ಹಿರಿಯ ನಾಟಕ ಕಲಾವಿದ ಸೇಸಪ್ಪ ಪೂಜಾರಿ ನರಿಮೊಗರು ನಿಧನ

0

ಪುತ್ತೂರು: ಹಿರಿಯ ನಾಟಕ ಕಲಾವಿದ ನರಿಮೊಗರು ನಿವಾಸಿ ಸೇಸಪ್ಪ ಪೂಜಾರಿ(55.ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಅ.1ರಂದು ರಾತ್ರಿ ನಿಧಿನರಾಗಿದ್ದಾರೆ.


ಮೂಲತಃ ಬಂಟ್ವಾಳ ತಾಲೂಕಿನ ಅನಂತಾಡಿ ನಿವಾಸಿಯಾಗಿರುವ ಸೇಸಪ್ಪ ಪೂಜಾರಿ ಅವರು ಅನೇಕ ವರ್ಷಗಳಿಂದ ನರಿಮೊಗರಿನಲ್ಲಿ ವಾಸವಾಗಿದ್ದಾರೆ. ಪುರುಷರಕಟ್ಟೆಯಲ್ಲಿ ‘ಅನ್ನಪೂರ್ಣ’ ಹೆಸರಿನ ಹೋಟೆಲ್ ನಡೆಸುತ್ತಿದ್ದ ಅವರು ಸ್ಥಳೀಯವಾಗಿ ಜನಾನುರಾಗಿಯಾಗಿದ್ದರು.

ನಾಟಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಸೇಸಪ್ಪ ಪೂಜಾರಿಯವರು ಕಿರು ಚಿತ್ರಗಳಲ್ಲೂ ನಟಿಸಿದ್ದರು. ರವಿಚಂದ್ರ ಮುಂಡೂರು ನಿರ್ದೇಶನದ ‘ಬದುಕು’ ಕಿರುಚಿತ್ರದಲ್ಲಿ ನಟಿಸಿದ್ದ ಇವರು ತುಳುನಾಡ ಮಾಣಿಕ್ಯ ಖ್ಯಾತಿಯ ಅರವಿಂದ ಬೋಳಾರ್ ಜೊತೆಯೂ ನಟಿಸಿದ್ದರು. ‘ಬಂಗಾರ್ ಕಲಾವಿದೆರ್ ಪುರುಷರಕಟ್ಟೆ’ ನಾಟಕ ತಂಡದ ಸದಸ್ಯರಾಗಿದ್ದ ಇವರು ಉಮಾಮಹೇಶ್ವರ ಭಜನಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಬೇಬಿ, ಪುತ್ರ ರಕ್ಷಿತ್ ಹಾಗೂ ಪುತ್ರಿ ದೀಪಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here