ನೆಲ್ಯಾಡಿ ಗಣೇಶೋತ್ಸವದ ಶೋಭಾಯಾತ್ರೆ-ಗಮನ ಸೆಳೆದ ಶಾಸ್ತಾರ ಫ್ರೆಂಡ್ಸ್‌ನ ಕಾರ್ಗಿಲ್ 25ನೇ ವಿಜಯೋತ್ಸವದ ಸ್ಥಬ್ದ ಚಿತ್ರ

0

ನೆಲ್ಯಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೆಲ್ಯಾಡಿ-ಕೌಕ್ರಾಡಿ ಇದರ ವತಿಯಿಂದ ಸೆ.7ರಂದು ನೆಲ್ಯಾಡಿ-ಕೌಕ್ರಾಡಿ ಶ್ರೀ ಶಬರೀಶ ಕಲಾಮಂದಿರದಲ್ಲಿ ನಡೆದ 42ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆಯಲ್ಲಿ ಹಾರ್ಪಳ ಕುತ್ರಾಡಿ ಶಾಸ್ತಾರ ಫ್ರೆಂಡ್ಸ್ ನಿರ್ಮಾಣದ ’ಆರ್ಟಿಲರಿ ಗನ್’ ಸ್ಥಬ್ದ ಚಿತ್ರ ಎಲ್ಲರ ಗಮನ ಸೆಳೆಯಿತು.

ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷದ ನೆನಪಿಗಾಗಿ ಈ ಸ್ಥಬ್ದ ಚಿತ್ರವನ್ನು ನಿರ್ಮಿಸಲಾಗಿದ್ದು, ಶಾಸ್ತಾರ ಫ್ರೆಂಡ್ಸ್‌ನ ಯುವಕರು ಸ್ವತಃ ತಯಾರಿಸಿದ ಈ ಸ್ಥಬ್ದ ಚಿತ್ರ ಜನರ ಗಮನ ಸೆಳೆಯಿತು ಹಾಗೂ ಜನ ಮಣ್ಣನೆ ಪಡೆದುಕೊಂಡಿದೆ. ಅನೇಕ ಸ್ಥಬ್ದ ಚಿತ್ರಗಳು ಮೆರವಣಿಗೆಗೆ ರಂಗು ನೀಡಿದ್ದು, ಅದರಲ್ಲೂ ಶಾಸ್ತಾರ ಫ್ರೆಂಡ್ಸ್ ಕುತ್ರಾಡಿ ಹಾರ್ಪಳ ನೆಲ್ಯಾಡಿ ಸಂಘದ ಸದಸ್ಯರು “ಕಾರ್ಗಿಲ್ 25ನೇ ವಿಜಯೋತ್ಸೋವದ ನೆನಪಿಗಾಗಿ ತಾವೇ ನಿರ್ಮಾಣ ಮಾಡಿ ಪ್ರಸ್ತುತ ಪಡಿಸಿದ ಸ್ತಬ್ದ ಚಿತ್ರವು ಗಮನ ಸೆಳೆಯಿತು.

ಮಿಲಿಟರಿ ಸಾಧನೆಗಳ ಬಗ್ಗೆ ಅರಿವು ಮೂಡಿಸುವುದರೊಂದಿಗೆ ದೇಶಭಕ್ತರಿಗೆ ದೇಶಾಭಿಮಾನ ಮೂಡಿಸುವ ಸ್ಫೂರ್ತಿಯ ಸ್ತಬ್ದ ಚಿತ್ರವಾಗಿ ಗಮನ ಸೆಳೆದಿದೆ. ಶಾಸ್ತಾರ ಫ್ರೆಂಡ್ಸ್ ಪ್ರಸ್ತುತ ಪಡಿಸಿದ ಈ ಸ್ತಬ್ದ ಚಿತ್ರ ನಿರ್ಮಾಣಕ್ಕೆ ಸಂಘದ ಸದಸ್ಯರು ನಿವೃತ್ತ ಸೇನಾ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಸ್ಥಬ್ದ ಚಿತ್ರ ರಚನೆ ಮಾಡಿದ್ದರು. ಯಾವುದಾದರು ಕಾರ್ಯಕ್ರಮಗಳಿಗೆ ಈ ಸ್ತಬ್ದ ಚಿತ್ರ ಬೇಕಿದ್ದಲ್ಲಿ ಶಿವಪ್ರಸಾದ್ ದುಗ್ಗಲ ಅಧ್ಯಕ್ಷರು ಶಾಸ್ತಾರ ಫ್ರೆಂಡ್ಸ್ ಕುತ್ರಾಡಿ ಹಾರ್ಪಳ ಮೊ:9964372198ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here