ಪುತ್ತೂರು: ನೋವಾ ಐವಿಎಫ್ ಫರ್ಟಿಲಿಟಿ ಇದರ ನೇತೃತ್ವದಲ್ಲಿ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಉಚಿತ ಬಂಜೆತನ ತಪಾಸಣಾ ಶಿಬಿರವು ಅ.5 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಿತು.
ಬಂಜೆತನ ಎನ್ನುವುದು ಚಿಕಿತ್ಸೆ ನೀಡಬಹುದಾದ ಮತ್ತೊಂದು ವಿಧದ ವೈದ್ಯಕೀಯ ಸ್ಥಿತಿಯಾಗಿದೆ. ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಗರ್ಭ ಧರಿಸಲು ಪ್ರಯತ್ನಿಸುತ್ತಿದ್ದರೆ, ಅನೇಕ ಬಾರಿ ಗರ್ಭಪಾತವಾಗಿದ್ದರೆ, ಅನೇಕ ಐಯುಐ ಅಥವಾ ಐವಿಎಫ್ ವೈಫಲ್ಯತೆ ಹೊಂದಿದ್ದರೆ, ವರದಿಗಳು ಸಾಮಾನ್ಯವಾಗಿದ್ದರೂ ಗರ್ಭ ಧರಿಸಲು ಅಸಾಧ್ಯವಾಗಿದ್ದರೆ,ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು ಅಥವಾ ವೀರ್ಯಾಣು ಇಲ್ಲದಿರುವುದು, ಪಿಸಿಓಎಸ್ ಸಮಸ್ಯೆ, ಫೆಲೋಪಿಯನ್ ನಾಳದಲ್ಲಿ ಅಡಚಣೆ, ಎಂಡೋಮೀಟ್ರಿಯಾಸಿಸ್ ಅಥವಾ ಗರ್ಭಾಶಯದ ಫೈಬ್ರಾಯ್ಡ್‌ನಂತಹ ಸಮಸ್ಯೆಯಿದ್ದ ಫಲಾನುಭವಿಗಳಿಗೆ ನೋವಾ ಐವಿಎಫ್ ಫರ್ಟಿಲಿಟಿ ಇಲ್ಲಿನ ತಜ್ಞರಾದ ಡಾ.ಶವೀಝ್ ಫೈಝಿರವರು ಸಲಹೆಗಾರರಾಗಿ ಈ ತಪಾಸಣೆ ನಡೆಸಿ ಸೂಕ್ತ ಸಲಹೆಯನ್ನು ನೀಡಿದರು. ಸಂಸ್ಥೆಯ ಸಮಾಲೋಚಕರಾದ ಹರ್ಷ ಹಾಗೂ ಗೌತಮ್ ರವರು ಉಪಸ್ಥಿತರಿದ್ದರು.