ಅಂಬಟೆಮೂಲೆ ಪುಳಿತ್ತಡಿ ಜಿ.ಪಂ ರಸ್ತೆ ಸಂಪರ್ಕ ಕಡಿತದ ಭೀತಿ

0

ಬಡಗನ್ನೂರು: ಅಂಬಟೆಮೂಲೆ ಪುಳಿತ್ತಡಿ ಜಿ.ಪಂ ರಸ್ತೆಯ ಮುಗುಳಿ ಎಂಬಲ್ಲಿ ಅ.5ರಂದು ಸುರಿದ ಭಾರಿ ಮಳೆಗೆ ರಸ್ತೆ ಕುಸಿದು ಬಿದ್ದು ವಾಹನ ಸಂಚಾರ ಅಡಚಣೆ ಉಂಟಾಗಿದೆ. ರಸ್ತೆ ಒಂದು ಭಾಗದಲ್ಲಿ ಕುಸಿದು ಬಿದ್ದು ಅದೇ ಭಾಗದಲ್ಲಿ ದೊಡ್ಡ ಗಾತ್ರದ ಬಿರುಕು ಉಂಟಾಗಿದ್ದು ದೊಡ್ಡ ಗಾತ್ರದ ವಾಹನ ಸಂಚಾರಕ್ಕೆ ಕಷ್ಟಕರ ಸಮಸ್ಯೆ ಎದುರಾಗಿದೆ. ಈ ರಸ್ತೆ ಅಗಲ ಕಿರಿದಾಗಿದ್ದು ಒಂದು ವಾಹನ ಸಂಚಾರಕ್ಕೂ ಕಷ್ಟಕರವಾಗಿದೆ. 

ರಸ್ತೆಗೆ ತಡೆಗೊಡೆ ನಿರ್ಮಾಣ ಆಗಿಲ್ಲ
ರಸ್ತೆ ಪಕ್ಷದಲ್ಲಿ ಹೊಳೆ ಹರಿದು ಹೋಗುವುದರಿಂದ ಮಳೆಗಾಲದಲ್ಲಿ  ಹೊಳೆ ತುಂಬಿ ಹರಿದು ರಸ್ತೆಯ ಅಡಿಭಾಗದ ಮಣ್ಣು ಕೊರೆದು ರಸ್ತೆ ಕುಸಿದು ಬಿದ್ದದೆ. ಹಲವು ವರ್ಷಗಳಿಂದ ಈ ಭಾಗದಲ್ಲಿ ರಸ್ತೆಗೆ ತಡೆಗೋಡೆ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಸಲ್ಲಿಸುತ್ತಾ ಬರುತ್ತಿದ್ದರೂ ಯಾವುದೇ ಇಲಾಖಾಧಿಕಾರಿಗಳಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದನೆ ನೀಡಿಲ್ಲ ಎಂಬುದು ಈ ಭಾಗದ ಜನರ ಮನದಾಳದ ನೋವು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳದೆ ಹೋದಲ್ಲಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಉದ್ಭವಿಸಲಿದೆ ಈ ಬಗ್ಗೆ ಗಮನಿಸಿ ಸಂಬಂಧ ಪಟ್ಟ ಇಲಾಖಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here