ಕೆಪಿಎಸ್ ಕೆಯ್ಯೂರುನಲ್ಲಿ  ಸವಣೂರು ವಲಯ ಮಟ್ಟದ ಕಬಡ್ಡಿ ಪಂದ್ಯಾಟ 

0

ಕೆಯ್ಯೂರು:  ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಬಾಗ ಕೆಯ್ಯೂರಿನಲ್ಲಿ ಸವಣೂರು ವಲಯ ಮಟ್ಟದ ಪ್ರಾಥಮಿಕ ಬಾಲಕ ಬಾಲಕಿಯರ ಕಬಡ್ಡಿ  ಪಂದ್ಯಾಟವು ಸೆ.4ರಂದು ನಡೆಯಿತು.

ಕೆಪಿಎಸ್ ಕೆಯ್ಯೂರು ಕಾರ್ಯಾಧ್ಯಕ್ಷ  ಎ.ಕೆ ಜಯರಾಮ ರೈ ಕೆಯ್ಯೂರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ,ನ್ಯಾಯಯುತವಾದಂತಹ ತೀರ್ಪು ದೊರೆತು ಉತ್ತಮ ಕೀಡಾಪಟುಗಳು ಬೆಳಕಿಗೆ ಬರಲಿ ಎಂದು ಶುಭ ಹಾರೈಸಿದರು.

ಸಭಾಧ್ಯಕ್ಷತೆಯನ್ನು ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು ವಹಿಸಿ ಶಿಕ್ಷಣದ ಜೊತೆಗೆ ಕ್ರೀಡೆಯು ಅತ್ಯಗತ್ಯ , ಮಕ್ಕಳು ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಉತ್ತಮ ರೀತಿಯಲ್ಲಿ ಕ್ರೀಡೆಯಲ್ಲಿ ಭಾಗವಹಿಸಿದಾಗ ಮಕ್ಕಳ ಆರೋಗ್ಯ ವೃದ್ದಿಯಾಗುತ್ತದೆ ಎಂದು  ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶಶಿಕಲಾ, ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್. ಕೆ, ಉಪ ಪ್ರಾಂಶುಪಾಲ ವಿನೋದ್ ಕುಮಾರ್ ಕೆ ಎಸ್, ಉದ್ಯಮಿ ದೇವಿ ಪ್ರಸಾದ್ ಆಳ್ವ, ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಎನ್. ಎಸ್ ಡಿ, ಪದ್ಮಶ್ರೀ ಗ್ರೂಪ್ಸ್ ಮಾಲಕ ರತ್ನಾಕರ ರೈ ತಿಂಗಳಾಡಿ, ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯರಾದ ಜಯಂತ ಪೂಜಾರಿ ಕೆಂಗುಡೇಲು, ಬಟ್ಯಪ್ಪ ರೈ ದೇರ್ಲ, ಮೀನಾಕ್ಷಿ ವಿ. ರೈ, ಕೆ ಪಿ ಎಸ್ ಕೆಯ್ಯೂರು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ವಿಶ್ವೇಶ್ವರ ಭಟ್, ಪ್ರಗತಿಪರ ಕೃಷಿಕ ಅಶೋಕ ರೈ ದೇರ್ಲ, ಕೆಪಿಎಸ್   ಕೆಯ್ಯೂರು  ಎಸ್ ಡಿ ಎಂ ಸಿ ಸದಸ್ಯರಾದ  ಧರಣಿ ಸಿ ಆಯುಬು, ಸುಶೀಲ, ಯಶಸ್ವಿನಿ,  ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ, ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗದ ಮುಖ್ಯಗುರು ಬಾಬು ಎಂ ಸ್ವಾಗತಿಸಿ, ಸವಣೂರು ವಲಯ ಕ್ರೀಡಾ ನೋಡಲ್ ಅಧಿಕಾರಿ ಬಾಲಕೃಷ್ಣ ಕೆ, ವಂದಿಸಿ, ಕಾರ್ಯಕ್ರಮದ ನಿರೂಪಣೆಯನ್ನು ಕೆಪಿಎಸ್ ಕೆಯ್ಯೂರು ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಕುಮಾರ್ ರೈ ಕೆಯ್ಯೂರು ನಿರ್ವಹಿಸಿದರು. ಶ್ರೀ ಕಪಿಲೇಶ್ವರ  ಸಿಂಗಾರಿ ಮೇಳ ಚಾರ್ವಕ ಇವರಿಂದ ಚೆಂಡವಾದನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷರು,ಸರ್ವ ಸದಸ್ಯರು,  ದೈಹಿಕ ಶಿಕ್ಷಣ ಶಿಕ್ಷಕರು, ಮಕ್ಕಳ ಪೋಷಕ ವೃಂದ, ಉಪನ್ಯಾಸಕ ವೃಂದ, ಶಿಕ್ಷಕ ವೃಂದ, ಸಿಬ್ಬಂದಿ ವರ್ಗ, ವಿದ್ಯಾರ್ಥಿ ವೃಂದ, ಆಶಾ ಕಾರ್ಯಕರ್ತೆಯರು  ಸಹಕರಿಸಿದರು.

ಸಮಾರೋಪ ಸಮಾರಂಭವು  ‌ಕೆಯ್ಯೂರು ಗ್ರಾ.ಪಂ. ಉಪಾಧ್ಯಕ್ಷೆ ಸುಮಿತ್ರಾ ದಿವಾಕರ ಪಲ್ಲತ್ತಡ್ಕ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಜೂನಿಯರ್ ಕಾಲೇಜ್ ಕೊಂಬೆಟ್ಟು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಗನ್ನಾಥ ರೈ, ಕೆಯ್ಯೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಧಾಕೃಷ್ಣ ಗೌಡ ಕೆಯ್ಯೂರು, ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗ ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷ ಬಾಲಕೃಷ್ಣ ಪಾಲ್ತಾಡು, ಉಪಸ್ಥಿತರಿದ್ದರು.  

ಬಾಲಕಿಯರ ವಿಭಾಗದಲ್ಲಿ ಕೆ. ಪಿ.ಎಸ್ ಪ್ರಾಥಮಿಕ ವಿಭಾಗ ಕೆಯ್ಯೂರು ಪ್ರಥಮ ಸ್ಥಾನ, ಸಾಂದೀಪನಿ  ವಿದ್ಯಾಸಂಸ್ಥೆ ನರಿಮೊಗರು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಬಾಲಕರ ವಿಭಾಗದಲ್ಲಿ ಸಾಂದೀಪನಿ ವಿದ್ಯಾಸಂಸ್ಥೆ ನರಿಮೊಗರು ಪ್ರಥಮ ಸ್ಥಾನ, ಸ.ಉ.  ಹಿ.ಪ್ರಾ ಶಾಲೆ ಕಣಿಯೂರು ದ್ವಿತೀಯ ಸ್ಥಾನ ಪಡೆದುಕೊಂಡರು. ಅತಿಥಿಗಳು ವಿಜೇತರಿಗೆ ಸ್ಮರಣಿಕೆ  ನೀಡಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here