ನ.30: ಕುಂತೂರುಪದವು ಸಂತಜಾರ್ಜ್ ಪ್ರೌಢಶಾಲೆಯಲ್ಲಿ ಕಡಬ ತಾ|4ನೇ ಕನ್ನಡ ಸಾಹಿತ್ಯ ಸಮ್ಮೇಳನ – ಕಸಾಪ ಕಡಬ ತಾಲೂಕು ಘಟಕದ ಸಭೆಯಲ್ಲಿ ನಿರ್ಧಾರ

0

ಕಡಬ: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ಘಟಕದ ನೇತೃತ್ವದಲ್ಲಿ ನ.30ರಂದು ಕಡಬ ತಾಲೂಕಿನ ಕುಂತೂರು ಪದವು ಸಂತಜಾರ್ಜ್ ಅನುದಾನಿತ ಪ್ರೌಢಶಾಲೆಯಲ್ಲಿ ಕಡಬ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್‌ನ ಕಡಬ ತಾಲೂಕು ಘಟಕದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ.


ಸಭೆಯು ಕಡಬ ತಾಲೂಕು ಘಟಕದ ಅಧ್ಯಕ್ಷರಾದ ಕೆ.ಸೇಸಪ್ಪ ರೈಯವರ ಅಧ್ಯಕ್ಷತೆಯಲ್ಲಿ ಕುಂತೂರುಪದವು ಸಂತಜಾರ್ಜ್ ಅನುದಾನಿತ ಪ್ರೌಢಶಾಲೆಯಲ್ಲಿ ನಡೆಯಿತು. ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಪ್ರತಿಯೊಬ್ಬರೂ ಕೈ ಜೋಡಿಸಿ ಇದೊಂದು ಮಾದರಿ ಸಾಹಿತ್ಯ ಸಮ್ಮೇಳನವಾಗಲು ಸಹಕರಿಸುವಂತೆ ಕೆ.ಸೇಸಪ್ಪ ರೈಯವರು ಮನವಿ ಮಾಡಿದರು. ಇದೇ ವೇಳೆ ಸ್ವಾಗತ ಸಮಿತಿಗೆ ಪದಾಧಿಕಾರಿಗಳನ್ನು ಹಾಗೂ ಉಪ ಸಮಿತಿಗಳಿಗೆ ಸಂಚಾಲಕರನ್ನು ಆಯ್ಕೆ ಮಾಡಲಾಯಿತು. ಹಿರಿಯ ಸಾಹಿತಿ ನಾರಾಯಣ ಭಟ್ ಟಿ. ಅವರು ವಿವಿಧ ಸಮಿತಿಗಳ ಸಂಚಾಲಕರ ಜವಾಬ್ದಾರಿಗಳನ್ನು ತಿಳಿಸಿದರು. ಸಂತಜಾರ್ಜ್ ಪ್ರೌಢಶಾಲೆಯ ಸಂಚಾಲಕ ವಿ.ವಿ.ಅಬ್ರಹಾಂ, ಮಾಜಿ ಸಂಚಾಲಕ ರೋಯಿ ಅಬ್ರಹಾಂ, ಕಾರ್ಯದರ್ಶಿ ವಿ.ವಿ.ವರ್ಗೀಸ್, ರಾಮಕುಂಜ ಪ.ಪೂ.ಕಾಲೇಜು ಪ್ರಿನ್ಸಿಪಾಲ್ ಚಂದ್ರಶೇಖರ್ ಕೆ., ಕಸಾಪ ಕಡಬ ತಾಲೂಕು ಘಟಕದ ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಜಿ.ಪಂ.ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಕುಂತೂರು ಗ್ರಾ.ಪಂ. ಅಧ್ಯಕ್ಷೆ ಸಂಧ್ಯಾ, ಕಸಾಪ ಕಡಬ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ ಮತ್ತಿತರರು ಸಲಹೆ ಸೂಚನೆ ನೀಡಿದರು. ಕಸಾಪ ಕಡಬ ತಾಲೂಕು ಘಟಕದ ಪದಾಧಿಕಾರಿಗಳಾದ ವೆಂಕಟ್ರಮಣ ಭಟ್ ನೆಲ್ಯಾಡಿ, ನಾಗರಾಜ್ ಎನ್.ಕೆ ಕಡಬ, ಕಿಶೋರ್ ಕುಮಾರ್ ಬಿ., ಗ್ರೇಸಿ ಪಿಂಟೋ, ಗ್ರಾ.ಪಂ.ಸದಸ್ಯರು, ಸಂತಜಾರ್ಜ್ ಪ್ರೌಢಶಾಲಾ ಶಿಕ್ಷಕರು, ನಿವೃತ್ತ ಶಿಕ್ಷಕರು, ಪೋಷಕರು, ಕುಂತೂರುಪದವು ಯುವಕ ಮಂಡಲದ ಪದಾಧಿಕಾರಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಪರಿಸರದ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು. ಸಂತಜಾರ್ಜ್ ಪ್ರೌಢಶಾಲಾ ಮುಖ್ಯ ಶಿಕ್ಷಕ ಹರಿಶ್ಚಂದ್ರ ಕೆ. ಸ್ವಾಗತಿಸಿ, ಬಾಲಚಂದ್ರ ಮುಚ್ಚಿಂತಾಯ ವಂದಿಸಿದರು.

LEAVE A REPLY

Please enter your comment!
Please enter your name here