ಸೆ.5: ನೆಲ್ಯಾಡಿಯಲ್ಲಿ ಶ್ರೀಪೂರ್ಣ ಆಯುರ್ವೇದ ಚಿಕಿತ್ಸಾಲಯ ಶುಭಾರಂಭ

0

ನೆಲ್ಯಾಡಿ: ಕಡಬ ಸಮೀಪದ ಬಲ್ಯ ಹೊಸಮಠದಲ್ಲಿರುವ ಶ್ರೀಪೂರ್ಣ ಆಯುರ್ವೇದ ಪಂಚಕರ್ಮ ಚಿಕಿತ್ಸಾಲಯದ ಸಹಸಂಸ್ಥೆ ಶ್ರೀಪೂರ್ಣ ಆಯುರ್ವೇದ ಚಿಕಿತ್ಸಾಲಯ ಸೆ.5ರಂದು ಬೆಳಿಗ್ಗೆ 10 ಗಂಟೆಗೆ ನೆಲ್ಯಾಡಿ ದುರ್ಗಾಶ್ರೀ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ ಎಂದು ಚಿಕಿತ್ಸಾಲಯದ ವೈದ್ಯರಾದ ಡಾ.ಸುಧನ್ವ ಕೂಡೂರು ಅವರು ತಿಳಿಸಿದ್ದಾರೆ.


ಇಲ್ಲಿ ವಾತವ್ಯಾಧಿ, ಸಕ್ಕರೆ ಖಾಯಿಲೆ, ಬಿ.ಪಿ., ಆಮವಾತ, ಗಂಟುನೋವು, ಪಾರ್ಶ್ವವಾಯು, ಸ್ಟಾಂಡಿಲೋಸಿಸ್, ಮೈಗ್ರೇನ್, ಮೂಲವ್ಯಾಧಿ, ಅಜೀರ್ಣ, ಅಸಿಡಿಟಿ, ಮಲಬದ್ಧತೆ, ಐ.ಬಿ.ಎಸ್., ಪ್ರೊಸ್ಟೇಟ್ ಸಮಸ್ಯೆ, ಮೂತ್ರದ ಕಲ್ಲು, ಪಿತ್ತದ ಕಲ್ಲು, ಜಾಂಡಿಸ್, ಜ್ವರ, ಚರ್ಮದೋಷ, ನರದ ತೊಂದರೆ, ಪಿ.ಸಿ.ಓ.ಡಿ., ನಿದ್ರಾಹೀನತೆ, ಥೈರಾಯ್ಡ್ ಸಮಸ್ಯೆ, ಹೃದ್ರೋಗ, ಉಬ್ಬಸ, ಕೆಮ್ಮು, ಸಂತಾನಹೀನತೆ, ಮಾನಸಿಕ ತೊಂದರೆಗಳು, ಮುಟ್ಟುದೋಷ, ಗರ್ಭಕೋಶದ ತೊಂದರೆ ಇತ್ಯಾದಿ ಖಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿದೆ. ಸಂದರ್ಶನ ಸಮಯ ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರ ತನಕ ಆಗಿರುತ್ತದೆ. ಆದಿತ್ಯವಾರ ರಜಾ ದಿನವಾಗಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here