ಒಡಿಯೂರು ಸಂಸ್ಥಾನದಲ್ಲಿ ಶ್ರೀ ಲಲಿತಾ ಪಂಚಮಿ ಮಹೋತ್ಸವ- ಶ್ರೀ ಚಂಡಿಕಾಯಾಗ – ಒಡಿಯೂರು ಶ್ರೀ  ಕಲಾಸಿರಿ ಪ್ರಶಸ್ತಿ ಪ್ರದಾನ

0

ನಂಬಿಕೆ – ನಡವಳಿಕೆ ಜೊತೆಯಾಗಿ ಸಾಗಬೇಕು: ಒಡಿಯೂರು ಶ್ರೀ

ವಿಟ್ಲ:  ನವರಾತ್ರಿಯ ಪರ್ವ ಕಾಲದಲ್ಲಿ ನಾವಿದ್ದೇವೆ. ಕಲಾವಿದರಲ್ಲಿ ಅಡಗಿರುವ ಕಲೆಯನ್ನು ಅನಾವರಣಗೊಳಿಸುವ ಪ್ರಯತ್ನ ಪ್ರಶಸ್ತಿ ಪ್ರದಾನದಲ್ಲಿ ನಡೆಯುತ್ತಿದೆ. ಈಗಿನ ಕಾಲಘಟ್ಟದಲ್ಲಿ ಕಲಾ ಸೇವೆ ಕ್ಷೀಣವಾಗುತ್ತಿದೆ. ನಾವು ಮಾಡಿದ ಧಾನ,ಧರ್ಮ, ಸತ್ಕಾರ್ಯ ನಮ್ಮನ್ನು ಕಾಪಾಡುತ್ತದೆ. ಹೃದಯ ಬಾಷೆಯ ಅರಿವು ನಮ್ಮಲ್ಲಿರಬೇಕು. ಹೃದಯದ ಬಾಷೆಯಿಂದ ಭಗವಂತನ ಅನುಸಂದಾನ ಸಾಧ್ಯ ಎಂದು ಒಡಿಯೂರು‌ ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು. 

ಅವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಅ.7ರಂದು ನಡೆದ  ಶ್ರೀ ಲಲಿತಾ ಪಂಚಮಿ ಮಹೋತ್ಸವ – ಶ್ರೀ ಚಂಡಿಕಾ ಯಾಗ‌ ಹಾಗೂ ಕಲಾಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

 ವಚನ‌ ಕ್ಷೀಣವಾಗುತ್ತಿದೆ ಆದರೆ ವಚನದ ಸಾರ ಇನ್ನೂ ಬಲಿಷ್ಠವಾಗಿದೆ. ಬಾಷೆ ಯಾವುದಾದರೂ ಪ್ರೀತಿ ಭಾವ ನಮ್ಮಲ್ಲಿರಲಿ. ಧ್ವೇ಼ಷ ಭಾವ ಕಡಿಮೆಯಾಗಲು ಪ್ರೀತಿ ಭಾವ ಹೆಚ್ಚಾಗಬೇಕು. ಮಾನವೀಯತೆ ಕಡಿಮೆಯಾಗುತ್ತಿದ್ದು, ಅದನ್ನು‌ ಉಳಿಸುವ  ಕಾರ್ಯವಾಗಬೇಕು. ಧರ್ಮ ಶ್ರದ್ದೆಯೊಂದಿಗೆ ದೇಶ ಕಟ್ಟುವ ಕೆಲಸ ಮಾಡೋಣ. ನಾವೆಲ್ಲರೂ ವಿಜಯಿಗಳಾಗಬೇಕು. ಭಾರತ, ಭಾರತೀಯತೆ ನಾಶವಾಗದೆ ಇರುವಂತದ್ದು. ನವರಾತ್ರಿ ಸಂದರ್ಭದಲ್ಲಿ ನಮ್ಮ ಅಂತರಂಗದ ರಾಕ್ಷಸೀ ಪ್ರವೃತ್ತಿಯನ್ನು ದೂರೀಕರಿಸಿಕೊಳ್ಳಬೇಕು. ಕಲಾವಿದರನ್ನು ಗೌರವಿಸುವ ಕೆಲಸ ಕ್ಷೇತ್ರದಿಂದ ನಿರಂತರವಾಗಿ ಆಗುತ್ತಿದೆ.  ಮಾನವೀಯತೆಯ ಪಾಠ ಮನೆಯಿಂದಲೇ ಆರಂಭವಾಗಬೇಕು ಎಂದರು.

ಸಾಧ್ವಿ ಶ್ರೀ ಮಾತಾನಂದಮಯೀರವರು ದಿವ್ಯ ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ  ಖ್ಯಾತ ಯಕ್ಷಗಾನ ಭಾಗವತರಾದ ದಿನೇಶ್ ಅಮ್ಮಣ್ಣಯ್ಯ, ಕರ್ನಾಟಕ ‘ಕಲಾಶ್ರೀ’ ಪ್ರಶಸ್ತಿ ಪುರಸ್ಕೃತ ವಿದುಷಿ  ಗೀತಾ ಸರಳಾಯ ಮಂಗಳೂರು, ತುಳು ರಂಗಭೂಮಿ ಕಲಾವಿದ ದೀಪಕ್ ರೈ ಪಾಣಾಜೆ,  ನಾಗಸ್ವರ ವಾದಕರಾದ ರಮೇಶ್ ಜೋಗಿ ರವರಿಗೆ ಒಡಿಯೂರು ಶ್ರೀ ಕಲಾಸಿರಿ ಪ್ರಶಸ್ತಿ ಪ್ರದಾನ ನಡೆಯಿತು. ಜಿಲ್ಲಾ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಒಡಿಯೂರು ಶ್ರೀ ಗುರುದೇವ ಆಂಗ್ಲ  ಮಾಧ್ಯಮ ಶಾಲಾ 7ನೇ ತರಗತಿ ವಿದ್ಯಾರ್ಥಿ  ಪ್ರಣವ್  ರವರಿಗೆ ಬಾಲ ಪ್ರತಿಭೆ ಪುರಸ್ಕಾರ ನೀಡಿ‌ ಗೌರವಿಸಲಾಯಿತು.

ಉದ್ಯಮಿ ವಾಮಯ್ಯ ಬಿ. ಶೆಟ್ಟಿ ಮುಂಬೈ,  ರೇವತೀ ಮಾವಯ್ಯ ಶೆಟ್ಟಿ, ಡಾ. ಅದೀತ್ ಕೆ. ಶೆಟ್ಟಿ ಮುಂಬೈ,  ಮುಳಿಯ ಶಂಕರ ಭಟ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಯಶವಂತ ವಿಟ್ಲ ಸ್ವಾಗತಿಸಿದರು. ಮಾತೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕರಾದ ಗಣಪತಿ ಭಟ್ ಸೇರಾಜೆ ವಂದಿಸಿದರು

ವೈದ್ಧಿಕ ಕಾರ್ಯಕ್ರಮ: 
ಬೆಳಿಗ್ಗೆ 9ರಿಂದ ಗಣಪತಿ ಹವನ, ಬಳಿಕ ಶ್ರೀ ಚಂಡಿಕಾಯಾಗ ಆರಂಭಗೊಂಡಿದೆ.ಮಧ್ಯಾಹ್ನ 12..30ಕ್ಕೆ ಚಂಡಿಕಾ ಯಾಗದ ಪೂರ್ಣಾಹುತಿಗೊಂಡಿತು, ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ಬಳಿಕ ಮಹಾಸಂತರ್ಪಣೆ ನಡೆಯಿತು. 

LEAVE A REPLY

Please enter your comment!
Please enter your name here