ಅರಿಯಡ್ಕ ವಲಯ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ

0

ಬಡಗನ್ನೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಪುತ್ತೂರು,ಅರಿಯಡ್ಕ ವಲಯದ 10 ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವು ಸೆ.10 ರಂದು ಕಾವು ಪಂಚಾಯತ್ ಸುವರ್ಣಗ್ರಾಮ ಸಭಾಭವನದಲ್ಲಿ ನಡೆಯಿತು. 

ಅರಿಯಡ್ಕ ವಲಯಾಧ್ಯಕ್ಷ  ದಿನೇಶ್ ರೈ ಕುತ್ಯಾಳ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಒಕ್ಕೂಟದ ನಿರ್ವಹಣೆ ಮಾಸಿಕ ವರದಿಗಳ ಪರಿಶೀಲನೆ ಎಸ್.ಬಿ  ಮತ್ತು ಸಿಸಿ ಖಾತೆ ವ್ಯತ್ಯಾಸ ಮತ್ತು ಲಾಭ ನಷ್ಟದ, ಆಂತರಿಕ ಲೆಕ್ಕ ಪರಿಶೋಧನೆ, ಬಡ್ಡಿ ಲೆಕ್ಕಾಚಾರ,ಮತ್ತು ಮರುಪಾವತಿ ಚೀಟಿ ಲೆಕ್ಕಪರಿಶೋಧನೆ ಬಗ್ಗೆ ಮಾಹಿತಿಯನ್ನು ನೀಡಿದರು.

ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ ತಂದೆ ತಾಯಿಯವರು ಜೀವನ ನಡೆಸುತ್ತಿದ್ದ ರೀತಿ ಒಂದು ಹೊತ್ತಿನ ಊಟ ಒಳ್ಳೆಯ ಬಟ್ಟೆ ಪಡೆದುಕೊಳ್ಳಲು ಅಸಾಧ್ಯವಾದ ದಿನಗಳ ಸಂದರ್ಭದಲ್ಲಿ ಪೂಜ್ಯ  ಖಾವಂದರು ಹುಟ್ಟು ಹಾಕಿದ ಗ್ರಾಮ ಅಭಿವೃದ್ಧಿ ನಮ್ಮ ಪಾಲಿಗೆ ಬೆಳಕಾಗಿ ಬಂತು ಉತ್ತಮ ಬದುಕು ಕಟ್ಟಿಕೊಳ್ಳಲು ಅವಕಾಶವಾಯಿತು ಯೋಜನೆಯ ಕಾರ್ಯಕ್ರಮಗಳ ಪಾರದರ್ಶಕತೆಗೆ ಇರುವ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸುವಂತೆ ಮಾರ್ಗದರ್ಶನ ನೀಡಿದರು. ಯಾವ ವಿಷಯಗಳನ್ನು ಹೇಳಿ ತಿಳಿದುಕೊಳ್ಳುವುದಕ್ಕಿಂತ ನೋಡಿ ತಿಳಿದುಕೊಳ್ಳಬೇಕು ಎಂದರು.

ಪಿಆರ್‌ಕೆಯ ಪ್ರಯೋಜನ ಮತ್ತು ಪಿಆರ್‌ಕೆಗೆ ಬಾಂಡ್ ಬರದೇ ಇರಲು ಕಾರಣ ಇದರ ಬಗ್ಗೆ ಮಾಹಿತಿ ನೀಡಿದ ಅವರು ಒಕ್ಕೂಟ ಪದಾಧಿಕಾರಿಗಳು ವಲಯದಲ್ಲಿ ಯಾವ ಸಮಸ್ಯೆ ಬಂದರೂ ಅದಕ್ಕೆ ಸ್ಪಂದಿಸಿ ಸಮಸ್ಯೆ ಬಗೆಹರಿಸುತ್ತೀರಿ ಎಂಬ ನಂಬಿಕೆ ನಮ್ಮದಾಗಿದೆ. ಒಕ್ಕೂಟವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಎಲ್ಲಾ ಪದಾಧಿಕಾರಿಗಳ ಜವಾಬ್ದಾರಿ ಬಹು ಮುಖ್ಯವಾದದ್ದು ಎಂದು ಹೇಳಿದರು. ಬಳಿಕ  ವಲಯ ಇಬ್ಬರು ಪದಾಧಿಕಾರಿಯವರು ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪಟ್ಟೆ -ಬಡಗನ್ನೂರು ಒಕ್ಕೂಟದ ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ, ಬಡಗನ್ನೂರು ಒಕ್ಕೂಟದ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ, ಅಮ್ಚಿನಡ್ಕ ಒಕ್ಕೂಟ ಅಧ್ಯಕ್ಷ ತಿಮ್ಮಯ್ಯ, ಮೇನಾಲ ಒಕ್ಕೂಟ ಅಧ್ಯಕ್ಷೆ ಗೀತಾ, ಕಾವು ಒಕ್ಕೂಟ ಅಧ್ಯಕ್ಷೆ ಸುಶೀಲಾ , ಅರಿಯಡ್ಕ ಬಿ ಒಕ್ಕೂಟ ಅಧ್ಯಕ್ಷ ತಿಲಕ್  ರೈ ಕುತ್ಯಾಡಿ, ಆಂತರಿಕ ಲೆಕ್ಕಾಪರಿಶೋದಕಿ ಕುಮಾರಿ ಲತಾ  ಹಾಗೂ ಒಕ್ಕೂಟದ ಪದಾಧಿಕಾರಿಗಳು ಮತ್ತು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವಲಯದ ಮೇಲ್ವಿಚಾರಕ ಹರೀಶ್ ಸ್ವಾಗತಿಸಿದರು.  ಬಡಗನ್ನೂರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸಾವಿತ್ರಿ ವಂದಿಸಿದರು.ಮೇನಾಲ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸುಂದರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here