





ಪುತ್ತೂರು: ಕ್ಯಾಂಪ್ಕೊ ಆಡಳಿತ ಮಂಡಳಿಯ ಆರು ಸ್ಥಾನಗಳಿಗೆ ನ.23ರಂದು ಚುನಾವಣೆ ನಡೆದಿದ್ದು, ಇಂದು ಮತ ಏಣಿಕೆ ಪ್ರಕ್ರಿಯೆ ನಡೆಯಿತು.


ಸಹಕಾರ ಭಾರತಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಎಸ್ ಆರ್ ಸತೀಶ್ಚಂದ್ರ, ದಯಾನಂದ ಹೆಗ್ಡೆ, ಮಹೇಶ್ ಚೌಟ, ಪುರುಷೋತ್ತಮ್ ಭಟ್, ಎ.ವಿ ತೀರ್ಥರಾಮ, ಮುರಳಿಕೃಷ್ಣ ಚಳ್ಳಂಗಾರು ಜಯಗಳಿಸಿದ್ದಾರೆ.





ಈಗಾಗಲೇ ಕೇರಳ ರಾಜ್ಯದಿಂದ 9 ಜನ ಅವಿರೋಧ ಆಯ್ಕೆಯಾಗಿದ್ದು, ಕರ್ನಾಟಕದಿಂದ ಹತ್ತು ಸ್ಥಾನಗಳ ಪೈಕಿ ಆರು ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಅಭ್ಯರ್ಥಿಗಳು ಪಡೆದ ಮತಗಳ ವಿವರ
ದಯಾನಂದ ಹೆಗ್ಡೆ -21632
ಮಹೇಶ್ ಚೌಟ -22163
ಮುರಳಿ ಕೃಷ್ಣ- 22614
ಪುರುಷೋತ್ತಮ ಭಟ್ -22495
ಸತೀಶ್ಚಂದ್ರ – 21816
ತೀರ್ಥರಾಮ -20527
ರಾಮ್ ಪ್ರತೀಕ್ – 6348
ಎಂ.ಜಿ ಸತ್ಯ ನಾರಾಯಣ – 620










