ಕಡಬ ತಾಲೂಕು ಮರ ವ್ಯಾಪಾರಸ್ಥರ ಸಂಘ ಅಸ್ತಿತ್ವಕ್ಕೆ

0

ಕಡಬ: ಮರ ವ್ಯಾಪಾರಸ್ಥರಿಗೆ ಆಗುವ ತೊಂದರೆ ಹಾಗು ಅನ್ಯ ರಾಜ್ಯಗಳ ವ್ಯಾಪಾರಸ್ಥರ ದಬ್ಬಾಳಿಕೆಯಿಂದ ಕಠಿಣ ಪರಿಸ್ಥಿತಿ ಎದುರಿಸುತ್ತಿರುವ ರಾಜ್ಯದ ವ್ಯಾಪಾರಿಗಳು, ಜಿಎಸ್ಟಿ ಮುಖಾಂತರ ತೆರಿಗೆಗಳನ್ನು ಕಟ್ಟುತ್ತಿದ್ದೇವೆ, ಆದರೂ ಕೂಡ ವ್ಯಾಪಾರದಲ್ಲಿ ನಷ್ಟಗಳು ಸಂಭವಿಸುತ್ತಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಮೊದಲನೇ ಹೆಜ್ಜೆಯಾಗಿ ಒಕ್ಕಲಿಗರ ಸಭಾಭವನ ಕಡಬದಲ್ಲಿ ಕೆ.ಕೆ.ಅಬೂಬಕ್ಕರ್ ಅವರ ಅಧ್ಯಕ್ಷತೆಯಲ್ಲಿ ಸಮಾಲೋಚನೆ ಸಭೆ ನಡೆಸಿ ಕಡಬ ತಾಲೂಕು ಮಟ್ಟದ ಮರ ವ್ಯಾಪಾರಸ್ಥರ ಸಮಿತಿ ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ ಸುಂಕದಕಟ್ಟೆ, ಅಧ್ಯಕ್ಷರಾಗಿ ಕೆ.ಕೆ.ಅಬೂಬಕ್ಕರ್ ಕೋಲ್ಪೆ, ಉಪಾಧ್ಯಕ್ಷರಾಗಿ ಉಮೇಶ್ ಮಡ್ಯಡ್ಕ, ಇಸ್ಮಾಯಿಲ್ ಕಲಾರ, ಪ್ರದಾನ ಕಾರ್ಯದರ್ಶಿಯಾಗಿ ಇರ್ಷಾದ್ ಕಡಬ, ಜೊತೆ ಕಾರ್ಯದರ್ಶಿಯಾಗಿ ಕೆ.ಇ ಮುಹಮ್ಮದ್ ರಫೀಕ್ ಕೋಲ್ಪೆ, ಶಾಕಿರ್ ತಿಮರಡ್ಡ, ಕೋಶಾಧಿಕಾರಿಯಾಗಿ ಅಶ್ರಫ್ ಮರ್ದಾಳ, ಗೌರವ ಸಲಹೆಗಾರರಾಗಿ
ರಝಾಕ್ ಕೋಡಿಂಬಾಡಿ, ಸರ್ಪುದ್ದೀನ್ ಸುಂಕದಕಟ್ಟೆ, ರಝಾಕ್ ನೆಲ್ಯಾಡಿ, ಬಶೀರ್ ಮರ್ದಾಳ, ಅಶ್ರಫ್ ನಾಗಮಾರ್, ಕೆ.ಎಂ ಮುಹಮ್ಮದ್ ಕೋಲ್ಪೆ, ಸಂಘಟನಾ ಕಾರ್ಯದರ್ಶಿಯಾಗಿ ಉಮ್ಮರ್ ಕೊಂತೂರ್, ಮಾದ್ಯಮ ಕಾರ್ಯದರ್ಶಿಯಾಗಿ, ಜಾಬೀರ್ ಕಲಾರ ಹಾಗೂ ಸದಸ್ಯರಾಗಿ ಅನ್ಸಾರ್ ಕಲಾರ, ಅಶ್ರಫ್ ತಿಮರಡ್ಡ, ಬಶೀರ್ ಕಡಬ, ಮುಹಮ್ಮದ್ ಅಶ್ರಫ್ ಕಡಬ, ಹನೀಫ್ ಬೆಳಂದೂರು
ಹಾರಿಸ್ ತಿಮರಡ್ಡ, ಯಾಕೂಬ್ ಬೆಳಂದೂರು, ಯೂಸುಫ್ ನೆಲ್ಯಾಡಿ, ದಾವೂದ್ ಕಲಾರ, ನಾಸಿರ್ ಸವಣೂರು, ಅಶ್ರಫ್ ಕಲಾರ, ಸಮದ್ ಕಡಬ, ಖಾದರ್ ಕಡಬ ಇವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here