




ಕೆಯ್ಯೂರು: ಕೆಯ್ಯೂರು ಗ್ರಾಮದ ಕೆಯ್ಯೂರಿನಲ್ಲಿ ಐದು ಬೂತ್‌ಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆಗಳ ತನಕ ಸುಮಾರು 47 ಮನೆಗಳ ಸಂಪರ್ಕಿಸಿ, 101 ಸದಸ್ಯರ ನೊಂದಾವಣಿಯು ಭಾರತೀಯ ಜನತಾ ಪಾರ್ಟಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಇವರ ನೇತೃತ್ವದಲ್ಲಿ ಪ್ರವಾಸ ಮಾಡಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮಾದರಿಯ ಸದಸ್ಯತ್ವ ಅಭಿಯಾನ ಸೆ.16ರಂದು ನಡೆಸಲಾಯಿತು.




ಈ ಸಂದರ್ಭದಲ್ಲಿ ಕೆಯ್ಯೂರು ಶಕ್ತಿ ಕೇಂದ್ರ ಸಂಚಾಲಕ ಶರತ್ ಕುಮಾರ್ ರೈ ದೇರ್ಲ, ಸದಸ್ಯತ್ವ ಅಭಿಯಾನದ ಸಂಚಾಲಕ ಸುರಕ್ಷಾ ರೈ ಕೊಡಂಬು, ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯೆ ಮಮತಾ ಸತೀಶ್ ಕೆಯ್ಯೂರು, ಕೆದಂಬಾಡಿ ಸಿ.ಎ ಬ್ಯಾಂಕ್ ನಿರ್ದೇಶಕ ರಿತೇಶ್ ಪಾಟಾಳಿ, ಕೆಯ್ಯೂರು ಶಕ್ತಿಕೇಂದ್ರ ಪ್ರಮುಖ ಕಾರ್ಯಕರ್ತರಾದ ಸುಬ್ರಹ್ಮಣ್ಯ ರೈ ಬೊಳಿಕಲ ಮಠ, ಬಾಬು ಪಾಟಾಳಿ ದೇರ್ಲ, ಮನೋಜ್ ರೈ ಮಾಡಾವು, ದಿವಾಕರ ಪೂಜಾರಿ ಪಲ್ಲತ್ತಡ್ಕ, ಕಿಟ್ಟ ಅಜಿಲ ಕಣಿಯಾರು, ಜಗನ್ನಾಥ ರೈ ದೇರ್ಲ, ಮಹಾಲಿಂಗ ಪಾಟಾಳಿ ದೇರ್ಲ, ಚೇತನ್ ದೇರ್ಲ, ಉಪಸ್ಥಿತರಿದ್ದರು.












