ಪುತ್ತೂರು:ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಗೆ ರೋಟರಿ ಅಂತರಾಷ್ಟ್ರೀಯ ಸಂಸ್ಥೆಯ ಜಿಲ್ಲಾ ಗವರ್ನರ್ ರೊ. ವಿಕ್ರಂದತ್ತ ಅವರು ಸೆ.21ರಂದು ಅಧಿಕೃತ ಭೇಟಿ ನೀಡಿದರು.
ಶಾಲೆಗೆ ಸ್ಯಾನಿಟರಿ ಪ್ಯಾಡ್ ಬರ್ನಿಂಗ್ ಮಷೀನ್ ಹಾಗೂ ವಾಲಿಬಾಲ್ ಮತ್ತು ತ್ರೋಬಾಲ್ ಹಸ್ತಾಂತರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಜೀವನದಲ್ಲಿ ಶಿಸ್ತು ಮುಖ್ಯ. ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳೆ ಉತ್ತಮ ಬ್ಯಾಟರ್ ಆಗಿದ್ದರೂ ಶಿಸ್ತಿನ ಕೊರತೆಯಿಂದ ಕಾಂಬ್ಳೆ ಜೀವನದಲ್ಲಿ ಏನನ್ನು ಸಾಧಿಸದೆ ಹೋದರು. ಆದರೆ ಶಿಸ್ತು ಜೀವನದಲ್ಲಿ ಮೈಗೂಡಿಸಿಕೊಂಡ ತೆಂಡೂಲ್ಕರ್ ಅಪ್ರತಿಮ ಕ್ರಿಕೆಟಿಗನಾಗಿ ಪ್ರಸಿದ್ಧಿಯಾದರು ಎಂದರು.
ಕಾರ್ಯಕ್ರಮದಲ್ಲಿ ಬೀರಮಲೆ ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ರೋ ಕೃಷ್ಣಪ್ರಸಾದ್ ಆಳ್ವ, ಶರತ್ ಕುಮಾರ್ ರೈ, ವಂದನಾ ಶರತ್, ರೋ ವಿನಯ್ ಹಾಗೂ ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿ ಸಂಧ್ಯಾ ಸ್ವಾಗತಿಸಿ, ಮುಖ್ಯ ಗುರು ರಾಜೇಶ್ ಎನ್ ವಂದಿಸಿದರು. ಸಹ ಶಿಕ್ಷಕಿ ಶರ್ಮಿಳಾ ಕಾರ್ಯಕ್ರಮ ನಿರೂಪಿಸಿದರು.