ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ರಾಷ್ಟ್ರಮಟ್ಟದಲ್ಲಿ ಅಮೋಘ ಸಾಧನೆ

0

ವಿದ್ಯಾಭಾರತಿ ಈಜು ಸ್ಪರ್ಧೆಯಲ್ಲಿ ವಿಜೇತರಾಗಿ ಎಸ್.ಜಿ.ಎಫ್.ಐ ಗೆ ಆಯ್ಕೆ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯ ವಿದ್ಯಾರ್ಥಿಗಳು ಮಧ್ಯಪ್ರದೇಶದ ಮಂಡ್ಸೂರ್ ಸರಸ್ವತಿ ಸೈನಿಕ ಶಾಲೆಯಲ್ಲಿ ಸೆಪ್ಟೆಂಬರ್ 1ರಿಂದ 4 ರವರೆಗೆ ನಡೆದ ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮುಂದಿನ ಹಂತ ಎಸ್. ಜಿ. ಎಫ್. ಐ (ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ) ಗೆ ಆಯ್ಕೆಗೊಂಡಿದ್ದಾರೆ.


ಪುತ್ತೂರಿನ ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ ಹಾಗೂ ವಜ್ರಾಕ್ಷಿ ಡಿ. ರೈ ದಂಪತಿಗಳ ಪುತ್ರ, 10ನೇ ತರಗತಿಯ ವರ್ಧಿನ್ ದೀಪಕ್ ರೈ 50 ಮೀಟರ್ ಬಟರ್ಫ್ಲೈ ಯಲ್ಲಿ ಚಿನ್ನ, 50 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಹಾಗೂ 100 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಪರ್ಲಡ್ಕದ ಲತಾ ಚಿಕ್ಕಪುತ್ತೂರು ಅವರ ಪುತ್ರ, 6ನೇ ತರಗತಿಯ ಪ್ರತ್ಯುಪ್ ಎಲ್.ಎಸ್ ಗೌಡ 50 ಮೀಟರ್ ಬ್ಯಾಕ್‌ಸ್ಟ್ರೋಕ್ ನಲ್ಲಿ ಚಿನ್ನ, 50 ಮೀಟರ್ ಬಟರ್ಫ್ಲೈ ನಲ್ಲಿ ಕಂಚು ಮತ್ತು 4×1೦೦ಮೀಟರ್ ಮೆಡ್ಲೇ ರಿಲೇಯಲ್ಲಿ ಚಿನ್ನ ಪಡೆದಿದ್ದಾರೆ. ಪುತ್ತೂರಿನ ಕೊಠಾರಿ ರವಿಕುಮಾರ್ ತುಳಸಿದಾಸ್ ಹಾಗೂ ಕೊಠಾರಿ ಲಕ್ಷ್ಮೀಬೆನ್ ರವಿಕುಮಾರ್ ದಂಪತಿ ಪುತ್ರಿ, 8ನೇ ತರಗತಿಯ ಮೆಹೆಕ್ ರವಿಕುಮಾರ್ ಕೊಠಾರಿ 100 ಮೀಟರ್ ಬ್ಯಾಕ್‌ಸ್ಟ್ರೋಕ್ ನಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ.


ಈ ಎಲ್ಲಾ ವಿದ್ಯಾರ್ಥಿಗಳು ನವೆಂಬರ್ ತಿಂಗಳಲ್ಲಿ ಗುಜರಾತ್‌ನ ರಾಜಕೋಟ್‌ನಲ್ಲಿ ನಡೆಯುವ ಮುಂದಿನ ಹಂತದ ಎಸ್.ಜಿ.ಎಫ್.ಐ (ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ) ಮೀಟ್‌ನಲ್ಲಿ ಭಾಗವಾಹಿಸಲಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ. ವಿದ್ಯಾರ್ಥಿಗಳು ಪುತ್ತೂರು ಬಾಲವನದ ಈಜು ತರಬೇತುದಾರರಾದ ಪಾರ್ಥ ವಾರಣಾಸಿ ಹಾಗೂ ದೀಕ್ಷಿತ್ ರಾವ್ ಇವರಿಂದ ಈಜು ತರಬೇತಿ ಪಡೆದು ಕೊಂಡಿರುತ್ತಾರೆ.

LEAVE A REPLY

Please enter your comment!
Please enter your name here