ರೂ. 87,70,06,127.76 ವ್ಯವಹಾರ – ರೂ. 40,05,284.56 ನಿವ್ವಳ ಲಾಭ – 10% ಡಿವಿಡೆಂಟ್
ವಿಟ್ಲ: ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಪೊನ್ನೊಟ್ಟು ಶಿವಗಿರಿ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಿತು. ಸಂಘದ ಹಿರಿಯ ಸದಸ್ಯರಾದ ಗಂಗಯ್ಯ ಎ. ಮೆಲ್ಕಾರು, ನೋಣಯ್ಯ ಪೂಜಾರಿ ಕಲ್ಲಕಟ್ಟ, ರಮೇಶ್ ಕಡಂಬು, ಜಗದೀಶ್ ಅಳಕೆಮಜಲು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಘದ ಅಧ್ಯಕ್ಷರಾದ ಸಂಜೀವ ಪೂಜಾರಿ ನಿಡ್ಯರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು 2023-24ನೇ ಸಾಲಿನಲ್ಲಿ ರೂ. 87,70,06,127.76 ವ್ಯವಹಾರ ನಡೆಸಿ ರೂ. 40,05,284.56 ನಿವ್ವಳ ಲಾಭ ಗಳಿಸಿದೆ. ಸಂಘವು ಆಡಿಟ್ ವರ್ಗೀಕರಣದಲ್ಲಿ ‘ಎ’ ಶ್ರೇಣಿ ಪಡೆದಿದ್ದು, ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತ್ ಪಿ.ರವರು ವರದಿ ಮಂಡಿಸಿದರು.
ಉಪಾಧ್ಯಕ್ಷರಾದ ಬಾಬು ಕೆ.ವಿ., ನಿರ್ದೇಶಕರಾದ ಡಾ.ಗೀತಪ್ರಕಾಶ್ ಎ., ರಾಘವ ಪೂಜಾರಿ, ರಮೇಶ್ ಕುಮಾರ್ ಪಿ., ಜಗದೀಶ್ ವಿ., ಅಭಿಜಿತ್ ಜೆ, ಸಂಜೀವ ಪೂಜಾರಿ ಎಂ., ಮಾಧವ ಪೂಜಾರಿ, ರವಿ ಬಿ.ಕೆ., ಶ್ರೀಧರ ಬಿ., ವನಿತಾ ಚಂದ್ರಹಾಸ, ಪುಷ್ಪಾ ಎಸ್., ಗೌರವ ಸಲಹೆಗಾರರಾದ ಚೆನ್ನಪ್ಪ ಪೂಜಾರಿ ಬಿ. ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಜಮಾ ಖರ್ಚಿನ ಬಗ್ಗೆ ಸಿಬ್ಬಂದಿ ನಿಶ್ಮಿತಾ ಎಸ್.ಡಿ. ಮಾಹಿತಿ ನೀಡಿದರು. ಲಾಭ ನಷ್ಟದ ತಃಖ್ತೆಯ ಬಗ್ಗೆ ಸಿಬ್ಬಂದಿ ಸಚಿತ್ ಕುಮಾರ್ ಮಾಹಿತಿ ನೀಡಿದರು. ಆಸ್ತಿ ಜವಾಬ್ದಾರಿ ತಃಖ್ತೆ ಬಗ್ಗೆ ಸಿಬ್ಬಂದಿ ಶ್ರೇಯಸ್ಸ್ ಮಾಹಿತಿ ನೀಡಿದರು. ಸಂಘದ ವ್ಯವಹಾರ ಮಾತು ಬೆಳವಣಿಗೆ ಬಗ್ಗೆ ನಿರ್ದೇಶಕರಾದ ಡಾ. ಗೀತಾ ಪ್ರಕಾಶ್ ಎ. ಮಾತನಾಡಿದರು. ಸಂಘದ ಉಪಾಧ್ಯಕ್ಷರಾದ ಬಾಬು ಕೆ.ವಿ. ಸ್ವಾಗತಿಸಿದರು. ಜಗನ್ನಾಥ ಎಸ್. ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಸಂಜೀವ ಪೂಜಾರಿ ಎಂ.ಎಸ್. ವಂದಿಸಿದರು.