ಆಧುನಿಕ ಕೃಷಿ ಉಪಕರಣಗಳ ಖರೀದಿಗೆ ಶೇ.45 ರಿಯಾಯಿತಿ… – ದರ್ಬೆ ಇಕೋ ಫ್ರೆಶ್ ಎಂಟರ್‌ಪ್ರೈಸಸ್ ವತಿಯಿಂದ ಹಬ್ಬದ ಕೊಡುಗೆ…

0

ಪುತ್ತೂರು: ಆಧುನಿಕ ಕೃಷಿ, ಹೈನುಗಾರಿಕೆ, ಗೃಹ, ಹೊಟೇಲ್ ಮತ್ತು ಬೇಕರಿಗಳಿಗೆ ಸಂಬಂಧಿಸಿದ ಹಲವು ಬಗೆಯ ಆಧುನಿಕ ರೀತಿಯ ಯಂತ್ರೋಪಕರಣಗಳು, ಪವರ್ ಟೂಲ್ಸ್ ಹಾಗೂ ಜನರೇಟರ್‌ಗಳ ಮಾರಾಟ ಮತ್ತು ಸೇವಾ ಮಳಿಗೆ ಇಲ್ಲಿನ ದರ್ಬೆ ಹಿತ ಆಸ್ಪತ್ರೆ ಇದರ ಮುಂಭಾಗದಲ್ಲಿರುವ ಇಕೋ ಫ್ರೆಶ್ ಎಂಟರ್‌ಪ್ರೈಸಸ್’ನಲ್ಲಿ ನಾಡಹಬ್ಬ ದಸರಾ ಹಾಗೂ ಬೆಳಕಿನ ಹಬ್ಬ ದೀಪಾವಳಿ ಸಲುವಾಗಿ ಕೃಷಿ ವರ್ಗಕ್ಕೆ ಅಚ್ಚರಿಯ ಕೊಡುಗೆಗಳನ್ನು ಘೋಷಣೆ ಮಾಡಿದ್ದು, ಕೃಷಿಕರಿಗೆ ಮತ್ತೊಮ್ಮೆ ಸಿಹಿ ಸುದ್ದಿಯನ್ನು ನೀಡಿದೆ.


ಕಳೆದ 12 ವರ್ಷಗಳಿಂದ ಬೆಳ್ತಂಗಡಿಯಲ್ಲಿ ಪ್ರಾರಂಭಗೊಂಡಿರುವ ಇಕೋ ಫ್ರೆಶ್ ಎಂಟರ್‌ಪ್ರೈಸಸ್ ಗ್ರಾಮೀಣ ಪ್ರದೇಶದ ಕೃಷಿಕರಿಗೆ ಗುಣಮಟ್ಟದ ವಿವಿಧ ಯಂತ್ರೋಪಕರಣಗಳನ್ನು ರಿಯಾಯಿತಿ ದರದಲ್ಲಿ ಪೂರೈಸಿ, ಕೃಷಿಕರ ಆರ್ಥಿಕ ಚೈತನ್ಯಕ್ಕೆ ಪ್ರೋತ್ಸಾಹ ನೀಡುವಲ್ಲೂ ಕೂಡಾ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ರೈತ ವರ್ಗದ ನಂಬಿಕೆ, ವಿಶ್ವಾಸ ಗಳಿಸಿಕೊಂಡು, ಇದೀಗ ಪುತ್ತೂರಿನಲ್ಲೂ ತನ್ನ ಶಾಖೆಯೊಂದನ್ನು ತೆರೆದು, ಕಳೆದ ಮೂರು ವರ್ಷಗಳಿಂದ ಗ್ರಾಹಕ ಜನತೆಯ ಹೆಚ್ಚು ವಿಶ್ವಾಸಾರ್ಹ ಸಂಸ್ಥೆಯಾಗಿ ಹೆಸರು ಗಳಿಸಿಕೊಂಡಿದೆ.


ಇದೀಗ ಹಬ್ಬಗಳ ಸಂಭ್ರಮಕ್ಕೆ ಸಂಸ್ಥೆಯೂ ಹೆಸರಾಂತ ಹಸ್ಕ್ವರ್ನಾ ಕಂಪನಿಯ ಕೃಷಿ ಯಂತ್ರೋಪಕರಣಗಳ ಮೇಲೆ ಸುಮಾರು ಶೇಕಡಾ 45 ರಷ್ಷು ರಿಯಾಯಿತಿ ಘೋಷಣೆ ಮಾಡಿದೆ ಹಾಗೂ ಸಬ್ಸಿಡಿ ದರದಲ್ಲೂ ಕೂಡ ಹಲವಾರು ಕಂಪನಿಯ ಯಂತ್ರೋಪಕರಣಗಳು ಕೂಡ ಮಳಿಗೆಯಲ್ಲಿ ಲಭ್ಯವಿದೆ.
ಹಸ್ಕ್ವರ್ನಾ ಉತ್ಪನ್ನಗಳು ನವೀನ ವಿನ್ಯಾಸ ಹಾಗೂ ವಿನೂತನ ತಂತ್ರಜ್ಞಾನದೊಂದಿಗೆ ತಯಾರುಗೊಂಡಿದ್ದು , ಒಂದು ವರುಷದ ಗ್ಯಾರಂಟಿಯೂ ಕೂಡ ಸಿಗಲಿದೆ.
ಮಳಿಗೆಯಲ್ಲಿ ಹುಲ್ಲು ತೆಗೆಯುವ ಯಂತ್ರ ,ಮರ ಕತ್ತರಿಸುವ ಯಂತ್ರ ಸ್ಪ್ರೇಯರ್ ,ಬ್ಯಾಕ್ ಪ್ಯಾಕ್ ಸ್ಪ್ರೇಯರ್, ನೀರೆತ್ತುವ ಪಂಪ್, ಲಾನ್ ಮೂವರ್, ಬ್ಲೋವರ್ ಹಾಗೂ ಗುಂಡಿ ತೆಗೆಯುವ ಯಂತ್ರೋಪಕರಣಗಳು ಅತ್ಯುತ್ತಮ ದರದಲ್ಲಿ ಲಭ್ಯವಿದೆ.
ಇಷ್ಟೇಯಲ್ಲದೇ ಮಳಿಗೆಯಲ್ಲಿ ಮಾರಾಟದ ಬಳಿಕದ ಸೇವೆಯೂ ಕೂಡ ಲಭ್ಯವಿದ್ದು, ಕೃಷಿಕರು ಇವೆಲ್ಲಾದರ ಲಾಭ ಪಡೆಯುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9113959854 ಕರೆ ಮಾಡಬಹುದು.

LEAVE A REPLY

Please enter your comment!
Please enter your name here