ಪೆರ್ನೆ: ಶ್ರೀರಾಮಚಂದ್ರ ಪ.ಪೂ.ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

0

ಸದಭಿರುಚಿ ಚಿಂತನೆ, ಧನಾತ್ಮಕ ಯೋಚನೆಗಳನ್ನು ರೂಢಿಸಿಕೊಳ್ಳಿ: ವಿಜಯಲಕ್ಷ್ಮೀ ಶೆಟ್ಟಿ


ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವಿಟ್ಲ, ಜನ ಜಾಗೃತಿ ವೇದಿಕೆ ಪೆರ್ನೆ ವಲಯ ಹಾಗೂ ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇವುಗಳ ಸಹಭಾಗಿತ್ವದಲ್ಲಿ ಪೆರ್ನೆ ಶ್ರೀ ರಾಮಚಂದ್ರ ಪದವಿ ಪೂರ್ವ ಕಾಲೇಜು ಅಯೋಧ್ಯಾ ನಗರದಲ್ಲಿ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ವಲಯಾಧ್ಯಕ್ಷ ರಾಬರ್ಟ್ ಫೆರ್ನಾಂಡಿಸ್ ರವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲ ಶೇಖರ್ ರೈ ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಿವೃತ್ತ ಶಿಕ್ಷಕಿ ವಿಜಯಲಕ್ಷ್ಮೀ ವಿ.ಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನವು ಅತ್ಯಮೂಲ್ಯವಾದುದು, ಜೀವನವನ್ನು ಸಕಾರಾತ್ಮಕವಾಗಿ ಸ್ವೀಕರಿಸಿದರೆ ಸೋಲೆಂಬುದಿರುವುದಿಲ್ಲ, ಕೆಟ್ಟ ವ್ಯಸನಗಳು ಸಹವಾಸ ದೋಷದಿಂದ ಬರುತ್ತವೆ, ನಿಜವಾದ ಸ್ನೇಹಿತನೆಂದರೆ ದಾರಿ ತಪ್ಪಿದಾಗ ತಡೆಯುವವನು, ದುಶ್ಚಟಗಳಿಗೆ ಬಲಿಯಾದರೆ ಅದರಿಂದ ಬಿಡಿಸಿಕೊಳ್ಳುವುದು ತುಂಬಾ ಕಷ್ಟ, ವ್ಯಸನ ಹೊಂದಿರುವ ವ್ಯಕ್ತಿ ಬದುಕಿದ್ದೂ ವ್ಯರ್ಥ, ವಿದ್ಯಾರ್ಥಿಗಳು ಯಾವಾಗಲೂ ಸದಭಿರುಚಿಯ ಚಿಂತನೆಗಳು ಧನಾತ್ಮಕ ಯೋಚನೆಗಳನ್ನು ರೂಢಿಸಿಕೊಳ್ಳುವ ಮೂಲಕ ಸದೃಢ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಬೇಕು ಎಂದು ಮಾಹಿತಿ ಮಾರ್ಗದರ್ಶನವನ್ನು ನೀಡಿದರು.

ವಲಯದ ಜನಜಾಗೃತಿ ವೇದಿಕೆ ಸದಸ್ಯ ಉಮಾನಾಥ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಜಾಗೃತಿ ವೇದಿಕೆಯ ಸದಸ್ಯರಾದ ರೊಟೇರಿಯನ್ ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು, ನವೀನ್ ಕುಮಾರ್ ಪದಬರಿ ಶುಭ ಹಾರೈಸಿದರು. ಉಪನ್ಯಾಸಕಿ ಇಂದಿರಾ ಪ್ರಾರ್ಥಿಸಿದರು. ಪೆರ್ನೆ ಬಿ ವಿಭಾಗದ ಸೇವಾಪ್ರತಿನಿಧಿ ಶಶಿಕಲಾ, ಪೆರ್ನೆ ಎ ಸೇವಾಪ್ರತಿನಿಧಿ ತ್ರಿವೇಣಿಯವರು ಸ್ವಾಗತ ಮತ್ತು ವಂದನಾರ್ಪಣೆ ಮಾಡಿದರು. ವಲಯ ಮೇಲ್ವಿಚಾರಕಿ ಶಾರದಾ ಎ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕ ವೃಂದ ಸಹಕರಿಸಿದರು.

LEAVE A REPLY

Please enter your comment!
Please enter your name here