ಅ.3ರಿಂದ 11 ಪುಣಚ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

ಪುಣಚ : ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಅ.3ರಿಂದ ಪ್ರಾರಂಭಗೊಂಡು ಅ.11ರವರೆಗೆ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅ.11ರಂದು ವಿಶೇಷವಾಗಿ ಬೆಳಿಗ್ಗೆ ಚಂಡಿಕಾ ಹೋಮ, ಊರ ಭಕ್ತಾದಿಗಳಿಂದ ಬಲಿವಾಡು ಕೂಟ, ಮಹಾಪೂಜೆ, ಅನ್ನಸಂತರ್ಪಣೆ ನಡೆದು ರಾತ್ರಿ ಭಜನೆ, ರಂಗಪೂಜೆ ಪ್ರಸಾದ ವಿತರಣೆ ನಡೆಯಲಿರುವುದು.


ಉತ್ಸವದಲ್ಲಿ ಪ್ರತಿ ದಿನ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಭಜನೆ, ರಂಗಪೂಜೆ ನಡೆಯಲಿದೆ.
ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಮಧ್ಯಾಹ್ನದ ಅನ್ನದಾನ ಹಾಗೂ ರಂಗಪೂಜೆ ಸೇವೆ ನಡೆಯುತ್ತಿದ್ದು ಅ.3ರಂದು ಬೈಲುಗುತ್ತು ಕುಟುಂಬಸ್ಥರು, ಅ.4ರಂದು ಕೋಡಂದೂರು ಸದಾಶಿವ ಅಡ್ಯಂತಾಯ ಮತ್ತು ಕುಟುಂಬಸ್ಥರು, ಅ.5ರಂದು ದಿ.ಮೋನಪ್ಪ ರೈ, ಪತ್ನಿ ಮತ್ತು ಮಕ್ಕಳು ಪರಿಯಾಲುಗುತ್ತು, ಅ.6ರಂದು ಶಿವಣ್ಣ ನಾಯಕ್ ಪುಣಚ ಮತ್ತು ಕುಟುಂಬಸ್ಥರು, ಅ.7ರಂದು ದಲ್ಕಾಜೆಗುತ್ತು ಕುಟುಂಬಸ್ಥರು, ಅ.8ರಂದು ದೊಡ್ಡಮನೆ ಕುಟುಂಬಸ್ಥರು, ಅ.೯ರಂದು ಮಣಿಲ ಶಾಸ್ತ್ರಿ ಮನೆಯವರು, ಅ.10ರಂದು ಪುಣಚ ದಿ.ವೆಂಕಟರಮಣ ಬನ್ನಿಂತಾಯರ ಸ್ಮರಣಾರ್ಥ ಮಕ್ಕಳ ಸೇವಾ ರೂಪದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here