ಪುತ್ತೂರು: ಭಕ್ತ ಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಪನ್ನಗೊಂಡ ನರಿಮೊಗರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಹಿರಿಯರ ವಿಭಾಗದಲ್ಲಿ ಮುಂಡೂರು ಶಾಲೆಯು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಕಿರಿಯರ ವಿಭಾಗದ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಅಭಿರಾಮ ಹಾಗೂ ಹಿರಿಯರ ವಿಭಾಗದ ಕನ್ನಡ ಕಂಠಪಾಠದಲ್ಲಿ ನಮಿತ್ ಕೆ ಎಸ್, ಇಂಗ್ಲಿಷ್ ಕಂಠಪಾಠದಲ್ಲಿ ಹಲಿಮತ್ ಹಿಬಾ, ಹಿಂದಿ ಕಂಠಪಾಠದಲ್ಲಿ ದೀಕ್ಷಾ, ಹಾಗೂ ದೇಶಭಕ್ತಿ ಗೀತೆಯಲ್ಲಿ ನಿರೀಕ್ಷಾ ಬಿ ಇವರು ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕಿರಿಯರ ವಿಭಾಗದ ಕ್ಲೇ ಮಾಡಲಿಂಗ್ ನಲ್ಲಿ ವಿಶು ಎನ್ ಆಚಾರ್ಯ ಹಾಗೂ ಹಿರಿಯರ ವಿಭಾಗದ ಕಥೆ ಹೇಳುವ ಸ್ಪರ್ಧೆಯಲ್ಲಿ ಮುಹಮ್ಮದ್ ರಾಝಿಕ್, ಆಶುಭಾಷಣದಲ್ಲಿ ಅಭಿನವ್ ಪಿ ಎನ್ , ಪ್ರಬಂಧ ಸ್ಪರ್ಧೆಯಲ್ಲಿ ಫಾತಿಮತ್ ಸನಾ ಎ ಎಚ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಕಿರಿಯರ ವಿಭಾಗದ ಚಿತ್ರಕಲೆಯಲ್ಲಿ ಅಭಿರಾಮ ಮತ್ತು ಅರೇಬಿಕ್ ಧಾರ್ಮಿಕ ಪಠಣದಲ್ಲಿ ಅಫ್ನಾನ್ ಹಾಗೂ ಹಿರಿಯರ ವಿಭಾಗದ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ತೇಜಸ್ , ಕ್ಲೇ ಮಾಡಲಿಂಗ್ ನಲ್ಲಿ ಅಫ್ನಾ ಮತ್ತು ಮಿಮಿಕ್ರಿಯಲ್ಲಿ ಗುಣಸಾಗರ್ ಇವರು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಶಾಲಾ ಮುಖ್ಯ ಗುರುಗಳಾದ ವಿಜಯ ಪಿ ತಿಳಿಸಿರುತ್ತಾರೆ.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ರಮೇಶ ಗೌಡ ಪಜಿಮಣ್ಣು ಇವರು ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಶಿಕ್ಷಕ ವೃಂದದವರಿಗೆ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.