ನೆಲ್ಯಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮುದ್ಯ ಬಜತ್ತೂರು ಇದರ ವತಿಯಿಂದ 11ನೇ ವರ್ಷದ ಶ್ರೀ ಗಣೇಶೋತ್ಸವ ಮತ್ತು ಧಾರ್ಮಿಕ ಸಮಾರಂಭ ಸೆ.7ರಂದು ಬಜತ್ತೂರು ಮುದ್ಯ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.
ಬೆಳಿಗ್ಗೆ ಗಂಟೆ 7ಕ್ಕೆ ವಿದ್ಯಾಗಣಪತಿ ಪ್ರತಿಷ್ಠೆ ನಡೆಯಿತು. ಬಳಿಕ 12 ತೆಂಗಿನಕಾಯಿ ಗಣಹವನ ನಡೆಯಿತು. ನಂತರ ಶ್ರೀ ಪಂಚಲಿಂಗೇಶ್ವರ ದೇವರಿಗೆ ನಿತ್ಯಪೂಜೆ, ಕುಂತೂರು-ಗಡಿಯಾರ್ನಡ್ಕ ಶ್ರೀ ಮಹಾಮ್ಮಾಯಿ ಭಜನಾ ತಂಡದವರಿಂದ ಭಜನೆ ನಡೆಯಿತು.
ಗೌರವಾರ್ಪಣೆ/ಬಹುಮಾನ ವಿತರಣೆ:
ಬೆಳಿಗ್ಗೆ ಗೌರವಾರ್ಪಣೆ ಹಾಗೂ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ನಿವೃತ್ತ ಗ್ರಾಮ ಸಹಾಯಕ ಲಿಂಗಪ್ಪ ಗೌಡ ಬಾರಿಕೆ, ದೈವದ ಪರಿಚಾರಕರಾದ ಮೋನಪ್ಪ ಪೂಜಾರಿ ಟಪಾಲುಕೊಟ್ಟಿಗೆ, ಮುತ್ತಪ್ಪ ಗೌಡ ನೆಕ್ಕರೆ, ಆಂಬ್ಯುಲೆನ್ಸ್ ಚಾಲಕ ಕಿಶೋರ್, ಸಾಮಾಜಿಕ ಕಾರ್ಯಕರ್ತ ಮನೋಜ್ ಕುಮಾರ್ ನೀರಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಜಗದೀಶ್ ಬಾರಿಕೆ ಸನ್ಮಾನಿತರನ್ನು ಪರಿಚಯಿಸಿದರು. ಗಣೇಶೋತ್ಸವದ ಅಂಗವಾಗಿ ನಡೆದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಾಧವ ಓರುಂಬೋಡಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಗೋಪಾಲ ವಳಾಲುದಡ್ಡು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿದ್ದ ಉಪ್ಪಿನಂಗಡಿ ಸೇವಾ ಸಹಕಾರಿ ಸಂಘದ ನಿವೃತ್ತ ಉಪವ್ಯವಸ್ಥಾಪಕ ವಿಶ್ವನಾಥ ಗೌಡ ಪಿಜಕ್ಕಳ, ಶ್ರೀ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವೇಣುಗೋಪಾಲ ನಾಯಕ್ ಕುಳ್ಳಾಜೆ, ಬೆದ್ರೋಡಿ ವಿದ್ಯಾನಗರ ಜನಸ್ಪಂದನ ಸಮಿತಿ ಮಾಜಿ ಅಧ್ಯಕ್ಷ ಹರಿಕೃಷ್ಣ ಬೆದ್ರೋಡಿ ಶುಭಹಾರೈಸಿದರು. ಮುದ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ ಶಿಬಾರ್ಲಗುತ್ತು, ಪ್ರಗತಿಬಂಧು ಸ್ವಸಹಾಯ ಸಂಘಗಳ ಕಾಂಚನ ಒಕ್ಕೂಟದ ಅಧ್ಯಕ್ಷ ದಿನೇಶ್ ಎಂ., ಮುದ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷರಾದ ತಿಮ್ಮಪ್ಪ ಗೌಡ ಉಪಾತಿಪಾಲು, ಸೋಮಸುಂದರ ಕೊಡಿಪ್ಪಾನ, ಮುದ್ಯ ಶಿವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ರುಕ್ಮಯ್ಯ ಗೌಡ ಪೂಯಿಲ, ಮುದ್ಯ ಶ್ರೀ ಪಂಚಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ವಸಂತಿ ಜಯರಾಜ್ ಬೆದ್ರೋಡಿ, ಮುದ್ಯ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷ ಸಾವಿತ್ರಿಹರೀಶ್ ಶಿಬಾರ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಧನಂಜಯ ಬಾರಿಕೆ ಸ್ವಾಗತಿಸಿ, ಸೋಮಸುಂದರ ಕೊಡಿಪ್ಪಾನ ವಂದಿಸಿದರು. ಗಣೇಶ್ ಕುಲಾಲ್ ನಿರೂಪಿಸಿದರು.ಶರತ್ ಮುದ್ಯ ಪ್ರಾರ್ಥಿಸಿದರು.
ಧಾರ್ಮಿಕ ಸಭೆ:
ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯಲ್ಲಿ ನಿವೃತ್ತ ಪ್ರಾಧ್ಯಾಪಕ ನೇಮಿಚಂದ್ರ ಗೌಡ ಮುದ್ಯ ಧಾರ್ಮಿಕ ಉಪನ್ಯಾಸ ನೀಡಿದರು. ಶ್ರೀ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣಪ್ರಸಾದ್ ಉಡುಪ ಅವರು ದೇವಸ್ಥಾನದ ಜೀರ್ಣೋದ್ದಾರದ ಬಗ್ಗೆ ತಿಳಿಸಿದರು. ಅತಿಥಿಗಳಾಗಿದ್ದ ಉಪ್ಪಿನಂಗಡಿ ಗಿರಿಜಾ ಕ್ಲಿನಿಕ್ನ ದಂತ ವೈದ್ಯ ಡಾ.ರಾಜಾರಾಮ್ ಕೆ.ಬಿ., ಕಡಬ ರತ್ನಶ್ರೀ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಾಧಾಕೃಷ್ಣ ಕುವೆಚ್ಚಾರು, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ.ಪ್ರಸಾದ್, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಜಿತ್ ಪಾಲೇರಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ. ಶುಭಹಾರೈಸಿದರು. ಸ್ವರ್ಣಲತಾ ಪಡಿವಾಳ್ ಬಾರಿಕೆ, ಬಜತ್ತೂರು ಗ್ರಾ.ಪಂ.ಉಪಾಧ್ಯಕ್ಷೆ ವಿಮಲಭರತ್ ಉಪಸ್ಥಿತರಿದ್ದರು. ಸಭಾಭವನಕ್ಕೆ ಇಂಟರ್ಲಾಕ್ ಅಳವಡಿಕೆಗೆ ಆರ್ಥಿಕ ನೆರವು ನೀಡಿದ ನೇಮಿಚಂದ್ರ ಗೌಡ ಮುದ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಗೋಪಾಲ ವಳಾಲುದಡ್ಡು ಸ್ವಾಗತಿಸಿ, ಧನಂಜಯ ಬಾರಿಕೆ ವಂದಿಸಿದರು. ಜಗದೀಶ್ ಬಾರಿಕೆ ನಿರೂಪಿಸಿದರು.
ಶೋಭಾಯಾತ್ರೆ:
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು. ಭಾಸ್ಕರ ಮತ್ತು ಉಮೇಶ ಬಿ.ಸಿ.ರೋಡ್ ಬಳಗದವರಿಂದ ಭಕ್ತಿ ಗಾನ ಸುಧೆ ನಡೆಯಿತು. ಸಂಜೆ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆಯೊಂದಿಗೆ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಹೊರಟು ಪಡ್ಪು ದೈವಸ್ಥಾನ ಮುಂಭಾಗದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ನೀರಕಟ್ಟೆಗೆ ತೆರಳಿ ಅಲ್ಲಿಂದ ಹಿಂತಿರುಗಿ ವಳಾಲು ಮೂಲಕ ಮುಗೇರಡ್ಕ ಕ್ರಾಸ್ ಬೆದ್ರೋಡಿ ನರ್ಸರಿ ಬಳಿ ಕಟ್ಟೆಪೂಜೆ ನಡೆದು ನೇತ್ರಾವತಿ ನದಿಯಲ್ಲಿ ದೇವರ ಮೂರ್ತಿ ವಿಸರ್ಜನೆ ನಡೆಯಿತು.