಕದ ನಿಕಟಪೂರ್ವ ಅಧ್ಯಕ್ಷ  ಗಣೇಶ್ , ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸೀತಾರಾಮ ಗೌಡ ,ಮಣಿಕ್ಕರ ಸರ್ಕಾರಿ ಪ್ರೌಢಶಾಲಾ ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷ ಸಯ್ಯದ್  ಗಫೂರ್ ಸಾಹೇಬ್ ಪಾಲ್ತಾಡು, ಸದಸ್ಯ ಇಬ್ರಾಹಿಂ, ಮಣಿಕ್ಕರ ಹಿ.ಪ್ರಾ.ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗನ್ನಾಥ ರೈಮಣಿಕ್ಕರ , ಕೆಪಿಸಿಸಿ ಕಾರ್ಮಿಕರ ರಾಜ್ಯಕಾರ್ಯದರ್ಶಿ ಶಾಬು ಸಾಹೇಬ್ ಪಾಲ್ತಾಡು, ನ್ಯೂ ಬ್ರದರ್ಸ್ ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಕ್ಲಬ್ ಪಾಲ್ತಾಡು ಇದರ ಅಧ್ಯಕ್ಷ ಹನೀಫ್ ಕುಂಡಡ್ಕ, ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ  ಅಬ್ದುಲ್ ಸಲಾಂ ,ವಿಷ್ಣು ಮಿತ್ರವೃಂದ ರಿ ಪಾಲ್ತಾಡು ಇದರ ಅಧ್ಯಕ್ಷ  ದೇವಿ ಪ್ರಸಾದ್ ಮಣಿಯಾಣಿ,ತಾಲೂಕು ವಾಲಿಬಾಲ್ ಪಂದ್ಯಾಟ ಸಮಿತಿ ಅಧ್ಯಕ್ಷ  ವೆಂಕಪ್ಪ ಗೌಡ ನಾರ್ಕೋಡು ಪೆರ್ಜಿ,ಎಸ್ ಡಿ ಎಂಸಿ ಸರಕಾರಿ ಪ್ರೌಢಶಾಲೆ ನಿಕಟಪೂರ್ವ ಅಧ್ಯಕ್ಷ ಸುನಿಲ್ ರೈ ಪಾಲ್ತಾಡು, ಮುಖ್ಯ ಶಿಕ್ಷಕಿ ನಳಿನಿ ಕೆ., ಕೊಳ್ತಿಗೆ ಗ್ರಾಮ ಪಂಚಾಯತಿ ಸದಸ್ಯರಾದ  ಶುಭಲತ ಜೆ ರೈ,ಸುಂದರ ಪಿ.ಬಿ.,ನಿವೃತ್ತ ಮುಖ್ಯ ಶಿಕ್ಷಕ ಪುರುಷೋತ್ತಮ ಕಿರ್ಲಾಯ, ಜಯರಾಮಗೌಡ ಹಿರಿಂಜ ಮೊದಲಾದವರಿದ್ದರು.

ಶ್ರೀ ವಿಷ್ಣು ಮಿತ್ರವೃಂದ (ರಿ) ಪಾಲ್ತಾಡು ,ಶ್ರೀ ಅಮ್ಮನವರ ಸೇವಾ ಸಮಿತಿ ಪಾಲ್ತಾಡು, ಶ್ರೀದೇವಿ ಕ್ರಿಕೆಟರ್ಸ್ ಪಾಲ್ತಾಡು, ಹಿರಿಯ ವಿದ್ಯಾರ್ಥಿಗಳು ಊರ ಪರ ಊರ ಕ್ರೀಡಾ ಅಭಿಮಾನಿಗಳು ನ್ಯೂ ಬ್ರದರ್ಸ್ ಪಾಲ್ತಾಡಿನ ಅಧ್ಯಕ್ಷ ಹನೀಫ್ ಕುಂಡಡ್ಕ , ಶ್ರೀದೇವಿ ಕ್ರಿಕೆಟರ್ಸ್ ಅಧ್ಯಕ್ಷ  ಶರತ್ ಹಿರಿಯ ವಿದ್ಯಾರ್ಥಿ ಜುಬೈರ್ ,ವಾಲಿಬಾಲ್ ತರಬೇತುದಾರರಾದ   ಕೆಬೀರ್ ಮತ್ತು  ಶರೀಫ್ ಕುಂಡಡ್ಕ  , ಸುಂದರ ನಾಯ್ಕ ನಾಗನ ಮಜಲು , ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ,ಮಣಿಕ್ಕರ ಹಿ.ಪ್ರಾ.ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶರೀಫ್ ಇವರನ್ನು ಗೌರವಿಸಲಾಯಿತು. ಪಂದ್ಯಾಟದ  ನಿರೂಪಣೆಯನ್ನು ಕೆಪಿಎಸ್ ಕುಂಬ್ರ ಇದರ   ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣ ಪ್ರಸಾದ  ನಿರ್ವಹಿಸಿದರು. ಸೈಯ್ಯದ್ ಗಫೂರ್ ಸಾಹೇಬ್ ಸ್ವಾಗತಿಸಿ,ವಂದಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ಕರುಣಾಕರ ಮಣಿಯಾಣಿ ನಿರೂಪಿಸಿದರು.

ಫಲಿತಾಂಶ
ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬೆಥನಿ  ಆಂಗ್ಲ ಮಾಧ್ಯಮ ಪ್ರೌಢಶಾಲೆ ಪಾಂಗ್ಲಾಯಿ ಇಲ್ಲಿನ ವಿದ್ಯಾರ್ಥಿಗಳು ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಇಂದ್ರಪ್ರಸ್ಥ ಉಪ್ಪಿನಂಗಡಿಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸರಕಾರಿ ಪ್ರೌಢಶಾಲೆ ಪಾಪೆಮಜಲು ಇಲ್ಲಿನ ವಿದ್ಯಾರ್ಥಿನಿಯರು ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಸೈಂಟ್ ಮೇರಿಸ್ ಉಪ್ಪಿನಂಗಡಿ  ವಿದ್ಯಾರ್ಥಿನಿಯರು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here