8.12 ಲಕ್ಷ ರೂ. ಲಾಭ, ಶೇ.18 ಡಿವಿಡೆಂಡ್
ಉಪ್ಪಿನಂಗಡಿ: ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘವು 2023-24ನೇ ಸಾಲಿನಲ್ಲಿ 8,12,053.28 ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.18 ಡಿವಿಡೆಂಡ್ ನೀಡಲು ತೀರ್ಮಾನಿಸಿರುವುದಾಗಿ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ ಕಿಂಡೋವು ತಿಳಿಸಿದರು.
ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರದಲ್ಲಿ ನಡೆದ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 31 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ನಮ್ಮ ಸಂಘವು ವರದಿ ಸಾಲಿನಲ್ಲಿ 4,80,927.52 ಲೀ. ಹಾಲನ್ನು 1,69,55,724.76 ರೂ. ಮೌಲ್ಯಕ್ಕೆ ರೈತರಿಂದ ಖರೀದಿ ಮಾಡಿದ್ದು, 1,78,79,398.82 ರೂ. ಮೌಲ್ಯದ 4,82,868 ಕೆ.ಜಿ. ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಿದೆ. ಸ್ಥಳೀಯವಾಗಿ 12,720.50 ಲೀ. ಹಾಲನ್ನು 6,36,013.00 ರೂ.ಗೆ ಮಾರಾಟ ಮಾಡಿದೆ. ಅಲ್ಲದೇ, ಪಶು ಆಹಾರ, ಲವಣ ಮಿಶ್ರಣ ಸೇರಿದಂತೆ ಎಲ್ಲಾ ವ್ಯವಹಾರಗಳಿಂದ ಒಟ್ಟು 8,12,053.28 ರೂ. ನಿವ್ವಳ ಲಾಭ ಗಳಿಸಿದೆ. ಆಡಿಟ್ ವರ್ಗೀಕರಣದಲ್ಲಿ ಎ ಗ್ರೇಡ್ ಅನ್ನು ಪಡೆದಿದೆ. ಇದಕ್ಕೆ ಕಾರಣೀಕರ್ತರಾದ ಸಂಘದ ಸದಸ್ಯರು, ಆಡಳಿತ ಮಂಡಳಿ ಸದಸ್ಯರು, ಸೇವಾ ಮನೋಭಾವನೆಯಿಂದ ದುಡಿದ ಸಿಬ್ಬಂದಿ ವರ್ಗ, ಒಕ್ಕೂಟದ ಅಧಿಕಾರಿಗಳಿಗೂ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ವರದಿ ಸಾಲಿನಲ್ಲಿ ಸಂಘಕ್ಕೆ ಹಾಲು ಪೂರೈಕೆ ಮಾಡಿದವರಲ್ಲಿ ವಸಂತ ಕುಂಟಿನಿ ಪ್ರಥಮ ಸ್ಥಾನಿಯಾಗಿದ್ದರೆ, ಪರಮೇಶ್ವರ ಕಂಪ ದ್ವಿತೀಯ ಹಾಗೂ ಸದಾನಂದ ಶೆಟ್ಟಿ ಕಿಂಡೋವು ತೃತೀಯ ಸ್ಥಾನ ಪಡೆದಿರುವುದಾಗಿ ಸಭೆಯಲ್ಲಿ ಘೋಷಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಬೊಳ್ಳಾವು, ನಿರ್ದೇಶಕರಾದ ಪ್ರಶಾಂತ್ ಯು., ದೇರಣ್ಣ ಗೌಡ, ಬಾಲಚಂದ್ರ ಕೆ., ಧರ್ಣಪ್ಪ ನಾಯ್ಕ, ಸೇಸಪ್ಪ ಗೌಡ, ವಸಂತ ಕೆ., ಕೊರಗಪ್ಪ ಮುಗೇರ, ಸುಮತಿ, ವನಿತಾ ಉಪಸ್ಥಿತರಿದ್ದರು. ಸಭೆಯಲ್ಲಿ ಸಂಘದ ಸ್ಥಾಪಕಾಧ್ಯಕ್ಷ ಜಯಂತ ಪೊರೋಳಿ, ಸದಸ್ಯರಾದ ಶೀನಪ್ಪ ಗೌಡ ಬೊಳ್ಳಾವು, ಪುರುಷೋತ್ತಮ ಪೂಜಾರಿ ಗೌಂಡತ್ತಿಗೆ, ಉದಯ ಅತ್ರೆಮಜಲು, ಹರೀಶ್ ಪಟ್ಲ, ದುರ್ಗಾಪ್ರಸಾದ್, ರಮೇಶ್ ನೆಕ್ಕರೆ ಮತ್ತಿತರರು ಉಪಸ್ಥಿತರಿದ್ದರು.
ಶಂಕರ ನಾರಾಯಣ ಭಟ್ ಬೊಳ್ಳಾವು ಸ್ವಾಗತಿಸಿದರು. ಸಂಘದ ನಿರ್ದೇಶಕರಾದ ಎಂ. ಜಗದೀಶ್ ರಾವ್ ಮಣಿಕ್ಕಳ ಸ್ವಾಗತಿಸಿದರು. ವಿಶ್ವನಾಥ ಗೌಡ ವಂದಿಸಿದರು. ಕಾರ್ಯದರ್ಶಿ ಶ್ರೀಮತಿ ಮಧುಷಾ ವರದಿ ವಾಚಿಸಿದರು. ಹಾಲು ಪರೀಕ್ಷಕ ಸುರೇಶ್ ಜಿ. ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಚೆನ್ನಯ್ಯ ಪಿ., ಕೃತಕ ಗರ್ಭ ಕಾರ್ಯಕರ್ತ ಗಣೇಶ ಕೆ., ಬಿ.ಎಂ.ಸಿ. ಸಹಾಯಕ ವಿಶಾಂತ್ ಅತ್ರೆಮಜಲು ಸಹಕರಿಸಿದರು.