ಬಡಗನ್ನೂರು:ಸುಳ್ಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ವತಿಯಿಂದ 35ನೇ ವರ್ಷದ ಗಣೇಶೋತ್ಸವವು ಸೆ.7 ರಂದು ವಿವಿಧ ಹಾಗೂ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಸೆ.7 ರಂದು ಬೆಳಿಗ್ಗೆ ಸುಳ್ಯಪದವು ಶಬರನಗರ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ ರವರು ದೀಪ ಪ್ರಜ್ವಲಿಸಿ ಶುಭಹಾರೈಸಿದರು. ಗಣಪತಿ ಹವನ, ವಿಗ್ರಹ ಪ್ರತಿಷ್ಠೆ,12.30 ರಿಂದ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನ ಭೋಜನ ನಡೆಯಿತು. ಅಪರಾಹ್ನ ಗಂ 3 ರಿಂದ ವಿವಿಧ ಭಜನಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ,ನಡೆಯಿತು.
ಬಹುಮಾನ ವಿತರಣೆ ;-
ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಬಹುಮಾನ ವಿತರಣೆಯನ್ನು ರುಕ್ಮಾಂಗದ ಅಚಾರ್ಯ ಶಬರಿನಗರ ನೆರವೇರಿಸಿದರು.
ವೈಭವದ ಶೋಭಾಯಾತ್ರೆ;-
ಶ್ರೀ ಗಣೇಶನ ವೈಭವದ ಶೋಭಾಯಾತ್ರೆಯು ಭಜನಾ ಮಂದಿರದಿಂದ ಹೊರಟು ಕುಣಿತ ಭಜನೆ, ಗೊಂಬೆ, ಬ್ಯಾಂಡ್ ,ವಾದ್ಯ ,ಡಿಜೆ ಮೂಲಕ ಮರದಮೂಲೆ ಮುರಳೀಧರ ಭೋಗಲ್ಕರ್ ಬಿ.ಎಸ್ ರವರ ತೋಟದ ಕೆರೆಯಲ್ಲಿ ಜಲಸ್ತಂಭನ ಮಾಡಲಾಯಿತು .
ಈ ಸಂದರ್ಭದಲ್ಲಿ ಭಜನಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷರು ಮತ್ತು ಸರ್ವಸದಸ್ಯರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸರ್ವಸದಸ್ಯರು, ಶ್ರೀ ಅಯ್ಯಪ್ಪ ಸ್ವಾಮಿ ಆರಾಧನಾ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಶಬರಿನಗರ ಸ್ವಾಮಿ ಕೊರಗಜ್ಜ ಸಮಿತಿ ಅಧ್ಯಕ್ಷರು ಆಯುಧ ಪೂಜಾ ಸಮಿತಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಸುಳ್ಯಪದವು ಜಾಗೃತ ಹಿಂದೂ ಜಾಗರಣ ಸಮಿತಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಹಾಗೂ ಊರ ಭಕ್ತಾದಿಗಳು ಭಾಗವಹಿಸಿದ್ದರು.