ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಗಣಪತಿ ಹವನ, ಶಾರದಾ ಪೂಜೆ, ಆಯುಧ ಪೂಜೆ ಮತ್ತು ವಾಹನ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಸಂಸ್ಥೆಯ ಕೋಶಾಧಿಕಾರಿ ಉದಯ ರೈ ಮಾದೋಡಿ, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ನಾಗೇಶ್ ರೈ ಮಾಳ ಟ್ರಸ್ಟಿಗಳಾದ ವೃಂದಾ ಜೆ ರೈ, ದೇವಿಕಿರಣ್ ರೈ ಮಾದೋಡಿ, ಹರಿಚರಣ್ ರೈ ಮಾದೋಡಿ, ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಜ್ಞಾನೇಶ್ವರಿ ಬರಪ್ಪಾಡಿ, ಮುಖ್ಯಗುರುಗಳು ಎಲ್ಲಾ ಶಿಕ್ಷಕ- ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು. ಅರ್ಚಕ ಪ್ರಶಾಂತ್ ಭಟ್ ಕಟ್ಟತ್ತಾರು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದ ವಿಶೇಷ ಅಂಗವಾಗಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಶಂಖನಾದ ಸ್ಪರ್ಧೆಯು ನಡೆಯಿತು. ಬಾಲಶಾರದೆಯ ವೇಷಧಾರಿಗಳಾಗಿ ರಿಷಿಕಾ (1ನೇ), ತನ್ವಿ (3ನೇ), ಅಮೋಘ ರೈ(10 ನೇ) ಭಕ್ತಿ ಭಾವದಿಂದ ಕಂಗೊಳಿಸಿದರು. 10 ನೇ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ನವದುರ್ಗೆಯರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಸಭಾಂಗಣವೆಲ್ಲ ಶಾರದೆಯ ಭಾವಚಿತ್ರದಿಂದ ಕಂಗೊಳಿಸುತ್ತಿತ್ತು. ಯು ಕೆ ಜಿ ಪುಟಾಣಿಗಳು ತಮ್ಮ ಪುಟ್ಟ ಪುಟ್ಟ ಹೆಜ್ಜೆಗಳಿಂದ ಕುಣಿತ ಭಜನೆ ಮಾಡಿರುವುದು ಆಕರ್ಷಣೀಯವಾಗಿತ್ತು.