





ಪುತ್ತೂರ: ಶಿಕ್ಷಕರ ದಿನಾಚರಣೆಯ ಅಂಗವಾಗಿ ಕೆಎಂಜೆ, ಎಸ್.ವೈ.ಎಸ್, ಕೆಸಿಎಫ್, ಎಸ್ಸೆಸ್ಸೆಫ್ ನರಿಮೊಗರು ಶಾಖೆ ವತಿಯಿಂದ ನರಿಮೊಗರು ಸರಕಾರಿ ಪ್ರಾಥಮಿಕ ಶಾಲೆಯ
ಶಿಕ್ಷಕ ವೃಂದದವರನ್ನು ಗೌರವಿಸುವ ಕಾರ್ಯಕ್ರಮ ಸೆ.5ರಂದು ನರಿಮೊಗರು ಶಾಲೆಯಲ್ಲಿ ನಡೆಯಿತು.


ಶಿಕ್ಷಕರನ್ನು ಹಣ್ಣು ಹಂಪಲು, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು.
ಕೆಎಂಜೆ, ಎಸ್.ವೈ.ಎಸ್, ಕೆಸಿಎಫ್,ಎಸ್ಸೆಸ್ಸೆಫ್ ನರಿಮೊಗರು ಶಾಖೆಯ ಪದಾಧಿಕಾರಿಗಳು ಸದಸ್ಯರು, ಹಾಗೂ ಶಾಲಾ ಎಸ್ ಡಿ ಎಂ ಸಿಯವರು ಉಪಸ್ಥಿತರಿದ್ದರು.















