





ಪುತ್ತೂರು: ಶಾರದಾ ಭಜನಾ ಮಂದಿರದ 90ನೇ ವರ್ಷದ ಶಾರದೋತ್ಸವ ಸಂದರ್ಭದಲ್ಲಿ ಅಕ್ಷರ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ವಿನಾಯಕ ಭಟ್ ಗಾಳಿಮನೆ ‘ಅಕ್ಷರ ಯಜ್ಞ’ದ ಕುರಿತು ಮಾತನಾಡಿ, ಸನಾತನ ಧರ್ಮದಲ್ಲಿ ಶ್ರೇಷ್ಠವಾದ ಜ್ಞಾನ ಯಜ್ಞ ಅತ್ಯಂತ ಫಲಪ್ರದವಾದದ್ದು ಅಕ್ಷರ ಯಜ್ಞದ ಸಂಕಲ್ಪದಿಂದ ನಮ್ಮಲ್ಲಿರುವ ವಿದ್ಯೆ ವಿನಯ ಸಮೃದ್ಧಿಯಾಗವುದು ಎಂದರು.
ಪುರಾಣಗಳಲ್ಲಿ ಉಲ್ಲೇಖಿಸಲಾದ ಜ್ಞಾನ ಯಜ್ಞದ ಮಹತ್ವವನ್ನು ತಿಳಿಸಿದರು. ಮಂದಿರದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್ ಅಧ್ಯಕ್ಷತೆ ವಹಿಸಿದ್ರುದ. ಶಾರದಾ ಭಜನಾ ಮಂದಿರದ ಗೌರವಾಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೈಷ್ಣವಿ ಜೆ. ರಾವ್ ಕಾರ್ಯಕ್ರಮ ನಿರೂಪಿಸಿದರು.











